ಕೊಪ್ಪಳ,: ವಿಧಾನಸಭಾ ಕೊಪ್ಪಳ ಕ್ಷೇತ್ರಾದ್ಯಂತ ಜೆಡಿಎಸ್ ಪಕ್ಷದತ್ತ ದಿನ ಕಳೆದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ವಲಸೆ ಹೆಚ್ಚಾಗುತ್ತಿದೆ. ಗುರುವಾರ ದಂದು ತಾಲೂಕಿನ ಕೆರಹಳ್ಳಿ, ಲಿಂಗದಳ್ಳಿ, ಗುಡದಳ್ಳಿ, ಬೇವಿನಹಳ್ಳಿ, ಹಳೇ ಕನಕಾಪುರ, ಹೊಸಕನಕಾಪುರ ತಾಂಡಾ ಹಾಗೂ ಹೊಸಕನಕಾಪುರ ಗ್ರಾಮಗಳಲ್ಲಿ ತಂಡೋಪತಂಡವಾಗಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಅಭ್ಯರ್ಥಿ ಸಿವಿ ಚಂದ್ರಶೇಖರ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಪಣತೊಟ್ಟರು.
ಕ್ಷೇತ್ರಾದ್ಯಂತ ಜೆಡಿಎಸ್ ಅಲೆ ಬೀಸುತ್ತಿದೆ. ಈ ಸಲ ಪಕ್ಷದ ಗೆಲುವು ಶತ:ಸಿದ್ಧ ಎಂದರು.
"ಹೆಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾದರೇ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು, ವಿಕಲಚೇತನರ ಪಿಂಚಣಿಯನ್ನು 600 ರೂ. ಯಿಂದ 2,500 ರೂಗಳಿಗೆ ಹೆಚ್ಚಿಸಲಾಗುವುದು. ಪ್ರೌಢಶಾಲೆಯಲ್ಲಿ ಓದುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಗುವುದು. ವಿವಿಧ ವಸತಿ ಯೋಜನೆಗಳಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಶೆ.50 ರಿಯಾಯಿತಿ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಾದಿಕ್ ಅತ್ತಾರ, ಚನ್ನಪ್ಪ ಮುತ್ತಾಳ,ಅಫ್ಸರ್ ಸಾಬ್, ಗಾಳೆಪ್ಪ ಕಡೆಮನಿ, ಈಶಪ್ಪ ಮಾದಿನೂರ, ಸಂಗಪ್ಪ ವಕ್ಕಳದ,ಗೌಸ್, ಮೊಯಿನುದ್ದೀನ್ ಮೆಹಮೂದ, ವಕ್ತಾರ ಮೌನೇಶ್ ವಡ್ಡಟ್ಟಿ,ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ