Mandya : ಮಹಿಳಾ ಸಬಲೀಕರಣಕ್ಕೆ ಟೈಲರಿಂಗ್ ವೃತ್ತಿಯು ವರದಾನ..ಸಚಿವ ನಾರಾಯಣಗೌಡ ಅಭಿಮತ

ಮಹಿಳಾ ಸಬಲೀಕರಣಕ್ಕೆ ಟೈಲರಿಂಗ್ ವೃತ್ತಿಯು ವರದಾನ..ಸಚಿವ ನಾರಾಯಣಗೌಡ ಅಭಿಮತ

ಕೆ.ಆರ್.ಪೇಟೆಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಹಾಗೂ ವೃತ್ತಿ ಕುಶಲಕರ್ಮಿಗಳಿಗೆ ಕಾರ್ಪೆಂಟರ್ ಯಂತ್ರಗಳ ವಿತರಣೆ...
ಸುಭದ್ರ ಜೀವನ ಹಾಗೂ ಆರ್ಥಿಕ ಸುಸ್ಥಿರತೆಗೆ ಟೈಲರಿಂಗ್ ವೃತ್ತಿಯು ವರದಾನ..
ಸಚಿವ ಡಾ.ನಾರಾಯಣಗೌಡ ಅಭಿಮತ...
ಮಂಡ್ಯ ಜಿಲ್ಲಾ ಕೈಗಾರಿಕಾ ಕೇಂದ್ರ, .. ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ವಿತರಿಸಿ ಶುಭ ಹಾರೈಸಿದರು..
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ವೃತ್ತಿಕೌಶಲ್ಯ ಯೋಜನೆಯಡಿಯಲ್ಲಿ ಟೈಲರಿಂಗ್ ತರಬೇತಿ ಪಡೆದಿರುವ ನಿರುದ್ಯೋಗಿ ಮಹಿಳೆಯರು ಹಾಗೂ ವೃತ್ತಿಪರ ಮರಗೆಲಸಗಾರರಿಗೆ ಉಚಿತವಾಗಿ ತಲಾ 8ಸಾವಿರ ರೂ ಬೆಲೆಬಾಳುವ ವಸ್ತುಗಳನ್ನು ಉಚಿತವಾಗಿ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಈ  ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡು ಸುಭದ್ರವಾದ ಜೀವನ ನಿರ್ವಹಣೆಗೆ ಮುಂದಾಗಬೇಕು. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾಪ್ರಪಂಚದಲ್ಲಿ ಟೈಲರಿಂಗ್ ವೃತ್ತಿಗೆ ಹಾಗೂ ಕಸೂತಿ ಕೆಲಸಕ್ಕೆ ಬಹಳ ಬೇಡಿಕೆಯಿರುವುದರಿಂದ ಹೆಣ್ಣು ಮಕ್ಕಳು ಶ್ರದ್ಧಾಭಕ್ತಿಯಿಂದ ಟೈಲರಿಂಗ್ ವೃತ್ತಿಯನ್ನು ಮಾಡಿ ಆರ್ಥಿಕ ಸಬಲೀಕರಣ ಸಾಧಿಸಿ ಕುಟುಂಬವನ್ನು ಮುನ್ನಡೆಸಬೇಕು ಎಂದು ಮನವಿ ಮಾಡಿದರು..
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ಶೈಲಜಾ, ಕೈಗಾರಿಕಾ ವಿಸ್ತರಣಾಧಿಕಾರಿ ಪುಷ್ಪಲತಾ, ಪ್ರಥಮ ದರ್ಜೆ ಸಹಾಯಕರಾದ ಕೃಷ್ಣಮೂರ್ತಿ ಹಾಗೂ ನೂರಾರು ಫಲಾನುಭವಿಗಳು ಭಾಗವಹಿಸಿದ್ದರು..

 ವರದಿ.ಡಾ.ಕೆ.ಆರ್.ನೀಲಕಂಠ
 ಕೃಷ್ಣರಾಜಪೇಟೆ, ಮಂಡ್ಯ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">