ಬಿಜೆಪಿಯ ಮತ್ತೊಂದು ವಿಕೆಟ್ ಪತನ.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಿಜೆಪಿಗೆ ಗುಡ್ ಬೈ ? ಜೆಡಿಎಸ್ ನಿಂದ ಸ್ಪರ್ದಿಸಲು ಮುಂದಾದ ಸಂಗಣ್ಣ
ಕೊಪ್ಪಳ : ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಪರ್ವ ಮುಂದುವರೆದಿದ್ದು ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆಯುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಬೆಂಬಲಿಗರ ಸಭೆ ಕರೆದಿರುವ ಸಂಗಣ್ಣ ಅವರು ಸಭೆಯಲ್ಲಿ ಬಿಜೆಪಿ ತೊರೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಪಕ್ಷ ಬಿಟ್ಟು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಲು ಸಂಗಣ್ಣ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದಿದ್ದು ಬಲ್ಲ ಮೂಲಗಳ ಪ್ರಕಾರ ಸಂಸದರು ಇಂದೇ ದೆಹಲಿಗೆ ತೆರಳಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಕೊಪ್ಪಳ ಕ್ಷೇತ್ರದ ಟಿಕೆಟ್ ಪ್ರಬಲ ಸ್ಪರ್ಧೆ ಒಡ್ಡಿದ್ದ ಸಂಗಣ್ಣ ಅವರು ಟಿಕೆಟ್ ಸಿಗುವುದಿಲ್ಲ ಎಂಬುದು ಖಾತರಿ ಆಗಿದ್ದು ಜೆಡಿಎಸ್ ಪಕ್ಷದಿಂದ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ.
ಈ ಹಿಂದೆ ಸಂಗಣ್ಣ ಅವರು ಜೆಡಿಎಸ್ ನಿಂದ ಗೆದ್ದು ಎರಡು ಭಾರಿ ಶಾಸಕರಾಗಿದ್ದರು ಎಂಬುದು ವಿಶೇಷ. ಅನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿ ಶಾಸಕರು, ಸಂಸದರು ಆಗಿದ್ದರು. ಕರಡಿ ಸಂಗಣ್ಣ ಅವರು ಈಗ ಮತ್ತೆ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ