ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ: ಶಾಸಕ ಹಿಟ್ನಾಳ
ಕೊಪ್ಪಳ,: ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ 4500 ಕೋಟಿ ಅನುಧಾನವನ್ನ ತಂದಿದ್ದೇನೆ. ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಇನ್ನೂ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನ ತರಬೇಕು ಎಂದು ಕನಸು ಕಟ್ಟಿಕೊಂಡಿರುವೆ ರಾಜ್ಯದಲ್ಲಿಯೇ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡಲು ಮತ್ತೊಮ್ಮೆ ನಿಮ್ಮ ಆಶೀರ್ವಾದ ಅಗತ್ಯ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ತಾಲೂಕಿನ ನೀರಲಗಿ, ಮತ್ತೂರು, ಹನಕುಂಟಿ, ತಿಗರಿ, ಬೇಟಗೇರಿ, ಮೋರನಾಳ, ಭೈರಾಪುರ, ಬೋಚನಹಳ್ಳಿ, ನೆಲೋಗಿಪುರ, ಹಲವಾಗಲಿ ಗ್ರಾಮಗಳಲ್ಲಿ ಚುನಾವಣೆಯ ಬಿರುಸಿನ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಮಾತ್ರ ನುಡಿದಂತೆ ನಡೆಯುವ ಪಕ್ಷ 2013-18ರ ವರಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳನ್ನ ನುಡಿದಂತೆ ನಡೆದು ಈಡೇರಿಸಿದ ಪಕ್ಷ ಕಾಂಗ್ರೆಸ್ ಎಂಬುದು ಯಾರು ಮರೆಯುವಂತಿಲ್ಲ ಎಂದರು.
ಈ ಚುನಾವಣೆಗೂ ಕೂಡ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಜನಪರ ಯೋಜನೆಗಳನ್ನ ಈಗಾಗಲೇ ಘೋಷಣೆ ಮಾಡಲಾಗಿದೆ. ಪ್ರತಿ ಮನೆಗೂ ಪ್ರತಿ ತಿಂಗಳೂ 200 ಯೂನಿಟ್ ವಿದ್ಯೂತ್ ಉಚಿತ,10 ಕೆಜಿ ಅಕ್ಕಿ, ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಹಾಗೂ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 1500 ,3000 ರೂ. ಧನಸಹಾಯ ಯುವನಿಧಿ ಯೋಜನೆಗಳನ್ನ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ನಿಶ್ಚಿತವಾಗಿ ಈ ನಾಲ್ಕು ಯೋಜನೆಗಳನ್ನ ಮಂಜೂರು ಜಾರಿ ಮಾಡುತ್ತೇವೆ. ನಮ್ಮದು ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷ ಆದ್ದರಿಂದ ನೀವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವುದರ ಮುಖಾಂತರ ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಮತದಾರರಲ್ಲಿ ವಿನಂತಿ ಮಾಡಿದರು.
ಈ ಸಮಯದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಜಿಪಂ ಅದ್ಯಕ್ಷ ಎಸ್.ಬಿ. ನಾಗರಹಳ್ಳಿ, ಮುಖಂಡರಾದ ಕೃಷ್ಣಾರೆಡ್ಡಿ ಗಲಿಬಿ, ವೆಂಕನಗೌಡ ಹಿರೇಗೌಡ್ರ, ಹನುಮರಡ್ಡಿ ಹಂಗನಕಟ್ಟಿ, ಮುತ್ತುರಾಜ ಕುಷ್ಟಗಿ, ರಾಮಣ್ಣ ಕಲ್ಲನವರ, ಪ್ರಸನ್ನ ಗಡಾದ, ಅಕ್ಬರ್ ಪಾಶಾ ಪಲ್ಟನ್, ಸಲೀಂ ಅಳವಂಡಿ, ಗುರುಬಸವರಾಜ ಹಳ್ಳಿಕೇರಿ, ಭರಮಣ್ಣ ನಗರ, ಪರಶುರಾಮ ಕೆರೆಹಳ್ಳಿ, ಶಿವಮೂರ್ತಿ ಗುತ್ತೂರ, ಹನುಮೇಶ ಬೆಣ್ಣಿ, ನವೋದಯ ವಿರುಪಣ್ಣ, ರಾಮಣ್ಣ ಚೌಡ್ಕಿ, ಗಾಳೆಪ್ಪ ಪೂಜಾರ, ತೋಟಪ್ಪ ಕಾಮನೂರು, ಶಿವರೆಡ್ಡಿ ಭೂಮಕ್ಕನವರ್, ಭೀಮಣ್ಣ ಬೋಚನಹಳ್ಳಿ, ನಿಂಗಜ್ಜ ಶಹಾಪುರ, ಜ್ಯೋತಿ ಗೊಂಡಬಾಳ, ಸೌಭಾಗ್ಯಲಕ್ಷ್ಮೀ ಗೊರವರ್, ಅಂಬಿಕಾ ನಾಗರಾಳ, ಕಾವೇರಿ ರ್ಯಾಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Tags
ರಾಜಕೀಯ