ಕೆ ಆರ್ ಪೇಟೆ: ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ ಮಾನಸಪುತ್ರ ಕೆಬಿಸಿ ಮಂಜುನಾಥ್ ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮದಲ್ಲಿ ಆಚರಿಸಿಕೊಳ್ಳುವ ಮೂಲಕ ಆಡಂಬರದ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳದೇ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ. ಕೆ ಎಸ್ ಚಂದ್ರು ಹೇಳಿದರು.
ಕೆಬಿಸಿ ಮಂಜು ಅವರ 44ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿರುವ ಮಾತೃಭೂಮಿ ಅನಾಥ ವೃದ್ಧಾಶ್ರಮದಲ್ಲಿರುವ 65ಕ್ಕೂ ಹೆಚ್ಚು ವೃದ್ಧರಿಗೆ ಸಮವಸ್ತ್ರ,ಒಂದು ದಿನದ ಊಟದ ವ್ಯವಸ್ಥೆ,ಸ ಮತ್ತು ಆಶ್ರಮದ ಆವರಣದಲ್ಲಿ ಸಸಿ ನೆಟ್ಟು, ಸ್ನೇಹಿತರ ಜೊತೆಗೂಡಿ ಕೇಕ್ ಕತ್ತರಿಸುವ ಮುಖಾಂತರ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹಣವಂತರು ಹುಟ್ಟುಹಬ್ಬದ ನೆಪ ಹೇಳಿ ಮೋಜು ಮಸ್ತಿ ಮಾಡಿಕೊಂಡು ಆಡಂಬರದ ಮೂಲಕ ಅದ್ದೂರಿಯಾಗಿ ಆಚರಿಸಿಕೊಳ್ಳುವ ಜನರ ನಡುವೆಯೂ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಆಡಂಬರದ ಹುಟ್ಟು ಹಬ್ಬಕ್ಕೆ ತಿಲಾಂಜಲಿ ಇಟ್ಟು, ಸರಳವಾಗಿ ವೃದ್ಧಾಶ್ರಮದ ವೃದ್ದರ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿರುವ ಕೆಬಿಸಿ ಮಂಜುನಾಥ್ ಇತರರಿಗೆ ಮಾದರಿಯಾಗಿದ್ದಾರೆ. ಅವರ ಸಮಾಜಸೇವೆ ಮುಂದಿನ ದಿನಗಳಲ್ಲೂ ಮುಂದುವರೆಸಿ ನೊಂದವರಿಗೆ ನೆರಳಾಗುವ ಶಕ್ತಿಯನ್ನು ಕೆಬಿಸಿ ಮಂಜುನಾಥ್ ಅವರಿಗೆ ಭಗವಂತ ಕರುಣಿಸಲಿ ಎಂದು ಕೆ ಎಸ್ ಚಂದ್ರು ದೇವರಲ್ಲಿ ಪ್ರಾರ್ಥಿಸಿದರು.
Tags
ಟಾಪ್ ನ್ಯೂಸ್