ಹಿರಿಯ ರಾಜಕೀಯ ಮುತ್ಸದಿ ರಾಮುಲು ನಿವಾಸಕ್ಕೆ ಭೇಟಿ ನೀಡಿದ ಕೆಆರ್ಪಿಪಿ ಬ್ರಹ್ಮೀಣಿ
ಗಂಗಾವತಿ : ಕೊಪ್ಪಳ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಗಂಗಾವತಿಯ ಹೆಚ್ ಜಿ ರಾಮುಲು ನಿವಾಸಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಟಾರ್ ಪ್ರಚಾರಕಿ ಬ್ರಹ್ಮೀಣಿ ರಾಜೀವ್ ರೆಡ್ಡಿ ನೀಡಿದರು.
ಚುನಾವಣೆ ಇನ್ನೂ ಕೇವಲ ಹತ್ತು ದಿನ ಬಾಕಿಯಿದ್ದಂತೆ ಕೆಆರ್ಪಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿಯವರ ಮಗಳು ತಂದೆಯನ್ನು ಗೆಲ್ಲಿಸುವ ಸಲುವಾಗಿ ನಗರದಲ್ಲಿ ವಾಸ್ತವ್ಯ ಹೂಡಿದ್ದು ಈ ದಿನ ನಗರದ ಹಿರಿಯ ರಾಜಕೀಯ ಮುತ್ಸದ್ದಿ ಹೆಚ್ ಜಿ ರಾಮುಲು ನಿವಾಸಕ್ಕೆ ಭೇಟಿ ನೀಡಿ ಅರ್ಶಿವಾದ ಪಡೆದರು.
ನಂತರ ವಿವೇಕಾನಂದ ಕಾಲೋನಿಯಲ್ಲಿರುವ ಸಿಪಿಐ ಕಾರ್ಮಿಕ ಸಂಘಟನೆಯ(AIUTC) ಕಚೇರಿಗೆ ಭೇಟಿ ನೀಡಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುಗಪ್ಪ, ಕಾರ್ಯದರ್ಶಿ ತಿಮ್ಮಪ್ಪ ರನ್ನು ಕಂಡು ಬಡ ವರ್ಗದ ಕಾರ್ಮಿಕರ ಪರವಾಗಿ ನಮ್ಮ ತಂದೆ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಶಕ್ತಿ ಘಟಕದ ನಗರ ಸಂಚಾಲಕ ಮುಖಂಡರಾದ ಸೈಯದ್ ಅಲಿ, ರಾಜೇಶ್ ರೆಡ್ಡಿ ಸಾಥ್ ನೀಡಿದರು.
ವರದಿ : ಚನ್ನಕೇಶವ