ಬಿಜೆಪಿ 3ನೇ ಪಟ್ಟಿ ಬಿಡುಗಡೆ : ಕೊಪ್ಪಳಕ್ಕೆ ಮಂಜುಳಾ ಕರಡಿಗೆ ಟಿಕೆಟ್
ಕೊಪ್ಪಳ ಜಿಲ್ಲೆಯಲ್ಲೇ ಮಹಿಳಾ ಅಭ್ಯರ್ಥಿ ಬಿಜೆಪಿ ಟಿಕೆಟ್
ಕೊಪ್ಪಳ,: ಬಿಜೆಪಿ ಪಕ್ಷದ ಮೂರನೇ ಪಟ್ಟಿ ಬಿಡುಗಡೆ ಆಗಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಂಜುಳಾ ಕರಡಿಗೆ ಟಿಕೆಟ್ ಸಿಕ್ಕಿದೆ. ರಾಜಕೀಯವಾಗಿ ಬಹಳಷ್ಟು ಕುತೂಹಲ ಕೆರಳಿಸಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಂಸದ ಸಂಗಣ್ಣ ಕರಡಿ ಅವರ ಸೊಸೆ ಮಂಜುಳಾ ಅಮರೇಶ ಕರಡಿ ಅವರಿಗೆ ಘೋಷಣೆ ಆಗಿದ್ದು ವಿಶೇಷ. ಸುಮಾರು ದಿನಗಳಿಂದ ಅಳೆದು, ತೂಗಿದ ಬಿಜೆಪಿ ಹೈಕಮಾಂಡ್ ಕೊನೆಗೂ ಸಂಸದ ಸಂಗಣ್ಣ ಕರಡಿ ಅವರ ಹಿರಿಯ ಮಗ ಅಮರೇಶ ಅವರ ಪತ್ನಿ ಮಂಜುಳಾ ಕರಡಿ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ರಾಷ್ಟ್ರೀಯ ಪರಿಷತ್ತಿನ ಮಾಜಿ ಸದಸ್ಯ ಸಿ.ವಿ.ಚಂದ್ರಶೇಖರ ಅವರು ಟಿಕೇಟಗಾಗಿ ಬಹಳಷ್ಟು ಪೈಪೋಟಿ ನಡೆಸಿದ್ದರು.
ಇನ್ನೂ ಕೆಲವರಾದ ಡಾ.ಬಸವರಾಜ, ಗವಿಸಿದ್ಧಪ್ಪ ಕರಡಿ, ರಾಜಶೇಖರ ಆಡೂರು ಸೇರಿದಂತೆ ಅನೇಕ ಮುಖಂಡರ ಹೆಸರುಗಳು ಕೇಳಿ ಬಂದಿದ್ದವು. ಕೊಪ್ಪಳ ಟಿಕೇಟ್ ಸುದ್ದಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಚರ್ಚೆ ನಡೆದಿತ್ತು. ಕೊನೆಗೂ ಸೋಮವಾರ ಸಂಜೆ ಕೊಪ್ಪಳ ಬಿಜೆಪಿ ಟಿಕೆಟ್ ಮಂಜುಳಾ ಕರಡಿ ಅವರಿಗೆ ಒಲಿದಿದೆ. ಇದು ಪ್ರಥಮ ಬಾರಿ ಕೊಪ್ಪಳ ಜಿಲ್ಲೆಯಲ್ಲೇ ಮಹಿಳಾ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದೆ. ಈ ಮೂಲಕ ಬಿಜೆಪಿ ಟಿಕೆಟ್ ಗೊಂದಲಕ್ಕೆ ತೆರೆ ಬಿದ್ದಿದೆ.
ವರದಿ : ಶಿವಕುಮಾರ ಹಿರೇಮಠ
Tags
ರಾಜಕೀಯ