ತುರುವಿಹಾಳ :
ಹಣಕ್ಕಿಂತ ಜೀವನದ ಪಾಠ ಮುಖ್ಯ ಶಂಕರ್ ನಾಯಕ್ ಹಿರಿಯ ಪತ್ರಕರ್ತರು
ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೋಸೂರ ಕ್ಯಾಂಪಿನಲ್ಲಿರುವ ಸರ್ಕಾರಿ ಶಾಲೆಗೆ ಸಂಧಿಪ ವಾಜಪೇ ಇಂಜಿನಿಯರ್ ರವರು ಶಾಲಾ ಮಕ್ಕಳಿಗೆ ಊಟಕ್ಕೆ 50 ತಟ್ಟೆ ಹಾಗೂ 50 ನೀರು ಕುಡಿಯುವ ಲೋಟ ಕೋಡೂಗೆಯಾ ನಿಡಿದರು.
ನಂತರ ಪಟ್ಟಣದ ಹಿರಿಯ ಪತ್ರಕರ್ತ ಶಂಕರ ನಾಯಕ್ ಮಾತನಾಡಿ ಹಣಕ್ಕಿಂತ ಜೀವನ ಪಾಠದೊಂದಿಗೆ ಪಠ್ಯ ಬೋಧನೆ ಸಾಗುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಸಮಾಜದ ಇಚ್ಛಾಶಕ್ತಿ ಸರ್ಕಾರ ಮತ್ತು ಶಿಕ್ಷಕರೊಂದಿಗೆ ಪಾಲಕರು ಕೈ ಜೋಡಿಸುವುದು ಇದಕ್ಕೆ ಅತ್ಯಗತ್ಯವಾಗಿದೆ.ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಂಧಿಪ ವಾಜಪೇ ಇಂಜಿನಿಯರ್ ರಂತಹ ದಾನಿಗಳ ಅವಶ್ಯಕತೆ ಇದೆ ಎಂದು ಹೇಳಿದರು.ಹಾಗೂ ಮಾತನಾಡಿದ ಮುಖ್ಯ ಶಿಕ್ಷಕ ಶಂಕ್ರಪ್ಪ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು,ಆಡಳಿತ ಮಂಡಳಿಯ ಮತ್ತು ಮುಖ್ಯವಾಗಿ ಸಂಧಿಪ ವಾಜಪೇ ಇಂಜಿನಿಯರಂತ ದಾನಿಗಳ ಸಹಕಾರ ಅತಿ ಮುಖ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷನಿಂಗಪ್ಪ,ಸದಸ್ಯರಾದ ಮಾನಯ್ಯ,ಯಂಕಮ್ಮ ಶಾಂತಮ್ಮ,ಶಿಕ್ಷಕರಾದ ನಾಗರಾಜ, ಮಹದೇವಪ್ಪ,ಹಾಗೂ ಅಡುಗೆ ಸಹಾಯಕರ ಇದ್ದರು.
ರಿಪೋರ್ಟರ್ ಮಹೆಬೂಬ ಮೊಮೀನ.
Tags
ಟಾಪ್ ನ್ಯೂಸ್