JN Ganesh : ಹೊಸ ನೆಲ್ಲೂಡಿಯಲ್ಲಿ ಜೆ.ಎನ್. ಗಣೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಮತಯಾಚನೆ

ಹೊಸ ನೆಲ್ಲೂಡಿಯಲ್ಲಿ ಜೆ.ಎನ್. ಗಣೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಮತಯಾಚನೆ

ಕಂಪ್ಲಿ ಸಮೀಪದ ಹೊಸ ನೆಲ್ಲೂಡಿಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಪರವಾಗಿ ಕಂಪ್ಲಿ ಶಾಸಕರಾದ ಜೆ.ಎನ್. ಗಣೇಶ್ ರವರ ಜೊತೆಗೂಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿಯಾಗಿ ಮನೆ ಮನೆಗೆ ಭೇಟಿ ನೀಡಿ ಜನ ಆಶೀರ್ವಾದ ಪಡೆಯುತ್ತಾ ಮತಯಾಚನೆಯನ್ನು ಮಾಡಿದರು.

 ಹೊಸ ನೆಲ್ಲೂಡಿ ಗ್ರಾಮದಲ್ಲಿ ಜೆ.ಎನ್. ಗಣೇಶ್ ರವರ  ಅಭಿಮಾನಿ ಬಳಗದಿಂದ ಅದ್ದೂರಿಯದ ಸ್ವಾಗತವನ್ನು ಜೆ.ಎನ್ ಗಣೇಶ್ ರವರಿಗೆ ನೀಡಿದರು, ಹಾಗೂ ಉತ್ತಮ ಸ್ಪಂದನೆ ನೀಡಿದ್ದು ಕಾಂಗ್ರೇಸ್ ಪಕ್ಷಕ್ಕೆ ಸಂಪೂರ್ಣ  ಊರಿನ ಎಲ್ಲಾ ಸಮುದಾಯದ ಮುಖಂಡರು,  ಹಿರಿಯರು,  ಯುವಕರು ಕೂಡಿ ಜೆ.ಎನ್. ಗಣೇಶ್ ರವರಿಗೆ ಮತ ನೀಡಿ ಎಂದು ಮತಯಾಚನೆಯನ್ನು ಮಾಡಿದರು..

ಈ ಸಂದರ್ಭದಲ್ಲಿ ಹೆಚ್. ಸೋಮನಗೌಡ್ರು ಮಾತನಾಡಿದ  ಕಳೆದ ಐದು ವರ್ಷದಿಂದ ಜೆ.ಎನ್ ಗಣೇಶ್ ರವರು ಕಂಪ್ಲಿ ಕ್ಷೇತ್ರದಲ್ಲಿ  ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿರುವುದು ಕಂಡು ಬಂದಿದ್ದು, ಈ ವರ್ಷವೂ ಸಹ ಕಾಂಗ್ರೆಸ್ ಪಕ್ಷದ ವತಿಯಿಂದ ಜೆ.ಎನ್. ಗಣೇಶ ರವರು ಅತೀ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುತ್ತಾರೆ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಎಚ್  ಸಣ್ಣ ಹುಲುಗಪ್ಪ ಮಾತನಾಡಿ ನಮ್ಮ ಊರಿನ ಎಲ್ಲಾ ಸಮುದಾಯದವರು ಕೊಡಿ ಜೆ.ಎನ್ ಗಣೇಶ್ ರವರರಿಗೆ ಮತವನ್ನು ನೀಡುತ್ತೇವೆ, 

ಇಂದು ವಿಶೇಷವಾಗಿ ನಮ್ಮ ಸಂವಿಧಾನ ಶಿಲ್ಪಿ, ಡಾ. ಬಿ‌.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹಾಗೂ ನಮ್ಮ ಸಮುದಾಯದ ವತಿಯಿಂದ ನೀಲಿ ವಸ್ತ್ರಗಳನ್ನು ಎಲ್ಲಾ ಸಮುದಾಯದವರಿಗೆ ನೀಡಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು..

ನಮ್ಮ ದಲಿತ ಸಮುದಾಯಕ್ಕೆ ಅನ್ಯಾಯವಾದರೆ ಮುಂದೆ ನಿಲ್ಲುವ ವ್ಯಕ್ತಿ ಎಂದರೆ ನಮ್ಮ ಜೆ.ಎನ್ ಗಣೇಶ್ ಅಣ್ಣನವರು ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಹೊಸ ನೆಲ್ಲೂಡಿ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಹಿರಿಯರು ಯುವಕರು ಹಾಗೂ ಜೆ.ಎನ್. ಗಣೇಶ್ ರವರ ಅಭಿಮಾನಿಗಳ ಬಳಗ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು....

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">