ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಪ್ರಚಾರ
ರಾಜ್ಯದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಸಾಧ್ಯ: ಸಂಗಣ್ಣ ಕರಡಿ
ಕೊಪ್ಪಳ,: ರಾಜ್ಯದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಗೆ ಮತ ಹಾಕಿ ಬೆಂಬಲಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಮನವಿ ಮಾಡಿಕೊಂಡರು.
ತಾಲೂಕಿನ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹುಲಗಿ, ಹಳೆ ಶಿವಪುರ , ಅಗಳಕೇರಿ ಅನೇಕ ಗ್ರಾಮಗಳಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರ ಪರ ಮತಪ್ರಚಾರ ಸಂಸದ ಕರಡಿ ಸಂಗಣ್ಣ ನಡೆಸಿದರು.
ರಾಜ್ಯದಲ್ಲಿ ಸರಕು ಸಾಗಣೆಗೆ ರಾಷ್ಟ್ರೀಯ ಹೆದ್ದಾರಿಗಳು ಕಡಿಮೆ ಇದ್ದವು. ಪ್ರಧಾನಮಂತ್ರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸರಕು ಸಾಗಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಇದು ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿದೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಯೋಜನೆಗಳನ್ನು ಪರಿಪೂರ್ಣವಾಗಿ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಉಜ್ವಲ ಯೋಜನೆಯಡಿ ಕ್ಷೇತ್ರದ ಮಹಿಳೆಯರಿಗೆ ಲಕ್ಷಾಂತರ ಗ್ಯಾಸ್ ಹಾಗೂ ಸಿಲಿಂಡರ್ ನೀಡಲಾಗಿದೆ. ಈ ಮೂಲಕ ಮಹಿಳೆಯರ ಜೀವನಮಟ್ಟ ಸುಧಾರಿಸಲಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಮಾತನಾಡಿ, ಮಹಿಳೆಯರ ಸಮಸ್ಯೆ ಗಳನ್ನು ಅರಿತಿರುವ ಏಕೈಕ ಪಕ್ಷ ಬಿಜೆಪಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಯೋಜನೆಯಡಿ ಬಯಲು ಶೌಚಾಲಯ ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ. ಈ ಯೋಜನೆ ಮಹಿಳೆಯರು ಹಿತದೃಷ್ಟಿಯಿಂದ ಕೂಡಿದ್ದು, ಮತದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಗಮನಿಸಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಪ್ರದೀಪ್ ಹಿಟ್ನಾಳ , ಪಾಲಾಕ್ಷಪ್ಪ ಗುಂಗಾಡಿ, ಮಧುರ ಕರ್ಣಂ ,ಗಣೇಶ ಹೊರತಟ್ನಾಳ, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ್, ಚಂದ್ರಸ್ವಾಮಿ , ಗವಿರಾಜ್ ಸೇರಿದಂತೆ ಹಲವು ಮುಖಂಡರು, ನೂರಾರು ಕಾರ್ಯಕರ್ತರು, ಗ್ರಾಮದ ಹಿರಿಯರು, ತಾಯಂದಿರು ಇದ್ದರು.
ಉಡಿ ತುಂಬಿದ ಮಹಿಳೆಯರು :
ಬಿಜೆಪಿ ಮಹಿಳಾ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರಿಗೆ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಹೋದ ಕಡೆಯಲ್ಲೆಲ್ಲ ಮಹಿಳೆಯರು ಮಂಜುಳಾ ಅಮರೇಶ ಕರಡಿ ಅವರಿಗೆ ಉಡಿ ತುಂಬುವ ಮೂಲಕ ಆಶೀರ್ವಾದ ಮಾಡಿದರು. ಮನೆ ಮಗಳಂತೆ ಮನೆಯೊಳಗೆ ಕರೆದು ಮಾತನಾಡುವ ಮೂಲಕ ಅಭಿಮಾನ ಮೆರೆದರು.
ಕೊಪ್ಪಳ ಬಿಜೆಪಿ ಮಹಿಳಾ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರನ್ನು ಬೆಂಬಲಿಸುವ ಮೂಲಕ ಈ ಭಾಗದ ಮಹಿಳೆಯರನ್ನು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯ ವಾಗಿಸಬೇಕು. ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮತದಾರರು ಬೆಂಬಲಿಸಿ.
- ಸಂಗಣ್ಣ ಕರಡಿ, ಸಂಸದರು.
ಬಿಜೆಪಿ ಪಕ್ಷ ಮಹಿಳಾ ಅಭ್ಯರ್ಥಿ ಘೋಷಿಸುವ ಮೂಲಕ ಅವಕಾಶ ನೀಡಿದೆ. ಮತದಾರರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ. ಜಾತ್ಯಾತೀತ ಆಡಳಿತ ನೀಡಲು ಬಯಸಿದ್ದೇನೆ. ಜನರು ಆಶೀರ್ವಾದ ಮಾಡಬೇಕು.
- ಮಂಜುಳಾ ಅಮರೇಶ ಕರಡಿ,
ಬಿಜೆಪಿ ಅಭ್ಯರ್ಥಿ.