ಕೊಪ್ಪಳದಲ್ಲಿ ಆಕರ್ಷಕ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ಲೋಕಾರ್ಪಣೆ
ಕೊಪ್ಪಳ,: ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಿ ಮಾಡಲಾದ 1 ಕೋಟಿ 78 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ 27 ವಿಜ್ಞಾನ ಮಾದರಿ ಹೊಂದಿರುವ ಅತ್ಯಾಕರ್ಷಕ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರವು ಮಂಗಳವಾರ ನಗರದ ತಹಶಿಲ್ದಾರ ಕಛೇರಿ ಆವರಣದಲ್ಲಿರುವ ಕೇಂದ್ರವು ಲೋಕಾರ್ಪಣೆಯಾಯಿತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಚಿವ ಹಾಲಪ್ಪ ಆಚಾರ, ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಉದ್ಘಾಟಿಸಿದರು.
ನಂತರ ವಿಜ್ಞಾನ ಕೇಂದ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ಜಿಲ್ಲೆಯ ಎಲ್ಲ ಶಾಲಾ ಮಕ್ಕಳು ಆಗಾಗ ಇಲ್ಲಿಗೆ ಬಂದು ಹೊರ ಸಂಚಾರದ ಮೂಲಕ ಸಂದರ್ಶನ ಮಾಡಿ ವಿಷಯ ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ಎಲ್ಲಾ ಕಾರ್ಯನಿರತ ಪ್ರದರ್ಶಕಗಳು ಇದ್ದು ಮಕ್ಕಳಿಗೆ ಕುತೂಹಲಕಾರಿಯಾಗಿವೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಎ.ರಡ್ಡೇರ್ ಮತನಾಡಿ, ವಿದ್ಯಾರ್ಥಿಗಳು ಈ ವಿಜ್ಞಾನ ಕೇಂದ್ರವನ್ನು ಭೇಟಿ ಮಾಡಿ ವಿಷಯಗಳನ್ನು ತಿಳಿದುಕೊಳ್ಳಬಹುದು. ಪಠ್ಯದಲ್ಲಿ ಇರುವ ವಿಷಯಗಳ ಪ್ರದರ್ಶಕಗಳು ಇಲ್ಲಿ ಇವೆ. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಇನ್ನೂ ಹೆಚ್ಚು ಅಂಕಗಳನ್ನು ಪಡೆಯಲು ಇವುಗಳು ಸಹಕಾರಿಯಾಗಲಿವೆ. ಮುಂದಿನ ದಿನಗಳಲ್ಲಿ ಥಿಮಾಟಿಕ್ ಗ್ಯಾಲರಿ ಹಾಗೂ ಪಠ್ಯಪೂರಕವಾದಂತಹ ವಿಜ್ಞಾನದ ಮಾದರಿಗಳನ್ನು ಸ್ಥಾಪಿಸಲು ಪ್ರಯತ್ನ ಮಾಡಲಾಗುವುದು. ಶಿಕ್ಷಕರಿಗೆ ಆಗಾಗ ತರಬೇತಿ ನೀಡಿ ಇಂತಹ ಮಾದರಿಗಳನ್ನು ತರಬೇತಿ ಆಯೋಜಿಸಿ ಹೆಚ್ಚಿನ ಜ್ಞಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದೆ ವೇಳೆ ವಿಷಯ ಪರಿವೀಕ್ಷಕರಾದ ಸುಜಾತಾ ಅವರು, ಈ ವಿಜ್ಞಾನ ಕೇಂದ್ರದಲ್ಲಿ 27 ಮಾದರಿಯಗಳನ್ನು ಸ್ಥಾಪಿಸಲಾಗಿದೆ. ಈ ಮಾದರಿಗಳು 8, 9,10 ತರಗತಿ ವಿಜ್ಞಾನ ಪಠ್ಯ ಆಧಾರಿತ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳಸುವಲ್ಲಿ ಸಹಾಯಕಾರಿಯಾಗಿದೆ. ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ವ್ಯಾನಂಗ ಮಾಡುತ್ತಿರುವ ಮಕ್ಕಳಿಗೆ ಕೂಡ ಈ ಮಾದರಿಗಳ ಪ್ರತ್ಯಕ್ಷವಾಗಿ ನೋಡುವುದರಿಂದ ಅವರಲ್ಲಿ ಕೂಡ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ , ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ, ಶಿಕ್ಷಣಾಧಿಕಾರಿ ಸರಸ್ವತಿ ಖಾನಾವಳ್ಳಿ, ಕನ್ನಡ ವಿಷಯ ಪರಿವೀಕ್ಷಕ ನೀಲಕಂಠಪ್ಪ ಕಂಬಳಿ, ವಿಜ್ಞಾನ ವಿಷಯದ ಶಿಕ್ಷಕರು ಸೇರಿದಂತ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು ಇದ್ದರು.
Inauguration of Attractive Regional Sub-Science Center at Koppal
Koppal,: An exciting regional sub-science center with 27 science models constructed with a grant of Rs 1 crore 78 lakh sanctioned under the Special Development Scheme was inaugurated on Tuesday at the Tehsildar Office premises in the city.
The ceremony organized by Karnataka Science and Technology Promotion Society Bangalore and Department of Public Education was inaugurated by Minister Halappa Achara, MP Kardi Sanganna, MLA K. Raghavendra Hitna.
After visiting the Science Center and expressing appreciation, all the school children of the district come here from time to time to interview and learn about the subject. He said that all the busy exhibitors are there and interesting for the children.
Deputy Director of Public Education Department, M.A. Ruddair Matanadi, said students can visit this science center and learn about the subjects. Here are indicators of the topics covered in the text. These will help the students to score more marks in science. Efforts will be made to establish science models like thematic gallery and textbooks in the near future. He informed that the teachers will be trained frequently and such models will be organized and more knowledge will be imparted.
Sujatha, subject supervisor, said that 27 models have been installed in this science centre. These models are helpful in 8th, 9th, 10th class science text based and inculcating scientific attitude. He informed that even the children who are doing Vananga in the primary school of the district can get interested in science by seeing these models firsthand.
Municipal Council Chairman Sivaganga Shivareddy Bhumakkanavar, District Collector M. Sundaresh Babu, GIP Chief Executive Officer Rahul Ratnam Pandey, Assistant Commissioner Basavannappa Kalshetty, Field Education Officer Shankrayya, Education Officer Saraswati Khanavalli, Kannada Subject Inspector Neelakanthappa Kambali, Science subject teachers were present in the program.
Reported By : Irayya Kurthakoti