ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸೌಲಭ್ಯ ಕಲ್ಪಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತೆ :ಕೆ.ರಾಘವೇಂದ್ರ ಹಿಟ್ನಾಳ
- ಲೇಬಗೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ
ಕೊಪ್ಪಳ,: ರಾಜ್ಯದಲ್ಲಿ ಕಮಿಷನ್ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಕಾಲ ಬಂದಿದ್ದು, ಮತದಾರರು ಸುಳ್ಳು ಆಶ್ವಾಸನೆ, ಯಾವುದೇ ಆಮಿಷಕ್ಕೆ ಒಳಗಾಗದೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಮನವಿ ಮಾಡಿದರು.
ತಾಲೂಕಿನ ಲೇಬಗೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಮಾದಿನೂರ, ನರೇಗಲ್, ಹುಚ್ಚಿರೇಶ್ವರ ಕ್ಯಾಂಪ್, ಯತ್ನಟ್ಟಿ, ಓಜನಹಳ್ಳಿ, ದೇವಲಾಪುರ ಗ್ರಾಮದಲ್ಲಿ ಶುಕ್ರವಾರ ಪ್ರಚಾರ ನಡೆಸಿ, ಮತಯಾಚಿಸಿದರು. ಬಡವರಿಗೋಸ್ಕರ ಸುದೀರ್ಘ 65 ವರ್ಷಗಳ ಕಾಲ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಕಲ್ಪಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತೆ. ಇಂದಿನ ಬಿಜೆಪಿ ಸರಕಾರ ದೇಶ ಮತ್ತು ರಾಜ್ಯದ ಜನತೆಗೆ ಸುಳ್ಳು ಆಶ್ವಾಸನೆ ನೀಡುವ ಮೂಲಕ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ಈ ಬಾರಿ ಬಿಜೆಪಿಗರಿಗೆ ತಕ್ಕಪಾಠ ಕಲಿಸಿ ಎಂದರು. ರಾಜ್ಯದಲ್ಲಿ 40 ಪರ್ಸೆಟ್ ಸರಕಾರದ ವಿರುದ್ಧ ಧ್ವನಿ ಎತ್ತುವ ಕಾಲ ಬಂದಿದೆ. ಪ್ರತಿಯೊಂದು ಕಾಮಗಾರಿಯಲ್ಲೂ ಪರ್ಸೆಟ್ ಪಡೆದು ಕಾಮಗಾರಿ ನಡೆಸುವ ಭ್ರಷ್ಟರಿಗೆ ತಕ್ಕಪಾಠ ಕಲಿಸಿ. ರಾಜ್ಯದಲ್ಲಿ ಸುಸಜ್ಜಿತ ಸರಕಾರ ಅಧಿಕಾರಕ್ಕೆ ಬರಬೇಕೆಂಬ ಅಭಿಲಾಷೆ ಎಲ್ಲೆಡೆ ಕೇಳಿಬರುತ್ತಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು ರಾಜ್ಯದ ಉದ್ದಗಲಕ್ಕೂ ವಿಸ್ತಾರಗೊಂಡಿದ್ದು, ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಹೀಗಾಗಿ ನಿಶ್ಚಿತವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಲೇಬಗೇರಿ ಜಿಲ್ಲಾ ಪಂಚಾಯಿತಿಯ ಪ್ರತಿಯೊಂದು ಗ್ರಾಮದಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಿ, ಬ್ರಿಜ್ ಕಂ ಬ್ಯಾರೇಜ್, ಸಿಸಿ ರಸ್ತೆ, ನೀರಾವರಿ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದಕ್ಕಾಗಿ ಸಾವಿರಾರು ಕೋಟಿ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದರು.
ಮಾದಿನೂರು, ನರೇಗಲ್ ಗ್ರಾಮ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಕಳೆದ ಎರಡು ಬಾರಿ ನನಗೆ ಎಷ್ಟು ಮತ ನೀಡಿದ್ದಿರೋ ಈ ಬಾರಿ ಅದಕ್ಕೂ ಹೆಚ್ಚಿನ ಮತ ನೀಡಿ, ಮತ್ತೊಮ್ಮೆ ಬೆಂಬಲಿಸಿ. ಸುಭದ್ರ ಆಡಳಿತಕ್ಕಾಗಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕ ತನ್ನಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ : ಇದೇ ಸಂದರ್ಭದಲ್ಲಿ ಬಿಜೆಪಿ ಸರಕಾರದ ದುರಾಡಳಿತವನ್ನು ಧಿಕ್ಕರಿಸಿ ವಿವಿಧ ಓಜನಹಳ್ಳಿ ಗ್ರಾಮದಲ್ಲಿ ನಲವತ್ತಕ್ಕೂ ಅಧಿಕ ಕಾರ್ಯಕರ್ತರು ಶಾಸಕ ಕೆ.ರಾಘವೇಂದ್ರ ಹಿಟ್ನಾಳರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಪ್ರಸನ್ನ ಗಡಾದ, ರಾಮಣ್ಣ ಚೌಡ್ಕಿ, ನಾಗನಗೌಡ ಮುಂಡರಗಿ, ಮುಖಂಡರಾದ ಸುರೇಶ ದೇಸಾಯಿ, ಶಿವರೆಡ್ಡಿ ಭೂಮಕ್ಕನವರ್, ಶರಣಪ್ಪ ಸಜ್ಜನ, ವಿರುಪಾಕ್ಷಪ್ಪ ನವೋದಯ, ಎಸ್.ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ತೋಟಪ್ಪ ಕಾಮನೂರು, ರಾಮಣ್ಣ ಕಲ್ಲನ್ನವರ್, ಮುತ್ತುರಾಜ್ ಕುಷ್ಟಗಿ, ವಿರುಪಾಕ್ಷಪ್ಪ ಮೋರನಾಳ, ಸಿದ್ದು ಮ್ಯಾಗೇರಿ, ಪರಶುರಾಮ ಮೇದಾರ, ದೇವಪ್ಪ ಕುಟುಗನಳ್ಳಿ, ಉಡಚಪ್ಪ ಬೋವಿ, ಕಿಶೋರಿ ಬೂದನೂರು, ರೇಷ್ಮಾ ಖಾಜಾವಲಿ, ಹನುಮಂತಪ್ಪ ಕಿಡದಾಳ, ಯಮನೂರಪ್ಪ ನಾಯಕ, ಅನಿಲ್ ಮಾದಿನೂರ, ನಿಂಗಜ್ಜ ಶಹಾಪುರ, ಪ್ರವೀಣ ಪಾಟೀಲ್, ಗವಿಸಿದ್ದಪ್ಪ ಹುಳ್ಳಿ ಸೇರಿದಂತೆ ಅನೇಕರು ಇದ್ದರು.
ವರದಿ : ಶಿವಕುಮಾರ ಹಿರೇಮಠ
Tags
ರಾಜಕೀಯ