Koppal : ಕಾಂಗ್ರೆಸ್ ನಿಂದ ಮಾತ್ರ ರಾಜ್ಯದ‌ ಪ್ರಗತಿ ಸಾಧ್ಯ : ಹಿಟ್ನಾಳ


ಕಾಂಗ್ರೆಸ್ ನಿಂದ ಮಾತ್ರ ರಾಜ್ಯದ‌ ಪ್ರಗತಿ ಸಾಧ್ಯ : ಹಿಟ್ನಾಳ

- ವಿವಿಧ ಗ್ರಾಮದಲ್ಲಿ ‌ಕಾಂಗ್ರೆಸ್ ಅಭ್ಯರ್ಥಿಯಿಂದ ಭರ್ಜರಿ ಪ್ರಚಾರ

ಕೊಪ್ಪಳ,: ಕೋಮುವಾದಿ ಬಿಜೆಪಿಯನ್ನು ಬೇರು ಸಹಿತ ಕಿತ್ತೊಗೆದು ಸರ್ವ ಜನಾಂಗದ ಅಭಿವೃದ್ಧಿ ಕಲ್ಪನೆಯೊಂದಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಬುಧವಾರ ತಾಲೂಕಿನ ಕುಣಿಕೇರಿ ತಾಂಡಾ, ಚಿಕ್ಕಬಗನಾಳ, ಬಿಸರಳ್ಳಿ, ಮೈನಳ್ಳಿ ಮತ್ತು ವದಗನಾಳ ಗ್ರಾಮದಲ್ಲಿ ಪ್ರಚಾರ ನಡೆಸಿ, ಮತಯಾಚಿಸಿದರು.

ಕಳೆದ ಹತ್ತು ವರ್ಷದಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ನೀರಾವರಿ ಎಂಬುದು ಕನಸಿನ ಮಾತಾಗಿತ್ತು. ಸಮರ್ಪಕ ನೀರಾವರಿ ಸೌಲಭ್ಯ ಇಲ್ಲದೇ ಅನೇಕ ರೈತರು ದುಡಿಮೆ ಹರಸಿ ಗುಳೇ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನಾನು ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರವನ್ನು ನೀರಾವರಿ ಮಾಡಬೇಕೆಂಬ ಹಂಬಲ ಇತ್ತು. ಅಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಹದ್ದೂರ್ ಬಂಡಿ- ನವಲಕಲ್, ಬೆಟಗೇರಿ, ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸಿ, ಅನ್ನದಾತರಿಗೆ ನೀಡಿದ ಆಶ್ವಾಸನೆಯಂತೆ ಕ್ಷೇತ್ರವನ್ನು ನೀರಾವರಿಯನ್ನಾಗಿ ಮಾಡಿದ್ದೇನೆ. ಕೆಲ ಏತ ನೀರಾವರಿ ಯೋಜನೆಗಳು ಇನ್ನೂ ಪ್ರಗತಿಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೊಪ್ಪಳ ಕ್ಷೇತ್ರವನ್ನು ನೀರಾವರಿಯನ್ನಾಗಿ ಮಾಡಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ ವಸತಿ ಶಾಲೆ, ಪಬ್ಲಿಕ್ ಶಾಲೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.  ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ 2 ಕೋಟಿಯಿಂದ 5 ಕೋಟಿ ರೂ. ವರೆಗೆ ಅನುದಾನ ನೀಡಲಾಗಿದೆ. ಹಳ್ಳಿಗಳ ಗ್ರಾಮೋದ್ಧಾರಕ್ಕೆ ಶ್ರಮಿಸಿದ್ದೇನೆ. ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಸುಮಾರು 240 ಕೋಟಿ ರೂ. ಅನುದಾನದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ತಾಲೂಕಿನ ಕರ್ಕಿಹಳ್ಳಿ, ಚಿಕ್ಕಬಗನಾಳ ಏತ ನೀರಾವರಿ ಯೋಜನೆಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕ್ಷೇತ್ರದ ಮತದಾರರು ಜಾತಿ, ಧರ್ಮ, ಪಕ್ಷ ಬೇಧಭಾವ ಮರೆತು ತಮ್ಮನ್ನು ಸತತ ಎರಡು ಬಾರಿಗೆ ದಾಖಲೆಯ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಜೀವನಪೂರ್ತಿ ಅವರ ಸೇವೆ ಮಾಡಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ. ಈಗಾಗಲೇ ಜನತೆಗೆ ನೀಡಿದ ಆಶ್ವಾಸನೆಯಂತೆ ಕಳೆದ ಹತ್ತು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾಲ್ಕೂವರೆ ಸಾವಿರ ಕೋಟಿ ಅನುದಾನ ಬಿಡುಗಡೆಗೊಳಿಸಿ, ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಜನಪರವಾಗಿರುವ ಕಾಂಗ್ರೆಸ್‌ನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಭಿ, ಪ್ರಚಾರ ಸಮಿತಿ ಅಧ್ಯಕ್ಷ ಶರಣಪ್ಪ ಸಜ್ಜನ, ವೆಂಕನಗೌಡ್ರು ಹಿರೇಗೌಡ್ರು, ಜಡಿಯಪ್ಪ ಬಂಗಾಳಿ, ತೋಟಪ್ಪ ಕಾಮನೂರು, ಗಾಳೆಪ್ಪ ಪೂಜಾರ್, ಸುರೇಶ ದೇಸಾಯಿ, ಕೆ.ಎಂ.ಸೈಯದ್, ನವೋದಯ ವಿರುಪಣ್ಣ,ಚಾಂದಪಾಷ, ಹನುಮಂತಪ್ಪ ಬಿಡನಾಳ, ಬನ್ನೆಪ್ಪಗೌಡ ಪೊಲೀಸ್ ಪಾಟೀಲ್, ಹನಮೇಶ್ ಹೊಸಳ್ಳಿ, ಆನಂದ ಕಿನ್ನಾಳ, ಭರಮಪ್ಪ ಗೋರ್ ಬಸಣ್ಣ ಬಂಗಾಳಿ ದಾದಾಪೀರ್ ಸೇರಿದಂತೆ ಅನೇಕರು ಇದ್ದರು.

- ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ 

ಸೇರ್ಪಡೆಗೊಂಡ ಮಂಜುನಾಥ ದಿವಟರ್

 ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಮಾಜಿ ಶಾಸಕ ದಿ.ಮಲ್ಲಿಕಾರ್ಜುನ ದಿವಟರ್ ಸುಪುತ್ರ ಮಂಜುನಾಥ ದಿವಟರ್ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಕೊಪ್ಪಳ

ನಗರದ ದಿವಟರ್ ಮನೆಯಲ್ಲಿ ಬುಧವಾರ ಉಪಹಾರ ಸೇವಿಸಿ ಅನೇಕ ವಿಷಯಗಳ ಕುರಿತು ಚರ್ಚಿಸಿದ ನಂತರ ಪಕ್ಷ ಸೇರ್ಪಡೆಗೊಂಡರು.ನಂತರ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಮಾತನಾಡಿ, ಮಾಜಿ ಶಾಸಕ ದಿ.ಮಲ್ಲಿಕಾರ್ಜುನ ದಿವಟರ್ ಹಾಗೂ ನಮ್ಮ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ಮಂಜುನಾಥ ದಿವಟರ್ ಪಕ್ಷ ಸೇರ್ಪಡೆಗೊಂಡಿರುವುದು ಮತ್ತಷ್ಟು ಬಲ ಹೆಚ್ಚಿಸಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಮತ್ತೆ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂಬರುವ ದಿನಗಳಲ್ಲಿ ದಿವಟರ್ ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಇದೆ ವೇಳೆ ಬಸವರಾಜ ಹಿರೇಮನಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ, ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.ಈ ಸಂದರ್ಭದಲ್ಲಿ ಶರಣಪ್ಪ ಸಜ್ಜನ ಶಿವಕುಮಾರ್ ಶಟ್ಟರ್, ಖತಿಬ್ ಭಾಷು,ಅರುಣ್ ಶೆಟ್ಟಿ ಇತರರು ಇದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">