ಕುಷ್ಟಗಿ ತಾಲೂಕಿನಲ್ಲಿ ವಿವಿಧ ಹಳ್ಳಿಗಳಿಗೆ ತೆರಳಿ ಕಾಮಗಾರಿಗಳ ಪರಿಶೀಲನೆ ಮಾಡಿದ ZP CEO

ಎಲ್ ಡಬ್ಲ್ಯೂ ಎಂ, ಎಸ್ ಎಲ್ ಡಬ್ಲ್ಯೂ ಎಂ , ಸಮುದಾಯ ಶೌಚಾಲಯ ಪರಿಶೀಲಿಸಿದ:ಜಿ.ಪಂ ಸಿಇಒ ರಾಹುಲ್‌ ರತ್ನಂ ಪಾಂಡೆ

 ಕುಷ್ಟಗಿ ತಾಲೂಕಿನಲ್ಲಿ ವಿವಿಧ ಹಳ್ಳಿಗಳಿಗೆ ತೆರಳಿ ಕಾಮಗಾರಿಗಳ ಪರಿಶೀಲನೆ

 ಕುಷ್ಟಗಿ : ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳನ್ನು ಸಾರ್ವಜನಿಕರ ಬಳಕೆಗೆ ಆದ್ಯತೆ ನೀಡಬೇಕೆಂದು ಕೊಪ್ಪಳ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಸೂಚಿಸಿದರು. 

 ಶುಕ್ರವಾರರಂದು ಭೇಟಿ ನೀಡಿದ ಸಿಇಓ  ಹನುಮನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ* ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯೊಳಗೆ ಅನುಷ್ಠಾನಿಸತಕ್ಕದ್ದು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದೆಂದು ಪಿಡಿಒ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.

ನಂತರ ನಿಲೊಗಲ್ಲ ಗ್ರಾಮ‌ ಪಂಚಾಯತ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಗಳನ್ನು ವಿಕ್ಷೀಸಿ ಕಾಮಗಾರಿಗಳು ಶೀಘ್ರಗತಿಯಲ್ಲಿ ಮುಕ್ತಾಯಗೊಳಿಸಿ ಕಸ ಸಂಗ್ರಹಣೆಗೆ ಕ್ರಮವಹಿಸಬೇಕೆಂದು ಮಾನ್ಯರು ಸೂಚಿಸಿದರು.  ನಿಲೊಗಲ್ಲ ಗ್ರಾಮದ ಶ್ರೀ.ಮಲ್ಲಯ್ಯ ದೇವಸ್ಥಾನ ಹತ್ತಿರದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಸಮುದಾಯ ಶೌಚಾಲಯವನ್ನು ಪರಿಶೀಲಿಸಿದರು‌. ಈಗಾಗಲೇ ಮುಕ್ತಾಯಗೊಂಡಿ ಶೀಘ್ರದಲ್ಲಿ ಶೌಚಾಲಯವು ಸಾರ್ವಜನಿಕರಿಗೆ ಹಾಗು ಭಕ್ತಾದಿಗಳಿಗೆ ಬಳಕೆ ಕ್ರಮವಹಿಸಲು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳದಲ್ಲಿದ್ದ  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್, RWS ಕಾರ್ಯಪಾಲಕ ಅಭಿಯಂತರ ಬಸನಗೌಡ, RWS ಸಹಾಯಕ‌ ಕಾರ್ಯಪಾಲಕ ಅಭಿಯಂತರ ವಿಲಾಸ್ ಬೋಸ್ಲೆ, ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಹನಮಂತಗೌಡ ಪೋಲಿಸ್‌ ಪಾಟೀಲ್‌, ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಜುಳಾ ಭೀಮನಗೌಡ ಪಾಟೀಲ್‌, ಪಿಡಿಒ ಚಂದಪ್ಪ ಕವಡಿಕಾಯಿ, ತಾಂತ್ರಿಕ  ಸಂಯೋಜಕ ಬಸವರಾಜ, ಎಸ್‌ ಬಿಎಂ ಸಮಾಲೋಚಕರಾದ ಶಿವಕುಮಾರ, ಮಾರುತಿ ನಾಯಕರ ಹಾಜರಿದ್ದರು.

 ಮಲ್ಲಿಕಾರ್ಜುನ್ ದೋಟಿಹಾಳ ವರದಿಗಾರರು ಕುಷ್ಟಗಿ

LWM, SLWM, Community Toilet Inspected by: G.P.M CEO Rahul Ratnam Pandey

 Inspection of works by going to various villages in Kushtagi taluk

 Kushtagi: Koppal GP Chief Executive Officer Rahul Ratnam Pandey suggested that the works already implemented under various projects should be prioritized for public use.

 The visiting CEO on Friday inspected the gray water management works being implemented under the Swachh Bharat Mission (GRA) scheme in Hanumana Gram Panchayat. The quality of the work should be maintained and implemented within the time limit. He instructed the PDO and Technical Assistants not to delay for any reason.

Then Nilogalla Gram Panchayat solid waste disposal unit and faecal waste management unit should be developed and the works should be completed at the earliest and steps should be taken to collect the garbage. He inspected the community toilet constructed under the Swachh Bharat Mission (GRA) project near Mr. Mallaiah temple in Nilogalla village. The Chief Executive Officer directed the Gram Panchayat Development Officers present at the site to make arrangements for the toilet to be used by the public and devotees soon after it has already been completed.

On this occasion Taluka Panchayat Executive Officer Shivappa Subedar, RWS Executive Abhiyantara Basanagowda, RWS Assistant Executive Abhiyantara Vilas Bhosle, Panchayat Raj Assistant Director Hanamantha Gowda Police Patil, Gram Panchayat President Manjula Bhimana Gowda Patil, PDO Chandappa Kavadikai, Technical Coordinator Basavaraj, S.B. Leaders were present.

 Mallikarjun Dotihal Reporter

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">