Election : ತಮಟೆ ಬಾರಿಸಿ ಬೀದಿ ನಾಟಕಕ್ಕೆ ಚಾಲನೆ ನೀಡಿದ ತಾಪಂ ಇಓ ಮಹಾಂತಗೌಡ ಪಾಟೀಲ್


ತಮಟೆ ಬಾರಿಸಿ ಬೀದಿ ನಾಟಕಕ್ಕೆ ಚಾಲನೆ ನೀಡಿದ ತಾಪಂ ಇಓ ಮಹಾಂತಗೌಡ ಪಾಟೀಲ್

 ಗಂಗಾವತಿ : ತಾಲೂಕಿನ ಬಸಾಪಟ್ಟಣದಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾ ಪಂಚಾಯತ್‌ ಸ್ವೀಪ್‌ ಸಮಿತಿ, ತಾಲೂಕು ಪಂಚಾಯತ್‌ ಸ್ವೀಪ್‌ ಸಮಿತಿಯಿಂದ ಆಯೋಜಿಸಿದ್ದ ಬೀದಿ ನಾಟಕಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್‌ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಸತತ ಮೂರು ದಿನಗಳ ಕಾಲ ಗಂಗಾವತಿ ತಾಲೂಕಿನಲ್ಲಿ ಸರಸ್ವತಿ ಕಲಾ ಸಾಂಸ್ಕೃತಿಕ ತಂಡದವರು ವಿವಿಧ ಗ್ರಾಮದ ಮತಗಟ್ಟೆಗಳಿಗೆ ತೆರಳಿ ಬೀದಿ ನಾಟಕ ಹಾಗೂ ಮತದಾನ ಜಾಗೃತಿ ಗೀತೆಗಳನ್ನು ಹಾಡಿ ಜನರಿಗೆ ಮತದಾನದ ಮಹತ್ವ ತಿಳಿಸಲಿದ್ದಾರೆ. ಮತದಾನ ಪ್ರಮಾಣ ಹೆಚ್ಚಿಸಲು ವಿಭಿನ್ನ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯ ಮಾತದಾನ ಮಾಡಬೇಕು ಎಂದರು.

ಗ್ರಾ.ಪಂ. ಪಿಡಿಓ ಶ್ರೀಮತಿ ಇಂದಿರಾ ಅವರು, ಮತದಾನ ಮಹತ್ವ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಕಾರ್ಯದರ್ಶಿ ನಾಗೇಶ ಸಜ್ಜನ್‌, ತಾಪಂ ವಿಷಯ ನಿರ್ವಾಹಕರಾದ ಸಂತೋಷ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಸಿಬ್ಬಂದಿಗಳಾದ ಶರಣಪ್ಪ, ಹುಲಗಪ್ಪ, ಬೆಟ್ಟಪ್ಪ ಇದ್ದರು.

ವರದಿ : ಚನ್ನಕೇಶವ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">