ಗೊರೆಬಾಳ ಗ್ರಾಮದಲ್ಲಿ ಬಸವ ಜಯಂತಿ ಆಚರಿಸಿ ಭಾರತೀಯ ಜನತಾ ಪಾರ್ಟಿಯ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ನಮ್ಮ ಮುಖಂಡರಾದ ಕೊಲ್ಲಾ ಶೇಷಗಿರಿರಾವ್ ತುಂಗಭದ್ರಾ ಕಾಡಾ ಅಧ್ಯಕ್ಷರು ಮಾತನಾಡಿ ಬರುವ ಮೇ 2 ನೇ ತಾರೀಕು ನಮ್ಮ ದೇಶದ ನೆಚ್ಚಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರು ಸಿಂಧನೂರಿಗೆ ಆಗಮಿಸಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರಾದ ಸಂತೋಷ ಗೊರೆಬಾಳ, ಮಲ್ಲಿಕಾರ್ಜುನ ಭೀಮರಾಜಕ್ಯಾಂಪ್,ಶರಣು ಗೊರೆಬಾಳ,ಮಂಜುನಾಥ್, ರಾಮಕೃಷ್ಣ, ಬಸನಗೌಡ N, ವಿರೇಶ್ ಕಾಪಗಲ್, ಬಸವರಾಜ್, ಶರಣಪ್ಪ ನಾಯಕ,ಸುರೇಶ ಬಲ್ಲಾಟಗಿ, ಮಹಾಂತೇಶ್, ಬಾಲಕೃಷ್ಣ,ಬಸವರಾಜ್. ಕೆ,ಹಾಗೂ ಗ್ರಾಮದ ಮುಖಂಡರು ಭಾರತೀಯ ಜನತಾ ಪಾರ್ಟಿಯ ಅಭಿಮಾನಿಗಳು ಪಾಲ್ಗೊಂಡಿದ್ದರು.
ವರದಿ : ಡಿ.ಅಲಂಭಾಷಾ