Koppal : ಉರಿಬಿಸಿಲು ಲೆಕ್ಕಿಸದೇ ಭರ್ಜರಿ ಪ್ರಚಾರ ಪ್ರಚಾರ ನಡೆಸಿ, ಮತಯಾಚನೆ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

- ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

- ಉರಿಬಿಸಿಲು ಲೆಕ್ಕಿಸದೇ ಭರ್ಜರಿ ಪ್ರಚಾರ ಪ್ರಚಾರ ನಡೆಸಿ, ಮತಯಾಚನೆ

ಕೊಪ್ಪಳ,:

ಕಳೆದ ಹತ್ತು ವರ್ಷದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು ನಾಲ್ಕೂವರೆ ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಬಿಡುಗಡೆಗೊಳಿಸಿ ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದಲ್ಲಿನ ಜನಪರ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಬುಧವಾರ ತಾಲೂಕಿನ ಕಾತರಕಿ- ಗುಡ್ಲಾನೂರು, ಹಾದರಮಗ್ಗಿ, ಬೇಳೂರು, ಡೊಂಬರಳ್ಳಿ, ಬೂದಿಹಾಳ, ಬಿಕನಹಳ್ಳಿ, ಹಂದ್ರಾಳ, ಹಣವಾಳ, ವದಗನಾಳ ಗ್ರಾಮದಲ್ಲಿ  ಉರಿಬಿಸಿಲು ಲೆಕ್ಕಿಸದೇ ಭರ್ಜರಿ ಪ್ರಚಾರ ಪ್ರಚಾರ ನಡೆಸಿ, ಮತಯಾಚಿಸಿದರು.

ದೇಶದಲ್ಲಿ ನಿರುದ್ಯೋಗದ ಸಮಸ್ಯೆಯಿಂದ ಅನೇಕ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುವಂತ ದುಸ್ಥಿತಿ ನಿರ್ಮಾಣವಾಗಿದೆ. ದೇಶದ ಯುವಜನತೆಗೆ ಉದ್ಯೋಗ ನೀಡುವ ಧೈರ್ಯ ಮೋದಿಯವರಿಗೆ ಇಲ್ಲ. ಕೇವಲ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಧರ್ಮದ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ದೇಶದ ಅನ್ನದಾತರ ಆರ್ಥಿಕ ಸಂಕಷ್ಟವನ್ನು ಅರಿತು 72 ಲಕ್ಷ ಕೋಟಿ ರೂ. ರೈತರ ಸಾಲಮನ್ನಾ ಮಾಡಿ, ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ಎಂಟೂವರೇ ವರ್ಷ ಕಳೆದರೂ ಯಾವೊಬ್ಬ ರೈತನ ಸಾಲಮನ್ನಾ ಮಾಡಿಲ್ಲ. ನಾವು ರೈತಪರ, ಅಭಿವೃದ್ಧಿಪರ ಎನ್ನುವ ಬಿಜೆಪಿ ನಾಯಕರು ರೈತರ ಸಾಲಮನ್ನಾದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

20 ಕೋಟಿ ಅನುದಾನ ಬಿಡುಗಡೆ: ಕಾತರಕಿ-ಗುಡ್ಲಾನೂರು ಮತ್ತು ಹಾದರಮಗ್ಗಿ ತ್ರಿವಳಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಕಳೆದ ಹತ್ತು ವರ್ಷದಲ್ಲಿ 20 ಕೋಟಿ ರೂ.ಗೂ ಅಧಿಕ ಅನುದಾನವನ್ನು ಬಿಡುಗಡೆಗೊಳಿಸಿ, ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರು, ಶಾಲಾ ಕೊಠಡಿ ಸೇರಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಎರಡು ಬಾರಿ ಜಿಪಂ ಸದಸ್ಯ ಹಾಗೂ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ನನ್ನ ಮೇಲೆ ಭರವಸೆಯನ್ನಿಟ್ಟು ಆಯ್ಕೆ ಮಾಡಿದಕ್ಕೆ ನಾನೆಂದಿಗೂ ಋಣಿಯಾಗಿರುವೆ. ಈ ಬಾರಿಯ ಚುನಾವಣೆ ಎಲ್ಲ ಚುನಾವಣೆಗಿಂತ ವಿಭಿನ್ನವಾಗಿದ್ದು, ಕ್ಷೇತ್ರದ ಅಭಿವೃದ್ಧಿ ನೋಡಿ ಮತ ಚಲಾಯಿಸಿ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ಇದೇ ವೇಳೆ ಶಾಸಕರ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ತಾಲೂಕಿನ ಕಾತರಕಿ-ಗುಡ್ಲಾನೂರು, ಬೇಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಹಳ್ಳಿಯಲ್ಲಿ ಕೆ.ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ನೂರಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಎಚ್.ಎಲ್. ಹಿರೇಗೌಡ್ರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಮುಖಂಡರಾದ ಹನುಮರೆಡ್ಡಿ ಹಂಗನಕಟ್ಟಿ, ಯಲ್ಲನಗೌಡ್ರ, ವೆಂಕನಗೌಡ ಹಿರೇಗೌಡ್ರ, ವಿರುಪಾಕ್ಷಪ್ಪ ನವೋದಯ, ರಾಮಣ್ಣ ಚೌಡ್ಕಿ, ಪ್ರಸನ್ನ ಗಡಾದ, ತೋಟಪ್ಪ ಕಾಮನೂರು, ಮುತ್ತುರಾಜ್ ಕುಷ್ಟಗಿ, ಲತಾ ಗವಿಸಿದ್ದಪ್ಪ ಚಿನ್ನೂರು, ಗಾಳೆಪ್ಪ ಪೂಜಾರ್, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್, ಪ್ರಚಾರ ಸಮಿತಿ ಅಧ್ಯಕ್ಷ ಶರಣಪ್ಪ ಸಜ್ಜನ್, ಕಿಶೋರಿ ಬೂದನೂರು, ಶಿವಣ್ಣ ಹಂದ್ರಾಳ, ವಿರುಪಾಕ್ಷಪ್ಪ ಮೋರನಾಳ, ಶಂಕರಗೌಡ್ರ ಹಿರೇಗೌಡ್ರ, ನಿಂಗಜ್ಜ ಶಹಾಪುರ, ಆನಂದ‌ ಕಿನ್ನಾಳ, ಮಲ್ಲು ಪೂಜಾರ್, ಗಾಳೆಪ್ಪ ಹಿಟ್ನಾಳ ಸೇರಿದಂತೆ ವಿವಿಧ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಯುವಕರು ಸೇರಿದಂತೆ ಅನೇಕರು ಇದ್ದರು.

Reported By : Shivakumar Hiremath

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">