- ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ
- ಹೂಮಳೆಗೈದು ಶಾಸಕರಿಗೆ ಭವ್ಯ ಸ್ವಾಗತ
ಕೊಪ್ಪಳ,: ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರದಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗರಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದು ಶಾಸಕ, ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಗುರುವಾರ ತಾಲೂಕಿನ ಹಿರೇಸಿಂದೋಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ದದೇಗಲ್, ಹಲಗೇರಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಗುನ್ನಳ್ಳಿ, ಹೊರತಟ್ನಾಳ, ಮಂಗಳಾಪುರ ಗ್ರಾಮದಲ್ಲಿ ಪ್ರಚಾರ ನಡೆಸಿ, ಮತಯಾಚನೆ ನಡೆಸಿದರು. ಡಬಲ್ ಎಂಜಿನ್ ಸರಕಾರ ಎಲ್ಲ ಸಮುದಾಯದವರಿಗೆ ಒಂದೇ ಒಂದು ಜನಪರ ಕಾರ್ಯಕ್ರಮ ಕೊಡಲಿಲ್ಲ. ಪ್ರಧಾನಿ ಮೋದಿಯವರು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಒಂದು ಆಶ್ವಾಸನೆಯನ್ನು ಸಹ ಈಡೇರಿಸದೇ ದೇಶದ ಜನತೆಗೆ ಅನ್ಯಾಯ ಎಸಗಿದ್ದಾರೆ.
ಬಿಜೆಪಿ ಸರಕಾರದಿಂದ ರಾಜ್ಯ ಮತ್ತು ದೇಶದ ಅಭಿವೃದ್ಧಿ ಅಸಾಧ್ಯ. ಲಜ್ಜೆಗೆಟ್ಟ ಸರಕಾರದ ವಿರುದ್ಧ ರಾಜ್ಯದ ಜನ ರೊಚ್ಚಿಗೆದ್ದಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಕೈಹಿಡಿಯುತ್ತಾರೆ ಎಂದರು.ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ನಂಬಿಕೆಯಿಲ್ಲ. ಹೀಗಾಗಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಿಲ್ಲ. ಅಲ್ಲದೇ ಗ್ರಾಮ ಪಂಚಾಯಿತಿಗಳಿಗೆ ವಸತಿ ಯೋಜನೆಯಡಿ ಒಂದೇ ಒಂದು ಮನೆಯನ್ನು ನೀಡಲಿಲ್ಲ. ಇವರಿಗೆ ಅಧಿಕಾರ ಕೇಂದ್ರಿಕರಣ ಮುಖ್ಯವಾಗಿದೆ. ಬಡವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಬಿಜೆಪಿಗರಿಗೆ ಬಡವರ ಹಿತಕ್ಕಿಂತ ಶ್ರೀಮಂತರ ಹಿತವೇ ಮುಖ್ಯವಾಗಿದೆ. ಅನ್ಯಾಯದ ವಿರುದ್ಧ ಪಾದಯಾತ್ರೆ : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯವರ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಲಿಲ್ಲ.
ಮತದಾರರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸದೇ ದೇಶದ ಜನತೆಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರು ಅನ್ಯಾಯದ ವಿರುದ್ಧ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮೂಲಕ ಹೋರಾಟ ನಡೆಸಿ, ದೇಶದ ಯುವಜನತೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು. ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮತದಾರರಿಗೆ ನೀಡಿದ ಆಶ್ವಾಸನೆಯಂತೆ 163ರಲ್ಲಿ 158 ಆಶ್ವಾಸನೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷದಲ್ಲಿ ಭ್ರಷ್ಟಚಾರ ರಹಿತ ಆಡಳಿತ ನಡೆಸಿ ರಾಜ್ಯದ ಜನರ ಮನಸ್ಸು ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ನಡೆಸಿದ ಪ್ರಜಾಧ್ವನಿ ಯಾತ್ರೆಗೆ ಎಲ್ಲೇಡೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದಿ, ಖಂಡಿತವಾಗಿಯೂ ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಪಕ್ಷ ಸರಕಾರ ರಚನೆ ಮಾಡುತ್ತೆ. ಮೇ.10 ರಂದು ನಡೆಯುವ ಚುಮಾವಣೆ ಪ್ರಮುಖವಾಗಿದ್ದು, ಸರಕಾರದ ಪ್ರತಿಯೊಂದು ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕಾದರೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಈ ಬಾರಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ನಾಗನಗೌಡ್ರು ಹ್ಯಾಟಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ, ಮುಖಂಡರಾದ
ಶಿವರೆಡ್ಡಿ ಭೂಮಕ್ಕನವರ್, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ, ಮುತ್ತುರಾಜ್ ಕುಷ್ಟಗಿ, ಸಿದ್ದು ಮ್ಯಾಗೇರಿ, ತೋಟಪ್ಪ ಕಾಮನೂರು, ವಿರೂಪಾಕ್ಷಪ್ಪ ನವೋದಯ, ಕೆ.ಎಮ್.ಸೈಯದ್, ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಕೊಳೂರು ಗ್ರಾ.ಪಂ.ಅಧ್ಯಕ್ಷ ಪ್ರವೀಣ ಪಾಟೀಲ್, ಕೇಶವರೆಡ್ಡಿ ಮಾದಿನೂರು, ಶಿವಣ್ಣ ಗುನ್ನಳ್ಳಿ, ರಾಮಣ್ಣ ಕಲ್ಲನ್ನವರ್, ಹನುಮಂತಪ್ಪ ಕಿಡದಾಳ, ಆನಂದ ಕಿನ್ನಾಳ, ಸಲೀಂ ಅಳವಂಡಿ, ಹನುಮೇಶ ಹೊಸಳ್ಳಿ, ವಸಂತ ಹೊರತಟ್ನಾಳ, ನಿಂಗಜ್ಜ, ಮಲ್ಲು ಪೂಜಾರ್, ಪರಶುರಾಮ ಕೆರೆಹಳ್ಳಿ,
ಕಿಶೋರಿ ಬೂದನೂರು, ರೇಷ್ಮಾ ಖಾಜಾವಲಿ, ಜ್ಯೋತಿ ಗೊಂಡಬಾಳ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Tags
ರಾಜಕೀಯ