ಅಭಿವೃದ್ದಿ ಕೆಲಸ ಮಾಡದೇ ಇದ್ದರೆ ನನ್ನ ಮನೆಗೆ ಮುತ್ತಿಗೆ ಹಾಕಿ : CVC
ಕೊಪ್ಪಳ,: ಯಾವ ಶಾಸಕ ಹಾಗೂ ಸಚಿವನಿಗೂ ಸಿಗದ ಗೌರವ ಮತದಾರರಿಂದ ಕ್ಷೇತ್ರಾದ್ಯಂತ ನನಗೆ ಸಿಗುತ್ತಿದೆ. ಸುಮಾರು 30 ವರ್ಷ ಶಾಸಕರಾಗಿ ಹಾಗೂ ಸಚಿವರಾಗಿ ಮತ್ತು10 ವರ್ಷ ಶಾಸಕರಾಗಿ ನೀವು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದರೇ ನಿಮಗೂ ಇದೇ ರೀತಿ ಗೌರವ ಸಿಗುತ್ತಿತ್ತಲ್ಲವೇ, ಮತದಾರರ ಆಶೀರ್ವಾದದಿಂದ ನಾನು ಶಾಸಕನಾದರೆ, ಯಾವುದೇ ಚ್ಯುತಿ ತರುವ ಕೆಲಸ ಮಾಡುವುದಿಲ್ಲ. ನಾನು ಅಭಿವೃದ್ದಿ ಕೆಲಸ ಮಾಡದೇ ಇದ್ದರೆ ನನ್ನ ಮನೆಗೆ ಮುತ್ತಿಗೆ ಹಾಕಿ ಎಂದು ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ ಹೇಳಿದರು.
ಅವರು ತಾಲೂಕಿನ ಕಾತರಕಿ-ಗುಡ್ಲಾನೂರ ಹಾಗೂ ಬೇಳೂರಿನಲ್ಲಿ ಶುಕ್ರವಾರ ದಂದು ಮತ ಪ್ರಚಾರ ಮಾಡಿ ಮಾತನಾಡಿ,
"ಪ್ರತಿ ಗ್ರಾಮದಲ್ಲೂ ನನ್ನನ್ನು ಮೆರವಣಿಗೆಯಲ್ಲಿ ತಮ್ಮ ಹೆಗಲ ಮೇಲೆ ಹೊತ್ತು ಬರಮಾಡಿಕೊಳ್ಳುತ್ತಿದ್ದಾರೆ. ಇದಕ್ಕಿಂತ ದೊಡ್ಡ ಪುಣ್ಯ ಇನ್ನೇನು ಬೇಕು? ಇದು ಯಾವ ಶಾಸಕನಿಗೂ ಹಾಗೂ ಸಚಿವನಿಗೂ ಸಿಗದ ಗೌರವ. ಒಬ್ಬರು 30 ವರ್ಷ, ಮತ್ತೊಬ್ಬರು 10 ವರ್ಷ ಅಧಿಕಾರದಲ್ಲಿದ್ದರು. ನೀವು ಕೊಪ್ಪಳದ ಅಭಿವೃದ್ದಿ ಮಾಡಿದ್ದರೆ ನಿಮಗೆ ಇಂದು ಈ ರೀತಿಯ ಪರಸ್ಥಿತಿ ಬರುತ್ತಿತ್ತಾ? ನೀವು ಕೆಲಸ ಮಾಡಿದ್ದರೆ ನನಗೆ ಸಿಗುತ್ತಿರುವ ಗೌರವ ನಿಮಗೂ ಸಿಗುತ್ತತ್ತಲ್ಲವೇ? ನಿಮಗೆ ಹೋಲಿಸಿದರೇ ಚಂದ್ರಶೇಖರ ಯಾವ ಲಕ್ಕ? ಇಂದು ನಿಮ್ಮ ಮುಖವಾಡ ಕಳಚಿದೆ. ಕಾಳಜಿ, ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯಿಲ್ಲವ ನಾಯಕನಿಗೆ ಜನರ ತಿರಸ್ಕಾರ ಯಾವ ರೀತಿ ಇರುತ್ತದೆ ಎಂದು ಈಗ ನಿಮಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು. ಸಿಂಗಟಾಲೂರ ಏತ ನೀರಾವರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ನಾನು ದಶಕಗಳಿಂದ ಕೇಳುತ್ತಲೇ ಬಂದಿದ್ದೇನೆ. ರೈತರ ಹೊಲಗಳಿಗೆ ನೀರು ಹರಿಯಬೇಕಿದೆ. ಇಷ್ಟು ವರ್ಷ ಶಾಸಕರಾದವರು ಮಾಡಿದ್ದಾದರೂ ಎನು? ನನಗೆ ಅವಕಾಶ ಕೊಡಿ. ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಚನ್ನಪ್ಪ ಮುತ್ತಾಳ, ಮೂರ್ತಿ ಗಿಣಿಗೇರಾ, ಅಫ್ಸರ್ ಸಾಬ್, ಗಾಳೆಪ್ಪ ಕಡೆಮನಿ, ಈಶಪ್ಪ ಮಾದಿನೂರ, ಸಂಗಪ್ಪ ವಕ್ಕಳದ, ವಕ್ತಾರ ಮೌನೇಶ್ ವಡ್ಡಟ್ಟಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ