Koppal : ಇರಕಲ್ಲಗಡ ಗ್ರಾ.ಪಂ.ಯಲ್ಲಿ ಜರುಗಿದ ಸ್ವೀಪ್‌ ಕಾರ್ಯಕ್ರಮ

ನರೇಗಾ ಕೂಲಿಕಾರರಿಂದ ಕಡ್ಡಾಯ ಮತದಾನ ಜಾಗೃತಿ ಜಾಥಾ

ಇರಕಲ್ಲಗಡ ಗ್ರಾ.ಪಂ.ಯಲ್ಲಿ ಜರುಗಿದ ಸ್ವೀಪ್‌ ಕಾರ್ಯಕ್ರಮ

 ಕೊಪ್ಪಳ : ಮೇ-10ರಂದು ಜರುಗುವ ವಿಧಾನಸಭಾ ‌ಚುನಾವಣೆ ದಿನದಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಾಲೂಕ ಸ್ವೀಪ್ ಸಮಿತಿಯ ಹನಮಂತಪ್ಪ ಎಚ್  ಕರೆ ನೀಡಿದರು.
 ಇರಕಲ್ಲಗಡಾ ಗ್ರಾಮದಲ್ಲಿ ಕಡ್ಡಾಯ ಮತದಾನ ಮತ್ತು ನೈತಿಕ ಮತದಾನಕ್ಕೆ ಜಾಗೃತಿ ಮೂಡಿಸಲು ಶುಕ್ರವಾರ ನರೇಗಾ ಕೂಲಿಕಾರರಿಂದ ಜರುಗಿದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ನಾನಾ ರೀತಿಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾರರರ ಗಮನಸೆಳೆಯಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ಕಲ್ಪಿಸಿರುವ ವಿಶೇಷ ಹಾಗೂ ಅಮೂಲ್ಯ ಹಕ್ಕಾಗಿದೆ. ಅದನ್ನು ವಿವೇಚನಾಯುಕ್ತವಾಗಿ ಅರ್ಹರಿಗೆ ಕಡ್ಡಾಯವಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು.18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯ ಮತ್ತು ನೈತಿಕ ಹಾಗೂ ವಿವೇಚನಾಯುಕ್ತವಾಗಿ ಮತಚಲಾಯಿಸಬೇಕು. ಕಡ್ಡಾಯ ಮತ್ತು ನೈತಿಕ ಮತದಾನದ ಕುರಿತು ಪ್ರತಿಜ್ಞಾ ವಿಧಿಯನ್ನು ಕೊಪ್ಪಳ ತಾ.ಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರು ಬೋಧಿಸಿದರು.
ಗ್ರಾಮ ಪಂಚಾಯತಿ ಆವರಣದಿಂದ  ಆರಂಭವಾದ ಕಾಲ್ನಡಿಗೆ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದವರೆಗೆ ಸ್ವತಃ ನರೇಗಾ ಕೂಲಿಕಾರರು, ತಾಲೂಕ‌ ಸ್ವೀಪ್ ತಂಡದ‌ ಸದಸ್ಯರು, ಪಿಡಿಒ, ಸಿಬ್ಬಂದಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

 ಜನ ಮನ ಸೆಳೆದ ನಮ್ಮ ಮತ, ನಮ್ಮ ಹಕ್ಕು
 ಗ್ರಾ.ಪಂ ಆವರಣದಲ್ಲಿ ವಿವಿಧ ರಂಗು ರಂಗಿನ ಅಕ್ಷರಗಳಿಂದ ಬಿಡಿಸಿದ ನಮ್ಮ‌ ಮತ, ನಮ್ಮ‌ ಹಕ್ಕು ಎಂಬ ಜಾಗೃತಿಗೆ ಜೈಕಾರ ಹಾಕಿದರು.

ಜಾಥಾದಲ್ಲಿ‌ ಲಂಬಾಣಿ ನೃತ್ಯ
 ಜಾಥಾದಲ್ಲಿ ಯಲಮಗೇರಾ ತಾಂಡಾದ ಮಹಿಳೆಯರು ಕೂಡಾ ಸ್ವತಃ ಭಾಗವಹಿಸಿ ತಾವು ಕೂಡಾ ಲಂಬಾಣಿ ನೃತ್ಯದ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ಸದರಿ ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿ, ಗ್ರಾಮ ಪಂಚಾಯತ ಪಿಡಿಒ, ತಾಲೂಕ ಐಇಸಿ ಸಂಯೋಜಕರು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಬೇರ್ ಪೂಟ್ ಟೆಕ್ನಿಷಿಯನ್, ಗ್ರಾಮ ಕಾಯಕ ಮಿತ್ರ, ನರೇಗಾ ಕೂಲಿಕಾರರು, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">