Kampli : ಹಕ್ಕಿಪಿಕ್ಕಿ ಶಿಕಾರಿ ಕಾಲೋನಿಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಭೇಟಿ


ಕಂಪ್ಲಿ. ಏ.29: ಕಂಪ್ಲಿಯ 12ನೇ ವಾರ್ಡಿನ ಹಕ್ಕಿಪಿಕ್ಕಿ ಶಿಕಾರಿ ಕಾಲೋನಿಗೆ ಶನಿವಾರ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ ಭೇಟಿ ನೀಡಿದರು. 

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ, ಡಾ.ಸಿ.ಎಸ್.ದ್ವಾರಕನಾಥ ಅವರು ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಮುದಾಯದವರಿಗೆ ಮನೆ, ಶಿಕ್ಷಣ, ಆರೋಗ್ಯ, ಸ್ವಉದ್ಯೋಗ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಿ ಸಶಕ್ತರನ್ನಾಗಿಸಬೇಕಿದೆ.  ಗುಡಿಸಲು ಮುಕ್ತ ಕರ್ನಾಟಕವನ್ನಾಗಿಸಬೇಕಿದೆ. ಈ ದಿಸೆಯಲ್ಲಿ  ಸರ್ಕಾರದಿಂದ ಸಮೀಕ್ಷೆ ನಡೆಸಲಾಗಿದೆ. ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಮುದಾಯದವರಿಗೆ ಮೂಲಸೌಕರ್ಯಗಳನ್ನು ಒದಗಿಸಿ, ತಾಲೂಕಿಗೊಂದು ಮಾದರಿ ಕಾಲೋನಿ ರೂಪಿಸಲು ಉದ್ದೇಶಿಸಿದೆ. ಅಲೆಮಾರಿ ವಿರೋಧಿಗಳನ್ನು ತಿರಸ್ಕರಿಸಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ವ್ಯವಸ್ಥೆಯಲ್ಲಿ ಮತ ಹಾಕುವ ಅಧಿಕಾರ ನೀಡಿದ್ದಾರೆ ಜನವಿರೋದಿಗಳನ್ನು ದೂರವಿಟ್ಟು ಕಾಂಗ್ರೆಸ್ ಪಕ್ಷದ ಪರವಾಗಿ ಮತ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಎಐಸಿಸಿಯ ಮಹಿಳಾ ಕಾಂಗ್ರೆಸ್  ಸಾಮಾಜಿಕ ನ್ಯಾಯ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿ ಚಮನ್ ಫರ್ಜಾನಾ,ಕೆಪಿಸಿಸಿಯ ಸಾಮಾಜಿಕ ನ್ಯಾಯ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ಗೋಸಂಗಿ ಜನಾಂಗದ ಮುಖಂಡ ಛಾವಡಿ ಲೋಕೇಶ,ಕೆಪಿಸಿಸಿಯ ಸಾಮಾಜಿಕ ನ್ಯಾಯ ವಿಭಾಗದ ಪ್ರಧಾನ ಕಾರ್ಯದರ್ಶಿ ನಾಗರಾಜ,ಹರಿಣಿ ಶಿಕಾರಿ ಸಂಘದ ಮುಖಂಡೆ ಲತಾ,ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿರಾಮು,ಸಿಂಧೋಳ್ಳು ಸಮಾಜದ ರಾಜ್ಯಾಧ್ಯಕ್ಷ ರಾವುಲ್ ನಾಗಪ್ಪ, ಪ್ರಮುಖರಾದ ಹೆಚ್.ಪಿ.ಶ್ರೀಕಾಂತ ಇತರರಿದ್ದರು.

ವರದಿ : ಚನ್ನಕೇಶವ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">