ಕಂಪ್ಲಿ.ಏ.04:ಪಟ್ಟಣದ ಶಿವಶಕ್ತಿ ಅಕ್ಕಿಗಿರಣಿ ರೈಸ್ ಮಿಲ್ ಆವರಣದಲ್ಲಿ ಮಂಗಳವಾರ ಜೆಡಿಎಸ್ ಪಕ್ಷ ಅಯೋಜಿಸಿದ್ದ ಜೆಡಿಎಸ್ ಪಕ್ಷದ ಪತ್ರಿಕಾಗೋಷ್ಠಿಯಲ್ಲಿ ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಾಜುನಾಯಕ ಮಾತನಾಡಿ, ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಕನ್ನಡಿಗರ ಪಕ್ಷವಾದ ಜೆಡಿಎಸ್‍ನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕಿದೆ. ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಮೀಸಲನ್ನು ಬಿಜೆಪಿ ಕಿತ್ತುಕೊಳ್ಳುವಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂದ ಅವರು ಮುಸ್ಲಿಮರ ಮೀಸಲು ಕಿತ್ತುಕೊಂಡಿದ್ದಕ್ಕಾಗಿ ಹಾಲಿ ಶಾಸಕ ಗಣೇಶ್ ಅವರಾಗಲಿ, ಮಾಜಿ ಶಾಸಕ ಸುರೇಶ್‍ಬಾಬು ಅವರಾಗಲಿ ಚಕಾರ ಎತ್ತಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಬಹುಮತ ಇಲ್ಲದಿದ್ದರೂ ಜೆಡಿಎಸ್ ಪಕ್ಷ ಎರಡು ಬಾರಿ ರಾಜ್ಯದ ಚುಕ್ಕಾಣಿ ಹಿಡಿದು ಉತ್ತಮ ಆಡಳಿತ ನಡೆಸುವ ಮೂಲಕ ರೈತಪರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಆನೇಕ ಯೋಜನೆ ರೂಪಿಸಿ ಅನುಕೂಲ ಕಲ್ಪಿಸಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನರು ರಾಷ್ಟಿಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ, ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡುತ್ತಾರೆ. ಮತ್ತೆ ರಾಜ್ಯದ ಅಧಿಕಾರ ಜೆಡಿಎಸ್ ವಹಿಸಲಿದೆ ಎಂದರು.
ನಂತರ ಜೆಡಿಎಸ್ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಜೆಡಿಎಸ್ ಪಕ್ಷದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಕಳೆದ 15 ವರ್ಷದಿಂದ ಉತ್ತಮ ನಾಯಕನ ಕೊರತೆ ಕಾಡುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ ಜನ ಸೇವೆ ಮಾಡುವ ಹಂಬಲ ಹೊತ್ತಿರುವ ರಾಜು ನಾಯಕ ಅಭ್ಯರ್ಥಿಯಾಗಿರುವುದು ಸಂತಸ ತಂದಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಸಂಘಟನೆ ಗಟ್ಟಿಗೊಳಿಸಲು ಹಾಗೂ ಜನರಿಗೆ ಪಕ್ಷದ ಪಂಚರತ್ನ ಯೋಜನೆಯ ಕುರಿತು ತಿಳಿಸಲು ಮುಂದಾಗಬೇಕು.ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಯೋಜನೆಗಳನ್ನು ಅನುಷ್ಟಾನಗೊಳಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೀಲಿನಕ್ಷೆ ತಯಾರಿಸಿದ್ದಾರೆ. ಕಂಪ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಪರ್ಧಿಸಲಿರುವ ಅಭ್ಯರ್ಥಿ ರಾಜುನಾಯಕರನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬೂದಗುಂಪಿ ಅಂಬಣ್ಣ,ಅಯ್ಯೋದಿ ವೆಂಕಟೇಶ್,ಎಂ.ಹೇಮರೆಡ್ಡಿ, ಪಾಡಗುತ್ತಿ ಅಕ್ತರ್ ಸಾಬ್,ವಿಶ್ವನಾಥಸ್ವಾಮಿ, ನಾರಾಯಣರೆಡ್ಡಿ, ದೊಡ್ಡಪ್ಪ, ಗಂಗಾವತಿ ತಾಲೂಕು ಅಧ್ಯಕ್ಷ ಶೇಖ್‍ನಬೀ ಕೃಷ್ಣನಾಯಕ್,ಜಗದೀಶ್ ಪೂಜಾರ್,ಇರ್ಪಾನ್,ಹನುಮೇಶ ನಾಯಕ, ಸೇರಿದಂತೆ ಅನೇಕರಿದ್ದರು.
ವರದಿ : ಚನ್ನಕೇಶವ
Tags
ರಾಜಕೀಯ