ಕಂಪ್ಲಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ನಿಮಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ಪ್ರಕ್ರಿಯೆಯು ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಕಂಪ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಕಂಪ್ಲಿ ಪ್ರಮುಖ ಬೀದಿಗಳಲ್ಲಿ ಭದ್ರತಾ ಪಡೆಯ ಪಥಸಂಚಲನ ಜರುಗಿತು.
ಪಿಐ ಸುರೇಶ ಹೆಚ್.ತಳವಾರ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಐಟಿಬಿಪಿ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಐಟಿಬಿಪಿ ಪ್ಯಾರಾ ಮಿಲಿಟರಿ ಆರ್ ಪಿಐ ಅಮೋಘ ಮತ್ತು ಆರ್.ಎಸ್.ಐ ಬಾಬುಬಲಿ ನೇತೃತ್ವದ 65 ಸಿಬ್ಬಂದಿ ತಂಡ ಕಂಪ್ಲಿಗೆ ಆಗಮಿಸಿದೆ ಎಂದರು.ಈ ಸಂದರ್ಭದಲ್ಲಿ ಕುರುಗೋಡು ಸಿಪಿಐ ಜಯಪ್ರಕಾಶ್,ಪಿಎಸ್‌ಐಗಳಾದ ವಿಜಯ ಪ್ರತಾಪ್, ಶಾರವ್ವದೊಡ್ಡಾಣಿ ಹಾಗೂ ಇತರರು ಇದ್ದರು.
ವರದಿ : ಚನ್ನಕೇಶವ
Tags
ರಾಜ್ಯ