ಬಸ್ ಪ್ರಯಾಣಿಕರೇ ಗಮನಿಸಿ ; ಮೇ 5ರಿಂದ 13 ರವರೆಗೆ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
************
ಬೆಂಗಳೂರು :- ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ದತೆ ನಡೆಸಿದೆ. ಸುಮಾರು 10 ಸಾವಿರ ಬಸ್ ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದು, ಮೇ. 5 ರಿಂದ 13 ರವರೆಗೆ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚುನಾವಣೆಗೆ ಆಯೋಗ ಸಕಲ ಸಿದ್ದತೆ ನಡೆಸಿದ್ದು, ಸುಮಾರು 10 ಸಾವಿರ ಬಸ್ ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್ಟಿಸಿ ಬಸ್ಗಳ ಜತೆಗೆ ಆರ್ಟಿಒ ವಾಹನಗಳನ್ನೂ ಸಹ ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯಲು ಮತ್ತು ಚುನಾವಣಾ ಪರಿಕರಗಳನ್ನು ರವಾನಿಸಲು ಸರ್ಕಾರಿ ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೇ 5ರಿಂದ 13ರವರೆಗೆ ಚುನಾವಣಾ ಕೆಲಸಕ್ಕೆ ಬಸ್ ಗಳ ಅವಶ್ಯಕತೆಯಿದ್ದು, ಹೀಗಾಗಿ ಕೆಎಸ್‌ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು. ಈ ಹಿನ್ನೆಲೆ ಸಾರ್ವಜನಿಕರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮೇ 10 ರಂದು ವಿಧಾನಸಭೆ ಚುನಾವಣೆ ರಣಕಹಳೆ ಮೊಳಗಿದೆ, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ಮೀನಾ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ರಾಜ್ಯದಲ್ಲಿ ಈವರೆಗೆ 265 ಕೋಟಿ ಹಣ ಜಪ್ತಿ ಮಾಡಲಾಗಿದೆ . ಗುಂಪು ಘರ್ಷಣೆ ಸಂಬಂಧ 15 ಎಫ್‌ಐಆರ್ ದಾಖಲಾಗಿದೆ.
ದ್ವೇಷ ಭಾಷಣ ಸಂಬಂಧ 5 ಎಫ್‌ಐಆರ್ ಸೇರಿ ಒಟ್ಟು 643 ಎಫ್‌ಐಆರ್ ದಾಖಲಾಗಿದೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ. ಮೇ.10ರಂದು ರಾಜ್ಯ ದ 224 ಕ್ಷೇತ್ರಗಳಲಿ ಮತದಾನ ನಡೆಸಲಿದೆ.ಕರ್ನಾಟಕದಲ್ಲಿರುವವ ರಾಜ್ಯದಲ್ಲಿ ಒಟ್ಟು 5,30,85,566 ಮತದಾರರರು ಇದ್ದಾರೆ. ಪುರುಷ ಮತದಾರರ ಸಂಖ್ಯೆ 2,66,82,156 ಹಾಗೂ ಮಹಿಳಾ ಮತದಾರರ ಸಂಖ್ಯೆ 2,63,98,483 ಆಗಿದೆ. 16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೊಸದಾಗಿ ಸೇರ್ಪಡೆಯಾದವರಲ್ಲಿ 11,71,558 ಯುವ ಮತದಾರರಾಗಿದ್ದು, 18-19 ವಯಸ್ಸಿನವರಾಗಿದ್ದಾರೆ.
2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ. ರಾಜ್ಯದಲ್ಲಿ 58,545 ಪೋಲಿಂಗ್ ಸ್ಟೇಷನ್ ಸ್ಥಾಪಿಸಲಾಗುವುದು. 1,15,709 ಇವಿಎಂ, 89379 ವಿವಿಪ್ಯಾಟ್ ಯಂತ್ರ ಅಳವಡಿಸಲಾಗುವುದು.47,488 ಯೋಧರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ. 80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿದ್ದಾರೆ. ಪ್ರತಿ ಬೂತ್ ನಲ್ಲಿ ನೋಂದಾಯಿಸಿದ ಮತದಾರರಿಗೆ ಪೂರ್ವ ಮಾಹಿತಿ ನೀಡಲಾಗುವುದು. 19279 ವಿಕಲ ಚೇತನರು, 13771 ಅಗತ್ಯ ಸೇವೆ ಒದಗಿಸುವವರು ನೋಂದಾಯಿಸಿದ್ದಾರೆ ಎಂದರು.
ಸಿದ್ದಿ ಟಿವಿ