ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದ ಗ್ರಾಮಸ್ಥರು
ಕೊಪ್ಪಳ,: ತಾಲೂಕಿನ ಬಂಡಿ ಹರ್ಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದಲ್ಲಿ ಈ ವರ್ಷ
ಎಸ್‌ಎಸ್‌ಎಲ್‌ಸಿ ನೂತನ ಪರೀಕ್ಷಾ ಕೇಂದ್ರ ಆರಂಭ ಆಗಿ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು
ಸಿಹಿ ಪೆನ್ನು ವಿತರಿಸಿ ಶುಭ ಹಾರೈಸಿದ್ದಾರೆ.
ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-45 ರವರೆಗೆ ಪ್ರಥಮ ಭಾಷೆ ಕನ್ನಡ ಸೇರಿದಂತೆ ಇತರ ವಿಷಯಗಳ ಪರೀಕ್ಷೆ ನಡೆದವು. ಒಟ್ಟು 257 ವಿದ್ಯಾರ್ಥಿಗಳಲ್ಲಿ 250 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 7 ವಿದ್ಯಾರ್ಥಿಗಳು ಪರಿಕ್ಷೆಗೆ ಬರೆದಿರುದಿಲ್ಲ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, 2023ರ ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ಜರುಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ತಮ್ಮೆಲ್ಲರಿಗೂ ಪ್ರೀತಿ ಪೂರ್ವಕ ಶುಭ ಹಾರೈಕೆಗಳನ್ನು ಗ್ರಾಮಸ್ಥರು ತಿಳಿಸಿದರು. ಶೈಕ್ಷಣಿಕ ಜೀವನದ ಇನ್ನೊಂದು ಹಂತಕ್ಕೇರುವ ತುಡಿತದಲ್ಲಿರುವ ತಾವೆಲ್ಲರೂ ಯಾವುದೇ ಆತಂಕ ಮತ್ತು ಭಯವಿಲ್ಲದೇ ಅತ್ಯಂತ ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಬರೆದು, ಯಶಸ್ಸನ್ನು ಪಡೆಯಿರಿ ಎಂದು ಗ್ರಾಮದ ಶಿಕ್ಷಣ ಪ್ರೇಮಿ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಸಿಹಿ, ಚಾಕೊಲೇಟ್ ಪೆನ್ನು ವಿತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಡಯಟ್ ಉಪನಿರ್ದೇಶಕ ಎಂ ಶ್ಯಾಮ್ ಸುಂದರ್, ಆಡಳಿತ ಉಪನಿರ್ದೇಶಕ ರೆಡ್ಡೆರ್, ಮಾಜಿ ಸದಸ್ಯ ಮೋಹನ್, ಶಂಕರ್ ಶ್ಯಾಸಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಚನ್ನಕೃಷ್ಣ ಗೊಲ್ಲರ, ಮಹ್ಮದ್ ರಫಿ,ರಬೇಕಾ ಬಾಬು, ಎಸ್ ಡಿಎಂಸಿ ಅಧ್ಯಕ್ಷ ಸೋಮಪ್ಪ ಇಂದ್ರಗಿ ಮುಖಂಡರಾದ ಅಮರೇಶ ಬನ್ನಿಕೊಪ್ಪ, ಹರಿಶ್ ಅಗಳಕೇರಾ, ವೀರಭದ್ರಪ್ಪ ಭೂಸನೂರಮಠ, ಜಹಾಂಗೀರ್ ಗೊರೆಬಾಳ, ಮುಖ್ಯ ಶಿಕ್ಷಕ ಶರಣಪ್ಪ ಸುಂಕದ, ಸ್ಥಾನಿಕ ಜಾಗೃತಿ ದಳ ಶರಣಪ್ಪ ಸುರೋಳ ಅನೇಕರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Tags
ಟಾಪ್ ನ್ಯೂಸ್