Byadagi:ದೇವಸ್ಥಾನದಲ್ಲಿ ಇಷ್ಟದ ಹಾಡು ಹಾಕದ್ದಕ್ಕೆ ಇಬ್ಬರು ಭಕ್ತರಿಂದ ಯುವಕನಿಗೆ ಹಲ್ಲೆ!

ದೇವಸ್ಥಾನದಲ್ಲಿ ಇಷ್ಟದ ಹಾಡು ಹಾಕದ್ದಕ್ಕೆ ಇಬ್ಬರು ಭಕ್ತರಿಂದ ಯುವಕನಿಗೆ ಹಲ್ಲೆ!
ಬ್ಯಾಡಗಿ (ಏ.6) : ತಮ್ಮಿಷ್ಟದ ಹಾಡುಗಳನ್ನು ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪೆಂಡಾಲ್‌ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಇಬ್ಬರು ಭಕ್ತರು ಹಲ್ಲೆ ನಡೆಸಿದ ಘಟನೆ ಪಟ್ಟಣದ ಶಿಡೇನೂರ ರಸ್ತೆಯಲ್ಲಿರುವ ಸೀತಾಪತಿ ಹಾಗೂ ಢಾಕು ಮಹಾರಾಜರ ದೇವಸ್ಥಾನದ ಆವರಣದಲ್ಲಿ ನಡೆದಿದೆ.
ಗುಂಡೇನಹಳ್ಳಿ ಗ್ರಾಮದ(Gundenahalli village) ಶಿವಪುರ ತಾಂಡಾದ ರಮೇಶ ಲಮಾಣಿ(Ramesh lamani) (28) ಹಲ್ಲೆಗೆ ಒಳಗಾದವರು. ಪ್ರತಿ ವರ್ಷದಂತೆ ಪಟ್ಟಣದ ಹೊರವಲಯದಲ್ಲಿರುವ ಶಿಡೇನೂರ ರಸ್ತೆಯ ಸಿತಾಪತಿ ಮತ್ತು ಢಾಕು ಮಹಾರಾಜರ ದೇವಸ್ಥಾನ(Daku maharaj temple)ದ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿಯಾಗಿ ಪೆಂಡಾಲ್‌ ಹಾಗೂ ಮೈಕ್‌ಸೆಟ್‌ ಹಾಕಲಾಗಿತ್ತು. ಈ ವೇಳೆ ಗಗನ ಬಣಕಾರ ಮತ್ತು ಪ್ರವೀಣ್‌ ಲಮಾಣಿ ಎಂಬಿಬ್ಬರು ತಮಗಿಷ್ಟವಾದ ಹಾಡು ಹಾಕುವಂತೆ ರಮೇಶ ಲಮಾಣಿಗೆ ಒತ್ತಾಯಿಸಿದ್ದಾರೆ.
ಇದಕ್ಕೆ ನಿರಾಕರಿಸಿದ ರಮೇಶ ಮೇಲೆ ಕಬ್ಬಿಣದ ರಾಡ್‌ಗಳಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್‌ ಠಾಣೆ(Byadagi police station)ಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಡಿಜೆ ಮೈಕ್‌ ಸೌಂಡ್‌ ಸಿಸ್ಟಮ್‌ ಸಲುವಾಗಿ ರಮೇಶ ಲಮಾಣಿ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾಗಿ ಪ್ರವೀಣ ತಾಯಿ ಪ್ರತಿದೂರು ನೀಡಿದ್ದಾರೆ. ಎರಡು ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">