PRESS-ಪತ್ರಕರ್ತರ ಮೇಲೆ ಹಲ್ಲೆ, ತಪ್ಪಿತ್ಥರಿಗೆ ಕಠಿಣ ಶಿಕ್ಷೆಗಾಗಿ ವಂದೇ ಮಾತರಂ ಒತ್ತಾಯ

ಪತ್ರಕರ್ತರ ಮೇಲೆ ಹಲ್ಲೆ, ತಪ್ಪಿತ್ಥರಿಗೆ ಕಠಿಣ ಶಿಕ್ಷೆಗಾಗಿ ವಂದೇ ಮಾತರಂ ಒತ್ತಾಯ

 ವಿಜಯನಗರ  : ಜಿಲ್ಲೆ ಕೂಡ್ಲಿಗಿ, ಪತ್ರಕರ್ತರ ಮೇಲೆ ಹಲ್ಲೆ ಹಾಗೂ ಕೊಲೆ ಬೆಧರಿಕೆ ಹಾಕಿರುವ ಪ್ರಕರಣಗಳನ್ನು. ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ, ಜಿಲ್ಲಾಢಳಿತ ಕಠಿಣ ಶಿಸ್ಥು ಕ್ರಮ ಜರುಗಿಸಬೇಕೆಂದು. ಈ ನಿಟ್ಟಿನಲ್ಲಿ ಸರ್ಕಾರ ಜಿಲ್ಲಾಡಳಿತಕ್ಕೆ, ಅಗತ್ಯ ಸೂಚನೆ ನೀಡಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಈ ಮೂಲಕ ಒತ್ತಾಯಿಸಿದೆ. ಸಂಬಂಧಿಸಿದಂತೆ ವೇದಿಕೆಯ ಮುಖಂಡ, ಹಾಗೂ ಪತ್ರಕರ್ತ ವಿ.ಜಿ.ವೃಷಭೇಂದ್ರ ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಲಿಂಗಸುಗೂರು ತಾಲೂಕಿನ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿ, ಕನ್ನಾಪೂರಹಟ್ಟಿ ಗ್ರಾಮದಲ್ಲಿ. ಮಾರ್ಚ್ 6 ರಂದು ನಡೆದಿದ್ಧ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಭೆಯ ವರದಿಗೆ ತೆರಳಿದ್ದ, ಮುದಗಲ್‌ ಹೋಬಳಿಯ ವಿಜಯವಾಣಿ ದಿನಪತ್ರಿಕೆ ವರದಿಗಾರ ಶರಣಯ್ಯ ಓಡೆಯರ್ ಹಾಗೂ ದಿ ಡೈಲಿ ನ್ಯೂಸ್ ಪತ್ರಿಕೆಯ ವರದಿಗಾರ ಶಿವಶಂಕ್ರಯ್ಯ ಒಡೆಯರ್ ಇವರುಗಳ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೇರಿದಂತೆ ಇತರರು ಹಲ್ಲೆ ಮಾಡಿದ್ದು, ಘಟನೆಯನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ವರದಿಗಾರರ ಮೇಲೆ, ಹಲ್ಲೆ ಪ್ರಕರಣಗಳು ನಿರಂತರ ನಡೆಯುತ್ತಿದ್ದು.   ಈ ಆತಂಕಕಾರಿ ಬೆಳವಣಿಗೆ ಪ್ರಜಾ ಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯ ಯತ್ನ ಎನ್ನಬಹುದಾಗಿದೆ, ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ವರದಿಗಾರರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳು, ಪತ್ರಕರ್ತರಿಗೆ ಜೀವ ಬೆಧರಿಕೆ ಹಾಕಿರುವುದು ಕಾನೂನು ಸುವ್ಯವಸ್ಥೆಯನ್ನ ಅಣಕಿಸುಂತಹ ಸಂಗತಿಯಾಗಿದೆ.
ಪತ್ರಕರ್ಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ, ಸರ್ವೋಚ್ಚ ನ್ಯಾಯಾಲದ ನಿರ್ಧೇಶನದಂತೆ ಶೀಘ್ರವೇ ಶಿಸ್ಥು ಕ್ರಮ ಜರುಗಿಸಬೇಕಿದೆ ಎಂದು ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿರುವ, ಜಿಲ್ಲ‍ಾಧಿಕಾರಿಗಳು  ನಿಷ್ಠಾವಂತ ಪತ್ರಕರ್ತರ ರಕ್ಷಣೆಗೆ ಮುಂದಾಗಬೇಕಿದೆ.  ಪತ್ರಕರ್ತರ ಮೇಲೆ ದಾಖಲಾಗಿರುವ ಪ್ರತಿದೂರನ್ನು ಹಿಂಪಡೆಯಬೇಕಿದೆ, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ವಿ.ಜಿ.ವೃಷಭೇಂದ್ರ ಒತ್ತಾಯಿಸಿದ್ದಾರೆ.
ವರದಿವಿ.ಜಿ.ವೃಷಭೇಂದ್ರ 
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">