Ex Cm ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ: ಅಮಿತ್ ಶಾ
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರು ಗೆಲ್ಲುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಜಗದೀಶ ಶೆಟ್ಟರ್ ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ಗೆ ಸೇರಿದ್ದರಿಂದ ನಷ್ಟವಾಗದು . ಜಗದೀಶ್ ಶೆಟ್ಟರ್ ಅವರಿಗೆ ಎಲ್ಲಾ ವಿಚಾರ ಗೊತ್ತಿದೆ. ಅವರಿಗೆ ಟಿಕೆಟ್ ಯಾಕೆ ನೀಡಿಲ್ಲ ಎಂಬ ಬಗ್ಗೆ ಕೂಡ ತಿಳಿಸಿದ್ದೇವೆ. ನಾವು ಬಹಿರಂಗ ಪಡಿಸುವುದಿಲ್ಲ. ಈ ಬಗ್ಗೆ ಜನರು ಕೇಳಿದರೆ ಅವರಿಗೆ ಉತ್ತರ ನೀಡ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಶೆಟ್ಟರ್ ಒಬ್ಬರಿಗೇ ಟಿಕೆಟ್ ತಪ್ಪಿಸಿಲ್ಲ. ಹಲವಾರು ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲ. ಕಾರಣವನ್ನು ಅವರಿಗೇ ಹೇಳಿದ್ದೇವೆ. ಅವರು ಸಿಎಂ, ಉಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಯಾರ ಮುಷ್ಟಿಯಲ್ಲಿತ್ತು, ಯಾರ ಮುಷ್ಟಿಯಲ್ಲಿಯೂ ಇಲ್ಲ. ಹಿಂದಿನಿಂದ ಹೇಗಿದೆಯೋ ಹಾಗೆಯೇ ಇದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡಬಲ್ ಎಂಜೀನ್ ಸರ್ಕಾರ ದಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಿಂಗಾಯತರಿಗೆ ಅನ್ಯಾಯತರಿಗೆ ಅನ್ಯಾಯ ಆಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತರನ್ನು ತೆಗೆದು ನಾವು ಲಿಂಗಾಯತರಿಗೇ ಟಿಕೆಟ್ ಕೊಟ್ಟಿದ್ದೇವೆ. ಬೇರೆಯವರಿಗೆ ಕೊಟ್ಟಿಲ್ಲ. ಕಾಂಗ್ರೆಸ್ ಇಬ್ಬರು ಲಿಂಗಾಯತ ಮುಖ್ಯಮಂತ್ರಿಗಳಿಗೆ ಅಪಮಾನ ಮಾಡಿದೆ. ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಹೇಳಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ. ಬಿಜೆಪಿ ಎಲ್ಲ ಸಮುದಾಯಕ್ಕೂ ಗೌರವ ಕೊಟ್ಟಿದೆ. ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ಖಾಯಂ ಅಧ್ಯಕ್ಷರು. ಬಿಜೆಪಿಯಲ್ಲಿ ಅದ್ಯಕ್ಷರು ಮುಖ್ಯಮಂತ್ರಿಗಳು ಪದಾಧಿಕಾರಿಗಳು ಬದಲಾಗುತ್ತಾರೆ ಎಂದರು.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಂದುವರಿದಿದೆ. ಯಾವುದೇ ವ್ಯತಿರಿಕ್ತ ಅಭಿಪ್ರಾಯ ಸುಪ್ರೀಂ ಕೋರ್ಟ್ ನೀಡಿಲ್ಲ. ನಾವು ಜನರಿಗೆ ಮೀಸಲಾತಿ ನೀಡುವ ಬದ್ಧತೆ ಹೊಂದಿದ್ದೇವೆ. ನಾನು ಕಾಂಗ್ರೆಸ್ ಪಕ್ಷವನ್ನು ಕೇಳುತ್ತಿದ್ದೇನೆ. ಯಾವುದನ್ನು ಕಡಿಮೆ ಮಾಡ್ತಿರಿ ಹೇಳಿ, ಯಾರಿಂದ ಮೀಸಲಾತಿ ವಾಪಸ್ ಪಡೆಯುತ್ತೀರಿ. ಕಾಂಗ್ರೆಸ್ ಲಿಂಗಾಯತರಿಗೆ ಏನು ಮಾಡಿದೆ. ಕಾಂಗ್ರೆಸ್ ಲಿಂಗಾಯತ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನಿಜಲಿಂಗಪ್ಪ ಅವರನ್ನು ಬಳಕೆ ಮಾಡಿ ಕೈಬಿಡಲಾಯಿತು ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಮೀಸಲಾತಿ ತರ್ತೇವಿ ಅಂತ ಕಾಂಗ್ರೆಸ್ ಹೇಳ್ತಿದೆ. ಹಾಗಾದರೆ ಯಾರ ಮೀಸಲಾತಿ ಕಡಿತ ಮಾಡುತ್ತೆ ಅಂತ ಕಾಂಗ್ರೆಸ್ ಹೇಳಲಿ. ಧರ್ಮಾಧಾರಿತ ಮೀಸಲಾತಿಯನ್ನು ಎಂದೂ ಒಪ್ಪಲ್ಲ. ಕಾಂಗ್ರೆಸ್ ನವರು ಲಿಂಗಾಯಿತರಿಗೆ ಪದೇ ಪದೇ ಅಪವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸತತ ಎರಡನೇ ಬಾರಿಗೆ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಗೆ ಚುನಾವಣೆಗೆ ಟಿಕೆಟ್ ನೀಡದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಗೆಲ್ಲುವ ಅರ್ಹತೆಯ ಆಧಾರದಲ್ಲಿ ಟಿಕೆಟ್ ನೀಡಿದ್ದೇವೆ. ಬಹುಸಂಖ್ಯಾತ-ಅಲ್ಪಸಂಖ್ಯಾತ ಎಂಬ ನೆಲೆಯಲ್ಲಿ ಟಿಕೆಟ್ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಪಿಎಫ್ಐಗೆ ವಿಶೇಷ ಟ್ರೀಟ್ ಮೆಂಟ್ ಕೊಟ್ಟಿತು. ಆದ್ರೆ ನಾವು ಇದಕ್ಕೆ ಲಗಾಮು ಹಾಕಿದ್ದೇವೆ. ಕಾಂಗ್ರೆಸ್ ಕಿತ್ತೂರು ಕರ್ನಾಟಕಕ್ಕೆ ಅಪಮಾನ ಮಾಡೋ ಕೆಲಸ ಮಾಡಿತು. ಮಹಾದಾಯಿ ಹೋರಾಟಕ್ಕೆ ಕಾಂಗ್ರೆಸ್ ನ್ಯಾಯ ನೀಡಲಿಲ್ಲ. ಆದ್ರೆ ನಮ್ಮ ಬಿಜೆಪಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದೆವು. ಕೃಷ್ಣಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಯೋಜನೆಗಳಿಗೂ ಆದ್ಯತೆ ನೀಡಿದ್ದೇವೆ. ಕೆರೂರು ಲಿಫ್ಟ್ ಯೋಜನೆಗೂ ಆದ್ಯತೆ ನೀಡಿದ್ದೇವೆ. ಧಾರವಾಡ – ಬೆಳಗಾವಿ ರೈಲ್ವೆ ಯೋಜನೆಗೂ ಚಾಲನೆ ಸಿಗಲಿದೆ ಎಂದರು.
ವರದಿ : ಬಸವರಾಜ ಕಬಡ್ಡಿ