Siddi TV: ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಶಾಸಕ ಆರ್ ಬಸನಗೌಡ ತುರುವಿಹಾಳ

ರಿಪೋರ್ಟರ್ ಮೆಹಬೂಬ ಮೊಮೀನ 

 ತುರ್ವಿಹಾಳ : 
ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಶಾಸಕ ಆರ್ ಬಸನಗೌಡ ತುರುವಿಹಾಳ

 ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬುಧವಾರ ಶಾಸಕ ಆರ್ ಬಸನಗೌಡ ತುರುವಿಹಾಳ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ದೊಡ್ಡಪ್ಪ ನವಲಹಳ್ಳಿ ಮತ್ತು ಅವರ ಬೆಂಬಲಿಗರು.
ನಂತರ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು 160 ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ಎಲ್ಲ ಪ್ರಣಾಳಿಕೆಯಲ್ಲಿರುವಂತಹ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ ಬಿಜೆಪಿಗರು ಸುಮಾರು 400 ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ಅದರಲ್ಲಿ 40 ಪ್ರಣಾಳಿಕೆಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ ಇದರಲ್ಲಿ ಗೊತ್ತಾಗುತ್ತದೆ ಯಾರದ್ದು ಸತ್ಯ ಎನ್ನುವುದು.ಸುಮಾರು 15 ತಿಂಗಳಲ್ಲಿ ಆಗಿರುವಂತಹ ಅಭಿವೃದ್ಧಿ ಕಾರ್ಯಗಳು ಮಾಜಿ ಶಾಸಕರ ಅವಧಿಯಲ್ಲಿ ಆಗಲಾರದಂತ ಅಭಿವೃದ್ಧಿ ಆಗಿದೆ ಮಾಜಿ ಶಾಸಕರ ಬಗ್ಗೆ ಜನರು ಹತಾಶೆಗೊಡಿದ್ದಾರೆ ಅನುದಾನ ತರುವ ವಿಷಯದಲ್ಲಿ ಅವರಿಗೆ ಯಾವುದೇ ನೈತಿಕತೆ ಹಕ್ಕು ಇಲ್ಲಾ. ಉಪಚುನಾವಣೆ ಸಮಯದಲ್ಲಿ 5000 ಮನೆಗಳ ಭರವಸೆ ನೀಡಿ ಮಸ್ಕಿ ಕ್ಷೇತ್ರಕ್ಕೆ  ಯಾವುದೇ ಮನೆಗಳು ಮಂಜೂರು ಮಾಡಿಲ್ಲ ಅವರ ಭರವಸೆ ಬರವಸೆಯಾಗಿಯೇ ಉಳಿದಿದೆ ಎಂದು ಬಹಿರಂಗ ಚರ್ಚೆಗೆ  ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್  ಪಕ್ಷದ ಮುಖಂಡರು ಊರಿನ ಹಿರಿಯರು ಹಾಗೂ ಕಾರ್ಯಕರ್ತರು ಇದ್ದರು.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">