ಕೈ ಎರಡನೇ ಪಟ್ಟಿ ರಿಲೀಸ್ : ಗಂಗಾವತಿಯಿಂದ ಅನ್ಸಾರಿ ಗೆ ಟಿಕೆಟ್
ಕೊಪ್ಪಳ : ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ರಿಲೀಸ್ ಆಗಿದ್ದು ಕೊಪ್ಪಳ ಜಿಲ್ಲೆಯ ಗಂಗಾವತಿ ಟಿಕೆಟ್ ಇಕ್ಬಾಲ್ ಅನ್ಸಾರಿ ಪಾಲಾಗಿದೆ.
ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿತ್ತು, ಗಂಗಾವತಿ ಟಿಕೆಟ್ ಮಾತ್ರ ಆಗಿರಲಿಲ್ಲ. ಈಗ 42 ಕ್ಷೇತ್ರಗಳ ಎರಡನೇ ಪಟ್ಟಿ ರಿಲೀಸ್ ಆಗಿದ್ದು ಇದರಲ್ಲಿ ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಘೋಷಣೆ ಆಗಿದೆ. ಈ ಮೂಲಕ ಟಿಕೆಟ್ ಗೊಂದಲಕ್ಕೆ ತೆರೆ ಬಿದ್ದಿದೆ
ಎಚ್ ಆರ್ ಶ್ರೀನಾಥ್, ಅನ್ಸಾರಿ ಮದ್ಯೆ ಟಿಕೆಟ್ ಗೆ ಪ್ರಬಲ ಪೈಪೋಟಿ ಇತ್ತು, ಅಂತಿಮವಾಗಿ ಸಿದ್ದರಾಮಯ್ಯ ಬಣದ ಅನ್ಸಾರಿ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳ ಟಿಕೆಟ್ ಕಾಂಗ್ರೆಸ್ ಪಕ್ಷದಿಂದ ಘೋಷಣೆಯಾಗಿದ್ದು 2023 ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ.
ಯಲಬುರ್ಗಾ ದಿಂದ ಬಸವರಾಜ್ ರಾಯರಡ್ಡಿ, ಕನಕಗಿರಿಯಿಂದ ಶಿವರಾಜ್ ತಂಗಡಗಿ, ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್, ಕುಷ್ಟಗಿಯಿಂದ ಅಮರೇಗೌಡ ಬಯ್ಯಪುರ, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ ಹೀಗೆ ಎಲ್ಲ ಐದು ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ ಪಕ್ಷ ಅಂತಿಮಗೋಳಿಸಿದೆ. ಇನ್ನೇನಿದ್ದರೂ ಪ್ರಚಾರ ಭರಾಟೆಗೆ ಸಜ್ಜಾಗಿದ್ದು ಬಿಜೆಪಿ ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳ ಘೋಷಣೆ ಆದ ಮೇಲೆ ಚುನಾವಣೆ ಕಾವು ಮತ್ತಷ್ಟು ಏರಲಿದೆ.
ವರದಿ : ಈರಯ್ಯ ಕುರ್ತಕೋಟಿ