ರಾಜಕೀಯ ನಾಯಕರು ಮಠ ಮಂದಿರಗಳ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯತೆ ಇದೆ : ವಾಮದೇವ ಶ್ರೀಗಳು
ಪ್ರಾಮಾಣಿಕವಾಗಿ ಶ್ರಮಿಸಿದ ನಾಯಕರಿಗೆ ಯಶಸ್ಸು ತೇರದ ಬಾಗಿಲು ಇದ್ದಂತೆ ಶಾಸಕ ಸೋಮಲಿಂಗಪ್ಪ ಗೆ ಕಿವಿ ಮಾತು ಸೂಚಿಸಿದ ಶ್ರೀಗಳು
ಕಂಪ್ಲಿ.ಏ.04:ಪ್ರಾಮಾಣಿಕವಾಗಿ ಸೇವೆ ಮಾಡಿದವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತೆ ಅದರ ಬಗ್ಗೆ ಸಂಶಯ ವಿಲ್ಲ ಎಂದು ಹಂಪಿ ಸಾವಿರ ದೇವರ ಮಠದ ಎಮ್ಮಿಗನೂರಿನ ಶ್ರೀ ವಾಮದೇವ ಶ್ರೀಗಳು ಹೇಳಿದರು.
ಸಮೀಪದ ಎಮ್ಮಿಗನೂರು ಗ್ರಾಮದ ವಾಮದೇವ ಶ್ರೀಗಳ ಮಠಕ್ಕೆ ಭೇಟಿ ನೀಡಿದ್ದ ಸಿರುಗುಪ್ಪ ಹಾಲಿ ಶಾಸಕ ಎಂ. ಎಸ್. ಸೋಮಲಿಂಗಪ್ಪ ಅವರಿಗೆ ಅಶ್ರಿವಾದಿಸಿ ಮಾತನಾಡಿದ ಅವರು, ಈಗಾಗಲೇ ಸಿರುಗುಪ್ಪ ಕ್ಷೇತ್ರದ ಅನೇಕ ಸಾರ್ವಜನಿಕರು ನಮ್ಮ ಮಠಕ್ಕೆ ಬಂದು ಹೋಗುತ್ತಿದ್ದಾರೆ ಸೋಮಲಿಂಗಪ್ಪ ಅವರ ಅವಧಿಯಲ್ಲಿ ಅನೇಕ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸೌಲಭ್ಯಗಳು ಸಿಗುತ್ತಿವೆ ಅವರಿಂದ ರೈತರಿಗೆ ತುಂಬಾ ಅನುಕೂಲ ವಾಗಿದೆ ಎಂದು ಹೇಳುತ್ತಿದ್ದಾರೆ ಪ್ರಾಮಾಣಿಕ ವಾಗಿ ಶ್ರಮಿಸುವ ವ್ಯಕ್ತಿಗಳಿಗೆ ಯಶಸ್ಸು ಯಾವಾಗ್ಲೂ ತೆರೆದ ಬಾಗಿಲು ಇದ್ದಂತೆ ಎಂದು ಹೇಳಿದರು.
ರಾಜಕೀಯ ಪ್ರತಿನಿಧಿಗಳು ಮಠ ಮಂದಿರಗಳನ್ನು ಕಂದಾಯ, ಕೋರ್ಟ್ ಸೇರಿದಂತೆ ಇತರೆ ಇಲಾಖೆ ಅಡಿಯಲ್ಲಿ ವ್ಯಾಪ್ತಿಯ ಒಳಗೆ ಬರುವಂತೆ ಒಳಪಡಿಸಿ ಎಂದು ಕಿವಿ ಮಾತು ಹೇಳಿದರು.
ಮಠಕ್ಕೆ ಬರುವ ರಾಜಕೀಯ ನಾಯಕರಿಗೆ ಕೇವಲ ನಾವು ಗೋಪುರಕ್ಕೆ ಕಳಸ ಇಲ್ಲ, ಹೆಣ್ಣೆ, ಕಟ್ಟಡ ಸೇರಿದಂತೆ ಸಣ್ಣ ಪುಟ್ಟ ಸಹಕಾರ ಕೇಳುತ್ತೇವೆ ಅದನ್ನು ಬಿಟ್ಟು ಬೇರೆ ಕೇಳುವುದಿಲ್ಲ ಆದ್ದರಿಂದ ಇಲಾಖೆ ಅಡಿಯಲ್ಲಿ ಒಳಪಟ್ಟರೆ ಮಠ ಮಂದಿರಗಳು ಅಭಿವೃದ್ಧಿ ಹೊಂದುತ್ತವೆ ಎಂದರು.
ಸದ್ಯ ಸಂವಿಧಾನ ಜಾರಿಗೆ ಬಂದ ನಂತರ 80 ರಷ್ಟು ಮಠ ಮಂದಿರಗಳ ಬಗ್ಗೆ ಜನರು ಆಶಕ್ತಿ ತೋರುತ್ತಿದ್ದು, ಅಭಿವೃದ್ಧಿ ಕಡೆಗೆ ತೆಲೆ ಎತ್ತಿವೆ, ಇನ್ನಷ್ಟು ರಾಜಕೀಯ ನಾಯಕರು ಇದರ ಬಗ್ಗೆ ಆಸಕ್ತಿ ವಹಿಸಬೇಕಾದ ಅಗತ್ಯತೆ ಇದೆ ಎಂದರು.
ನಮ್ಮ ಮಠ ಈ ಹಿಂದೆ ಸಿರುಗುಪ್ಪ ದಲ್ಲಿ ನೆಲೆ ಪಡೆದಿತ್ತು, 2000 ಸಾವಿರ ಎಕರೆ ಯಷ್ಟು ಪ್ರದೇಶ ವನ್ನು ಪಡೆದಿತ್ತು, ಆದರೆ ಅಲ್ಲಿ ಸರಿಯಾಗಿ ನೆಲೆ ಪಡಿಯದೆ ಬೇರೆ ಕಡೆಗಳಲ್ಲಿ ಉತ್ತಮ ವಾಗಿ ನೆಲೆ ಉರಿ ಭಕ್ತಾದಿಗಳ ಸೇವೆ ಮಾಡುತ್ತಿದೆ ಎಂದರು.
ನಂತರ ಶಾಸಕ ಸೋಮಲಿಂಗಪ್ಪ ಮಾತನಾಡಿ, ಏ.13 ರ ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟ ಗೋಳುತ್ತಿದ್ದು, ಕ್ಷೇತ್ರದಲ್ಲಿ ಅನೇಕ ಜನ ಪರ ಯೋಜನೆ ಗಳು ಕೈಗೊಂಡಿದ್ದೇವೆ, ಜನರ ಒಲವು ಕೂಡ ನಮ್ಮ ಪಕ್ಷದ ಮೇಲೆ ಜೊತೆಗೆ ತಮ್ಮ ಅಶ್ರಿವಾದ ಕೂಡ ನಮ್ಮ ಮೇಲಿರಲಿ ಎಂದು ಅಶ್ರಿವಾದ ಪಡೆದರು.
ಈಗಾಗಲೇ ರೈತರಿಗೆ ಏತ ನೀರಾವರಿ, ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗೆ ಶಾಲಾ, ಕಾಲೇಜ್, ವಸತಿ ನಿಲಯ ಕಲ್ಪಿಸಿ ಸಲಾಗಿದೆ. ಕೃಷಿ ಚಟುವಟಿಕೆಗೆ ಕಾಲುವೆಗೆ ನಿರು ಒದಗಿಸುವ ಕಾರ್ಯ ಕೂಡ ರೈತರಿಗೆಮಾಡಲಾಗಿದೆ. ಸಾರ್ವಜನಿಕರು ಓಡಾಡಲು ರಸ್ತೆ, ಸೇತುವೆ ಸೇರಿದಂತೆ ಅನೇಕ ಯೋಜನೆ ಗಳನ್ನು ಕ್ಷೇತ್ರದ ಜನರಿಗೆ ಒದಗಿಸಲಾಗಿದೆ ಮುಂದಿನ ಚುನಾವಣೆಗೆ ನಮ್ಮ ಸರಕಾರದ ಯೋಜನೆ ಗಳೇ ಗೆಲುವೆಗೆ ಶ್ರೀ ರಕ್ಷೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಆರ್. ಸಿ. ಪಂಪಾನ ಗೌಡ, ಮುಖಂಡರಾದ ವೀರನ ಗೌಡ, ಎಂ. ಆರ್. ಗೌಡ, ಕುಂಟ್ಲಾಳ್ ಮಲ್ಲಿಕಾರ್ಜುನ ಸ್ವಾಮೀ, ಬಸವರಾಜ್, ಸೂಳೆ ಮಲ್ಲಿಕಾರ್ಜುನ್, ನಟರಾಜ್, ಗಾಳೆಪ್ಪ, ಬಿ. ದೊಡ್ಡಯ್ಯ, ಮಣ್ಣೂರು ಗ್ರಾಪಂ ಸದಸ್ಯ ಲಕ್ಷ್ಮಿ ದೇವರಾಜ್, ಉಡೆದ್ ಈರಣ್ಣ ಸೇರಿದಂತೆ ಇತರರು ಇದ್ದರು.
ವರದಿ : ಚನ್ನಕೇಶವ
Tags
ರಾಜಕೀಯ