ಜೆಡಿಎಸ್ ಅಭ್ಯರ್ಥಿ CVC ಪ್ರಚಾರಕ್ಕೆ ರೂ. 50 ಸಾವಿರ ದೇಣಿಗೆ ನೀಡಿದ ಹ್ಯಾಟಿ ಗ್ರಾಮಸ್ಥರು
ಕೊಪ್ಪಳ,: ತಾಲೂಕಿನ ಹ್ಯಾಟಿ ಗ್ರಾಮಸ್ಥರು ಜೆಡಿಎಸ್ ಕೊಪ್ಫಳ ಅಭ್ಯರ್ಥಿ ಸಿವಿ ಚಂದ್ರಶೇಖರ ಅವರ ಚುನಾವಣಾ ಪ್ರಚಾರಕ್ಕೆ 50 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದರು.
ಸಿವಿ ಚಂದ್ರಶೇಖರ ಅವರು ಹ್ಯಾಟಿ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದಾಗ, ಹ್ಯಾಟಿ ಗ್ರಾಮದ ವಿರೂಪಾಕ್ಷ ರೆಡ್ಡಿ ಯಡ್ರಾಮನಹಳ್ಳಿ,
ಬಸವನಗೌಡ ಕರೆಡ್ಡಿ, ವೆಂಕನಗೌಡ, ಪ್ರಕಾಶ ರೆಡ್ಡಿ, ಬಸರಿಗಿಡದ, ಮಲ್ಲಿಕಾರ್ಜುನಗೌಡ, ಸೋಮಶೇಖರಯ್ಯ ಹಾಗೂ ಪ್ರಭುರಾಜ ಗೌಡ ಪ್ರಚಾರ ಕಾರ್ಯಕ್ರಮದಲ್ಲಿ
ಭಾಗವಹಿಸಿ ಮಾತನಾಡಿ, ಕೊಪ್ಪಳ ಕ್ಷೇತ್ರದಲ್ಲಿ ಬದಲಾವಣೆ ಬೇಕಿದೆ. ಹೊಂದಾಣಿಕೆ ಹಾಗೂ ನಿಶ್ಚಲ ರಾಜಕೀಯ ವ್ಯವಸ್ಥೆಯ ವಿರುದ್ಧ ಜನ ರೋಸಿ ಹೋಗಿದ್ದಾರೆ. ಹೊಸಮುಖ ಕ್ಷೇತ್ರಕ್ಕೆ ಬೇಕಾಗಿದೆ. ವಿದ್ಯಾವಂತ ಹಾಗೂ ಜನಪರ ಕಾಳಜಿಯುಳ್ಳ ನಾಯಕನ ಅಗತ್ಯವಿದೆ. ಈಗ ಇರುವ ವಾತಾವರಣಕ್ಕೆ CVC ಸೂಕ್ತ ವ್ಯಕ್ತಿ. ಹೀಗಾಗಿ ಅವರು ಗೆಲ್ಲಬೇಕು. ಅವರ ಚುನಾವಣಾ ಪ್ರಚಾರಕ್ಕೆ ವೈಯಕ್ತಿಕವಾಗಿ ದೇಣಿಗೆ ನೀಡಿದ್ದೇವೆ ಎಂದರು.
ಜೆಡಿಎಸ್ ಅಭ್ಯರ್ಥಿ ಸಿ ವಿ ಚಂದ್ರಶೇಖರ ಮಾತನಾಡಿ, ನನ್ನ ಆಡಳಿತದಲ್ಲಿ ನನ್ನ ಕುಟುಂಬದವರ ಯಾವ ಹಸ್ತಕ್ಷೇಪವೂ ಇರುವುದಿಲ್ಲ. ನನಗೆ ಮೊದಲು ಮತದಾರ, ನಂತರ ಕಾರ್ಯಕರ್ತ, ತದನಂತರ ಕುಟುಂಬ ಎಂದ ಅವರು, ತಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದರೇ, ನನ್ನ ಅಧಿಕಾರಾವಧಿಯಲ್ಲಿ 24 ಗಂಟೆಗಳ ಸಹಾಯವಾಣಿ ಕಾರ್ಯಾರಂಭವಾಗಲಿದೆ. ಸಂಕಷ್ಟದಲ್ಲಿ ಕರೆ ಮಾಡುವವರಿಗೆ ಕೂಡಲೇ ಸಹಾಯ ಸಿಗಲಿದೆ. ಸಮಾಜದ ವಿವಿಧ ವಲಯಗಳ ಪ್ರತಿನಿಧಿಗಳ ತಂಡಗಳ ಮತದಾರ ಪರಿಷತ್ ರಚನೆಯಾಗಲಿದೆ. ಈ ತಂಡಗಳು ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಮೌನೇಶ್ ಕಿನ್ನಾಳ, ಚನ್ನಪ್ಪ ಮುತ್ತಾಳ, ಅಫ್ಸರ್ ಸಾಬ್, ಗಾಳೆಪ್ಪ ಕಡೆಮನಿ, ಈಶಪ್ಪ ಮಾದಿನೂರ, ಸಂಗಪ್ಪ ವಕ್ಕಳದ ಸೇರಿದಂತೆ ಇತರರು ಇದ್ದರು.
ವರದಿ : ಶಿವಕುಮಾರ ಹಿರೇಮಠ