ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪ್ರಚಾರ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ
ಕೊಪ್ಪಳ,: ನುಡಿದಂತೆ ನಡೆಯುವ ಯಾವುದಾದರೂ ಪಕ್ಷ ಇದ್ರೆ ಅದು ನಮ್ಮ ಕಾಂಗ್ರೆಸ್ ಪಕ್ಷ. 2013-18 ರವರೆಗೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನ ಈಡೇರಿಸಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡದೇ ಇದ್ದ 30ಕ್ಕೂ ಹೆಚ್ಚು ಯೋಜನೆಗಳನ್ನ ಘೋಷಣೆ ಮಾಡಿ ಜಾರಿಗೆ ತಂದಿರುವ ಪಕ್ಷ ಕಾಂಗ್ರೆಸ್ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಗಿಣಗೇರಿ ಜಿಲ್ಲಾ ಪಂಚಾಯಾತ ವ್ಯಾಪ್ತಿಯ ಗಬ್ಬೂರು, ಗುಡದಳ್ಳಿ ಕೆರೆಹಳ್ಳಿ ಹಿಟ್ನಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯ ಶಹಾಪುರ, ಲಿಂಗದಳ್ಳಿ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರವನ್ನ ಹಮ್ಮಿಕೊಂಡು ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಪಕ್ಷ ಈಗಾಗಲೇ 4 ಯೋಜನೆಗಳನ್ನ ಪ್ರಣಾಳಿಕೆಯಲ್ಲೀ ಘೋಷಣೆ ಮಾಡಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್,10 ಕೆಜಿ ಅಕ್ಕಿ, ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2000 ಹಾಗೂ ನಿರುದ್ಯೋಗ ಯುವಕರಿಗೆ 1500 ಹಾಗೂ 3000 ರೂ.ಗಳಂತೆ ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ತಕ್ಷಣದಲ್ಲಿ ಈ ನಾಲ್ಕು ಯೋಜನೆಗಳನ್ನ ಜಾರಿ ಮಾಡಿ ನುಡಿದಂತೆ ನಡೆಯುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಗಿರೀಶ್ ಹಿರೇಮಠ ಕಾಂಗ್ರೆಸ್ ಸೇರ್ಪಡೆ : ಹಿಟ್ನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರಬಲ ಬಿಜೆಪಿ ಯುವ ನಾಯಕರಾದ ಗಿರೀಶ್ ಹಿರೇಮಠ ಅವರು ಹಾಗೂ ತಮ್ಮ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ ಸೇರಿದಂತೆ ಅನೇಕರು ಇದ್ದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಟಿ.ಜನಾರ್ಧನ್ ಹುಲಿಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ ಮುಖಂಡರಾದ ನವೋದಯ ವಿರುಪಣ್ಣ, ತೋಟಪ್ಪ ಕಾಮನೂರು, ಯಂಕಪ್ಪ ಹೊಸಳ್ಳಿ ಪ್ರಭುರಾಜ್ ಪಾಟೀಲ್ ಹನಮಂತಪ್ಪ ಜಲವರ್ಧನಿ, ಗಿರೀಶ್ ಹಿರೇಮಠ, ನಿಂಗಜ್ಜ ಶಹಾಪುರ,
ಪ್ರಸನ್ನ ಗಡದ್, ಶರಣಪ್ಪ ಸಜ್ಜನ, ಪ್ರವೀಣ್ ಪಾಟೀಲ್, ಹಂಪಯ್ಯ, ಬಸಯ್ಯ ಹಿರೇಮಠ, ಸಿದ್ರಾಮಪ್ಪ ಕೆರೆಹಳ್ಳಿ, ಮುದ್ದಪ್ಪ ಬೆಳಿನಹಳ್ಳಿ, ಗವಿಸಿದ್ದನಗೌಡ ಮುದ್ದಾಬಳ್ಳಿ, ಗವಿಸಿದ್ದಪ್ಪ ಪೂಜಾರ, ಕುಬೇರ ಮಜ್ಜಿಗಿ, ನಾಗರಾಜ್ ಪಠವಾರಿ, ಲಕ್ಷ್ಮಣ್ ಡೊಳ್ಳಿನ, ಲಕ್ಷ್ಮಣ್ ಹೊಸಮನಿ ಸೇರಿದಂತೆ ಇತರರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Tags
ರಾಜಕೀಯ