ಕೊಪ್ಪಳ ಸಿ.ವಿ.ಚಂದ್ರಶೇಖರ ಜೆಡಿಎಸ್ ಸೇರ್ಪಡೆ : ಕೊನೆಗೂ ಜೆಡಿಎಸ್ ಬಾಗಿಲು ತಟ್ಟಿದ ಸಿವಿಸಿ
ಕೊಪ್ಪಳ,: ರಾಜ್ಯದ ರಾಜಕೀಯದಲ್ಲಿ ಪಕ್ಷಾಂತರ ನಡೆದಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸಿವಿ ಚಂದ್ರಶೇಖರ ಮಂಗಳವಾರ ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಮಂಗಳವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಸಿ.ವಿ.ಚಂದ್ರಶೇಖರ ಜೆಡಿಎಸ್ ಸೇರಿದರು.
ಈ ವೇಳೆ ಸುರೇಶ ಭೂಮರಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಅಯುಬ್ ಅಡ್ಡೆವಾಲೆ, ಶಫಿ ಕೊಟ್ಟೂರು, ಬಷೀರ್ ದಫೇದಾರ್, ಖಾಜಾವಲಿ ಬನ್ನಿಕೊಪ್ಪ, ವಕ್ತಾರ ಮೌನೇಶ ವಡ್ಡಟ್ಟಿ ಸೇರಿದಂತೆ ಅನೇಕರು ಇದ್ದರು.
ಜೆಡಿಎಸ್ ಸೇರ್ಪಡೆಯ ಕಾರಣ :
ಹಲವಾರು ವರ್ಷಗಳ ಕಾಲ ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತ ಬಂದಿದ್ದ ಕೊಪ್ಪಳದ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಸಿವಿ ಚಂದ್ರಶೇಖರ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕಾಗಿತ್ತು. ಕಳೆದ ಬಾರಿ ಬಹುತೇಕ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸುವ ಕ್ಷಣಾರ್ಧದಲ್ಲಿಯೇ ಅಮರೇಶ ಕರಡಿ ಅವರಿಂದ ಟಿಕೆಟ್ ವಂಚಿತರಾಗಿದ್ದರು. ಮತ್ತೆ ಈ ಬಾರಿಯೂ ಬಿಜೆಪಿ ಟಿಕೆಟ್ ನೀಡುವಲ್ಲಿ ಪಕ್ಷ ವಿಫಲವಾಗಿದೆ. ಹೀಗಾಗಿ ಅನಿವಾರ್ಯವಾಗಿ ಸಿವಿ ಚಂದ್ರಶೇಖರ ಅವರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಒಟ್ಟಿನಲ್ಲಿ 2023ರ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಸಿವಿ ಚಂದ್ರಶೇಖರ ಇಳಿಯುವುದು ಖಚಿತವಾಗಿದೆ.
ವರದಿ: ಶಿವಕುಮಾರ ಹಿರೇಮಠ