Kushtagi ತಾಲೂಕು ಗುಡಿ ಕರಕೇರಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಯಶಸ್ವಿ

AD

 


ಕುಷ್ಟಗಿ ತಾಲೂಕು ಗುಡಿ ಕರಕೇರಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಯಶಸ್ವಿ

 ಕುಷ್ಟಗಿ :ತಾಲೂಕಿನ ಗುಡಿ ಕಲಿಕೇರಿ ಗ್ರಾಮದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನೇಕ ಭಕ್ತರನ್ನು ಹೊಂದಿದಂತ ಶ್ರೀ ಕ್ಷೇತ್ರ ಗುಡಿ ಕಲಕೇರಿ ವೀರಭದ್ರೇಶ್ವರ ಕ್ಷೇತ್ರ ಪ್ರತಿವರ್ಷದಂತೆ ಈ ವರ್ಷವೂ ಕೂಡ ಯುಗಾದಿ ಅಮಾವಾಸ್ಯೆ ಒಂದು ದಿನ ಮುಂಚಿತವಾಗಿ ನಡೆಯುವ ಈ ಜಾತ್ರೆ ಸೋಮವಾರ ಯಶಸ್ವಿಯಾಗಿ ನಡೆಯಿತು ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ನೂತನ ಗೋಪುರ ಕಳಸಾರೋಹಣ ನುರಿತ ಪುರವಂತರಿಂದ ಭಕ್ತಿಯ ಪ್ರಧಾನ ಒಡಪುಗಳು ಗಂಗೆಯ ಪೂಜಾ ಹೋಮ ಹಾಗೂ ಅಯ್ಯಾಚಾರ ವಿವಿಧ ಧಾರ್ಮಿಕ  ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು ಶ್ರೀ ಷಡಕ್ಷರಿ ಬ್ರಹ್ಮ ಚಳಗೇರಿ ಮಠದ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಂಡು ಬಂದಂತ ಭಕ್ತರಿಗೆ ಭಕ್ತಿಯ ಆಶೀರ್ವಚನ ನೀಡಿದರು ಶ್ರೀ ಶರಣಯ್ಯ ಸ್ವಾಮಿ ಬನಿಗೋಳ ಮಠ ಶ್ರೀ ಅಮರಯ್ಯ ಸ್ವಾಮಿ ಹಾಗೂ ವೀರಯ್ಯಸ್ವಾಮಿ ಇವರ ಒಂದು ಅಮೃತ ಅಸ್ತದಿಂದ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಒಂದು ಜಾತ್ರೆ ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಹಾಗೂ ಊರಿನ ಗುರಿಯರು ಸುತ್ತಮುತ್ತಲಿನ ಸಕಲ ಸದ್ಭಕ್ತ ಮಂಡಳಿಯವರು ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು ಅನೇಕ ಮಹಿಳಾ ಭಕ್ತಾದಿಗಳು ಯುವಕರು ಪುರವಂತರ ಜೊತೆ ಅಗ್ನಿಕುಂಡದಲ್ಲಿ ನಡೆಯುವ ಮೂಲಕ ಹಾಗೂ ಶಸ್ತ್ರಗಳನ್ನು ಹಾಕಿಸಿಕೊಳ್ಳುವ ಮೂಲಕ ವೀರಭದ್ರೇಶ್ವರ ಭಕ್ತಿಯ ಪ್ರಣಾಮಗಳನ್ನು ಅರ್ಪಿಸಿದರು‌.

 ಸಾಯಂಕಾಲ 5:00 ಗಂಟೆಗೆ ನೆರೆದ ಭಕ್ತಾದಿಗಳಿಂದ ವೀರಭದ್ರೇಶ್ವರ ಉಚ್ಚಾಯ  ಎಳೆಯುವ ಕಾರ್ಯಕ್ರಮ ನಡೆಯಿತು ಬಂದಂತ  ಭಕ್ತಾದಿಗಳಿಗೆ ಅಣ್ಣಸಂತರ್ಪಣೆ ಮಾಡಲಾಯಿತು 

 ವರದಿ : ಮಲ್ಲಿಕಾರ್ಜುನ್ ದೋಟಿಹಾಳ 

Contact For News&Ads

Siddi TV
Previous Post Next Post

Contact Form

f="https://unpkg.com/video.js/dist/video-js.css" rel="stylesheet">