Koppal : ನಾಳೆ ಕೊಪ್ಪಳದಲ್ಲಿ ಬಸವ ಜಯಂತ್ಯೋತ್ಸವ

ನಾಳೆ ಕೊಪ್ಪಳದಲ್ಲಿ ಬಸವ ಜಯಂತ್ಯೋತ್ಸವ 

ಕೊಪ್ಪಳ,: ‘ಬಸವ ಜಯಂತ್ಯೋತ್ಸವ' ನಿಮಿತ್ಯ ಏ.23 ಭಾನುವಾರ
ರಂದು ಕೊಪ್ಪಳ ಬಸವ ಜಯಂತ್ಯೋತ್ಸವ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂಜಾನೆ 9 ಗಂಟೆಗೆ ಶ್ರೀಬಸವೇಶ್ವರ ವೃತ್ತದಲ್ಲಿ ಬಸವಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ ನೆರವೇರಲಿದ್ದು, ಸಂಜೆ 4 ಗಂಟೆಗೆ ಕೋಟೆ ರಸ್ತೆಯ ಶ್ರೀಮಹೇಶ್ವರ ದೇವಸ್ಥಾನದಿಂದ ಶ್ರೀಗವಿಮಠದ ಆವರಣದವರೆಗೆ ಶ್ರೀಬಸವೇಶ್ವರ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಗವಿಮಠದ ಆವರಣದಲ್ಲಿ ‘ಬಸವಗೋಷ್ಠಿ’ ಸಮಾರಂಭ ನಡೆಯಲಿದೆ. ಈ ಬಸವಗೋಷ್ಠಿಯ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ವಹಿಸಿಕೊಳ್ಳಲಿದ್ದು, ಪಾವನ ಸಾನಿಧ್ಯವನ್ನು ಬೆಂಗಳೂರಿನ ಬಸವ ಯೋಗಾಶ್ರಮದ ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮಿಗಳು ಮತ್ತು ಸಾನಿಧ್ಯವನ್ನು ರಾಮದುರ್ಗ ತಾಲೂಕಿನ ನಾಗನೂರಿನ ಗುರುಬಸವ ಮಠದ ಪೂಜ್ಯ ಶ್ರೀಬಸವಗೀತಾ ತಾಯಿಯವರು ವಹಿಸಿಕೊಳ್ಳಲಿದ್ದಾರೆ. ಬಸವ ಚಿಂತಕರಾದ ವಿಜಯಪುರದ ಡಾ. ಜೆ.ಎಸ್. ಪಾಟೀಲರು, ಬಸವ ಚಿಂತನೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೂವರು ಸಾಧಕರಿಗೆ ‘ಬಸವ ಕಾರುಣ್ಯ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕು ಎಂದು ಬಸವ ಜಯಂತ್ಯೋತ್ಸವ ಸಮಿತಿ, ಕೊಪ್ಪಳದ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಶಿವಕುಮಾರ ಹಿರೇಮಠ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">