Koppal : ಅಪಾರ ಜನಸಾಗರದೊಂದಿಗೆ ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ನಾಮಪತ್ರ ಸಲ್ಲಿಕೆ


 ಅಪಾರ ಜನಸಾಗರದೊಂದಿಗೆ ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ನಾಮಪತ್ರ ಸಲ್ಲಿಕೆ

- ರಸ್ತೆ ತುಂಬೆಲ್ಲಾ ರಾರಾಜಿಸಿದ ಬಿಜೆಪಿ ಬಾವುಟ

- ಬಿಜೆಪಿ ಜಯದ ವಿಶ್ವಾಸ ಮೂಡಿಸಿದ ರ‌್ಯಾಲಿ

ಕೊಪ್ಪಳ,: ನಗರದ ತಹಶಿಲ್ದಾರರ ಕಚೇರಿಯಲ್ಲಿ ಬುಧವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಜುಳಾ ಕರಡಿ ಅವರು ಅಪಾರ ಜನಸಾಗರದೊಂದಿಗೆ ನಾಮಪತ್ರ  ಸಲ್ಲಿಸಿದರು. ನಗರಕ್ಕೆ ನೂರಾರು ವಾಹನಗಳಲ್ಲಿ ಆಗಮಿಸಿದ ಸಹಸ್ರಾರು ಸಂಖ್ಯೆಯಲ್ಲಿ ಜನರು ಬಿಜೆಪಿ ಶಾಲು ಹೊದ್ದು ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ಪರ ಘೋಷಣೆ ಕೂಗುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.

ಬೆಳಗ್ಗೆಯಿಂದಲೇ ತಾಲೂಕಿನ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಹರಿದು ಬಂದ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರದ ಅಭಿಮಾನಿಗಳು ಬಿಜೆಪಿ ಪರ  ಹಾಗೂ ಭಾರತ ಮಾತಾಕೀ ಜೈ ಘೋಷಣೆ ಕೂಗುವ ಮೂಲಕ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದರು. ನಗರದ ಸಿರಸಪ್ಪಯ್ಯನಮಠ ದಿಂದ ಆರಂಭವಾದ ಮೆರವಣಿಗೆ ಗಡಿಯಾರ ಕಂಭ, ಜವಾಹರ ರಸ್ತೆ, ಮೂಲಕ ಅಶೋಕ ಸರ್ಕಲ್ ಮಾರ್ಗವಾಗಿ ತೆರೆದ ವಾಹನದಲ್ಲಿ ತಹಸೀಲ್ದಾರ ಕಚೇರಿವರೆಗೂ ಬೃಹತ್ ರ‌್ಯಾಲಿ ನಡೆಸಿದರು. ಅಪಾರ ಸಂಖೆಯಲ್ಲಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬಿಸಿಲನ್ನು ಲೆಕ್ಕಿಸದೇ ಕಿಕ್ಕಿರಿದು ನಗರದ ರಸ್ತೆಯಲ್ಲಿ ಸೇರಿತ್ತು.

 ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಅಧ್ಯಕ್ಷ ಮಹಾಂತೇಶ್ ಪಾಟೀಲ್, ವಿಧಾನಪರಿಷತ್ತ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಮಹಿಳಾ ಜಿಲ್ಲಾದ್ಯಕ್ಷರಾದ ವಾಣಿಶ್ರೀ ಮಠದ ಮುಖಂಡರಾದ ರಾಘವೇಂದ್ರ ಪಾನಘಂಟಿ, ರಾಜು ಬಾಕಳೆ, ಪ್ರದೀಪ ಹಿಟ್ನಾಳ, ಮಂಜುನಾಥ ಅಂಗಡಿ, ಗಣೇಶ ಹೊರಟ್ನಾಳ, ನಾಗಭೂಷಣ ಸಾಲಿಮಠ, ಮಧುರಾ ಕರಣಂ, ಮಹಾಲಕ್ಷ್ಮಿ ಕಂದಾರಿ, ಶೋಭಾ ನಗರಿ, ಜಯಶ್ರೀ ಗೊಂಡಬಾಳ, ವಕ್ತಾರ ಮಹೇಶ ಹೊಸಮನಿ ಸೇರಿದಂತೆ ಇತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">