Koppal-ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಯುವಕರು

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಯುವಕರು
ಕೊಪ್ಪಳ,: ನಗರದ ಶಾಸಕರ ನಿವಾಸದಲ್ಲಿ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು 20ಕ್ಕೂ ಅಧಿಕ ಯುವಕರು ಬಿಜೆಪಿ ಪಕ್ಷವನ್ನು ತೊರೆದು ಕೆ.ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಒಳ್ಳೆಯ ಅಭಿಪ್ರಾಯ ಇದ್ದು ಜನ ಕಾಂಗ್ರೆಸ್ ಸರ್ಕಾರವನ್ನ ಬಯಸುತ್ತಿದ್ದಾರೆ. ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಇದರಲ್ಲಿ ಯಾವುದೇ ಸಂಶಯ ಬೇಡ ಇಲ್ಲ ಎಂದರು. ರಾಜ್ಯದಲ್ಲಿ ಮಾಜಿ ಸಚಿವರು ಮಾಜಿ ಶಾಸಕರು ಹಾಗೂ ಹಾಲಿ ಶಾಸಕರುಗಳು ಸೇರಿದಂತೆ ಅನೇಕ ಮುಖಂಡರು ವಿವಿಧ ಪಕ್ಷಗಳನ್ನ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಲು ಜನ ಕಾತುರದಿಂದ ಕಾಯುತ್ತಿದ್ದಾರೆ ಎಂದರು. ಕಾಂಗ್ರೆಸ್ ಸೇರ್ಪಡೆ ಆದವರು: ಪ್ರಜ್ವಲ್, ವಿಶ್ವನಾಥ ಪಲ್ಲೇದ್, ನಿಕೀಲ್, ಪ್ರಭು, ಈಶ್ವರ, ಜಗದೀಶ, ನಾಗಪ್ಪ, ರವಿ, ಕಿರಣ, ಅನಿಲ್, ನಾಗರಾಜ, ಮಂಜುನಾಥ, ತಿಪ್ಪಣ್ಣ, ಇಸ್ಮೈಲ್, ಸುನೀಲ, ನಾಗರಾಜಗೌಡ, ಪ್ರದೀಪ, ಭರತ್, ಮನೋಜ, ಕುಮಾರ ಸೇರಿದಂತೆ ಅನೇಕರ ಯುವಕರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷರಾದ ಸುರೇಶ ದೇಸಾಯಿ, ಪ್ರಚಾರ ಸಮಿತಿಯ ಅಧ್ಯಕ್ಷ ಶರಣಪ್ಪ ಸಜ್ಜನ್, ಮುಖಂಡರಾದ ಶಿವಕುಮಾರ ಶೆಟ್ಟರ್, ಅರುಣ್ ಶೆಟ್ಟಿ, ವೀರಣ್ಣ ಸಂಡೂರು, ನಾಗರಾಜ ಕಂದಾರಿ, ಅಜ್ಜಪ್ಪ, ಕೆ.ಸೋಮಶೇಖರ ಹಿಟ್ನಾಳ, ನಾಗರಾಜ ಪಟವಾರಿ ಸೇರಿದಂತೆ ಅನೇಕರು ಇದ್ದರು.

ವರದಿ : ಶಿವಕುಮಾರ ಹಿರೇಮಠ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">