ಸಿಂಧನೂರು : ಅಪರೂಪದ ವ್ಯಕ್ತಿತ್ವವುಳ್ಳ ಆಟೋ ಚಾಲಕ ಉಸ್ಮಾನ್ ಪಾಷ ನಮದೊಂದು ಸಲಾಂ..
ಸಿಂಧನೂರು ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದ ಅನಾಥ ವ್ಯಕ್ತಿ ಆಕಸ್ಮಿಕ ಸಾವನ್ನಪ್ಪಿದ್ದಾನೆ ಅದನ್ನು ಕಂಡ ಸಮಾಜ ಸೇವಕ ಉಸ್ಮಾನ್ ಪಾಷ ಮಕಾಂದಾರ್ ಅವರು ಆ ಅನಾಥ ಶವಕ್ಕೆ ಅಂತಿಮ ಸಂಸ್ಕಾರ ನೆರವೇರಿಸಿದರು,
ಮತ್ತೊಮ್ಮೆ ಸಿಂಧನೂರಿನ ಅನಾಥರ ನಿರ್ಗತಿಕರ ಸಹಾಯಕ್ಕೆ ನಿಂತ ಆಟೋ ಚಾಲಕ ಉಸ್ಮಾನ್ ಪಾಶ,
ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿ ಮುಖ್ಯ
ಅದರಲ್ಲಿ ಅನಾಥರಿಗೆ ಸಹಕಾರ ಮತ್ತು ಸಹಾಯ ಮಾಡುವುದು ಮನುಷ್ಯ ಧರ್ಮವಾಗಿದೆ
ಅನಾಥರ ಬದುಕೇ ಕಠೋರ ಅದರಲ್ಲಿ ಅನಾಥರು ಸಾವನ್ನಪ್ಪಿದರೆ ಮುಂದೇನು ಗತಿ ಎನ್ನುವಂತಿಲ್ಲ ಅವರಿಗೆ ನಾನು ಬದುಕಿರುವ ವರೆಗೆ ಅವರ ಸೇವೆಗೆ ಸದಾ ಸಿದ್ಧನಿರುವೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು.
ಸಹಕಾರ ನೀಡಿದ ಪೊಲೀಸ್ ಇಲಾಖೆ ಹಾಗೂ ನಗರಸಭೆಯವರಿಗೆ ಕೃತಜ್ಞತೆಗಳು ತಿಳಿಸಿದರು.
ರಿಪೋರ್ಟರ್ ಮೆಹಬೂಬ ಮೊಮೀನ.