ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೊಡಲಿಲ್ಲ ಎಂಥಾ ದುರಂತ
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುತ್ತೇನೆ : ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ್
ಕೊಪ್ಪಳ,: ಜೆಡಿಎಸ್ ಪಕ್ಷದ ತತ್ವ,ಸಿದ್ಧಾಂತ,
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಮಾಡಿದ ಒಳ್ಳೆಯ ಕೆಲಸ, ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದೇನೆ. ಇಲ್ಲಿನ ಪಕ್ಷದ ಮುಖಂಡರ ಉದ್ದೇಶ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಅದಕ್ಕಾಗಿ ಎಲ್ಲಾ ಪದಾಧಿಕಾರಿಗಳು ಒಟ್ಟಾಗಿದ್ದೇವೆ. ನಾನು ಬಿಜೆಪಿ ಪಕ್ಷದಲ್ಲಿ ಇದ್ದಿದ್ದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಮನೆಗೆ ಕಳಿಸಲು ಆಗುತ್ತಿರಲಿಲ್ಲ. ಅದರೆ, ಈಗ ಜೆಡಿಎಸ್ ಪಕ್ಷದ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ್ ಹೇಳಿದರು.
ಬುಧವಾರ ಮಧ್ಯಾಹ್ನ ನಗರದ ಕುಷ್ಟಗಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಯಾವ ತತ್ವ ಸಿದ್ಧಾಂತವು ಇಲ್ಲ. ಅದಕ್ಕಾಗಿ ಬಿಟ್ಟು ಬರಬೇಕಾಯಿತು. ತುಂಬಾ ನೋವಿನಿಂದ ಹೊರಗಡೆ ಬಂದಿದ್ದೇನೆ. ನನಗಾದ ನೋವನ್ನು ಯಾರೂ ಸಂಬ್ರಮಿಸುತ್ತಾರೋ ಅವರಿಗೆ ಒಳ್ಳೆಯದಾಗಲಿ. ನನ್ನ ಜೀವನದಲ್ಲಿ ಯಾರಿಗೂ ಕೆಟ್ಟದ್ದಾಗಲಿ ಎಂದು ಬಯಸುವುದಿಲ್ಲ ನಾಯಕನಾದವಿಗೆ ನಾಯಕತ್ವದ ಗುಣವನ್ನು ಹೊಂದಿರಬೇಕಾಗಿತ್ತು. ನಾಯಕರ ಬಗ್ಗೆ ನಾನು ಮಾತನಾಡುವುದಿಲ್ಲ. ಇಡೀ ಕೊಪ್ಪಳವೇ ಅದನ್ನು ನೋಡುತ್ತೆ ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಆ ನೋವನ್ನು ಸಂಭ್ರಮದಿಂದ ಮರೆಯುತ್ತೇನೆ. ಪಕ್ಷದ ಬಗ್ಗೆ. ಅವರ ಬದ್ಧತೆಯ ಬಗ್ಗೆ ಬ್ಲಾಕ್ ಮೇಲ್ ಬಗ್ಗೆ ಭಗವಂತನು ನೋಡುತ್ತಾನೆ, ಒಬ್ಬ ಸಂಸದನಾದವನು ರಾಜಿನಾಮೆ ಕೊಡುತ್ತಾನೆ ಎಂದರೆ ಪಕ್ಷಕ್ಕೆ ಮುಜುಗರ ಆಗುತ್ತದೆ ಹಾಳಾಗಿ ಹೋಗಲಿ 224 ಸೀಟಿನಲ್ಲಿ ಇದು ಒಂದು ಸೀಟು ಹೋದರೆ ಹೋಗಲಿ ಎಂದು ಟಿಕೆಟ್ ನೀಡಿದ್ದಾರೆ. ಕಳೆದ 2018 ಚುನಾವಣೆಯಲ್ಲಿ ಅದೇ ಹಣೆಬರಹ, ಈ ಬಾರಿ ಆಗಿದ್ದು ಅದೆ. ಬ್ಲಾಕ್ ಮೇಲ್ ತಂತ್ರದಿಂದ ನನಗೆ ಟಿಕೆಟ್ ತಪ್ಪಿತು.
ನನ್ನನ್ನು ಬಿಡಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೆ ಸಹ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂಥಾ ದುರಂತ ಎಂದರು.
ಚನ್ನಪ್ಪ ಅಳವಂಡಿ, ಡಾ. ಮಹೇಶ ಗೋವನಕೊಪ್ಪ, ಮಂಜುನಾಥ ಸೊರಟೂರು, ವಕ್ತಾರ ಮೌನೇಶ ವಡ್ಡಟ್ಟಿ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Tags
ರಾಜಕೀಯ