ನಕಲಿ ಸಿಂಧುತ್ವ' ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಯಣ್ಣ ಆರೋಪಿಸಿದ್ರು
ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ವ್ಯಾಪ್ತಿಯ ನೀರಾವರಿ ಇಲಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಿ.ಪಿ ನಿವಾಸ್ ರವರು ಸರ್ಕಾರಿ ಯದ್ಯೂಗ ಪಡೆಯವ ಸಲುವಾಗಿ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಹುದ್ದೆ ಪಡೆದಿದ್ದು ತಕ್ಷಣವೇ ಇವರ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಜಯಣ್ಣ ತಿಳಿಸಿದ್ರು..
ಪಟ್ಟಣದ ಎಚ್.ಎಲ್.ಬಿ.ಸಿ ವಸತಿ ಗೃಹದಲ್ಲಿ ಸಾಮಾಜಿಕ ಹೋರಾಟಗಾರ ಜಯಣ್ಣ ಮತ್ತು ರೈತ ಮುಖಂಡರು ಸುದ್ದಿಗೋಷ್ಠಿ ನೆಡೆಸಿ ಮಾತನಾಡಿ ಅವರು ಸರ್ಕಾರಕ್ಕೆ ಸುಳ್ಳು ದಾಖಲೆ ನೀಡಿ ಉದ್ಯೋಗದ ಎಂಜಿನಿಯರ್ ಹುದ್ದೆ ಪಡೆಯಲು ಹಿಂದುಳಿದ ವರ್ಗಗಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಸುಳ್ಳು ಆದಾಯ ಪ್ರಮಾಣ ಪತ್ರವನ್ನು ಪಡೆದು ಪ್ರವರ್ಗ: 1-ಎ ಅಡಿ ಮೀಸಲಾತಿ ಮೂಲಕ ಉದ್ಯೋಗ, ಪಡೆದಿದ್ದಾರೆ ಎಂದು ದೂರಿದರು.
ರೈತ ಮುಖಂಡರುಗಳು ಮಾತನಾಡಿ ಇಷ್ಟು ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಪಡೆದಿರುವ ಎಂಜಿನೆಯರ್ ಡಿ.ಪಿ. ನಿವಾಸ್ ತಾಲೂಕಿನ ದೊಡ್ಡನಕಟ್ಟೆ ಪ್ರಥಮ ದರ್ಜೆ ಗುತ್ತಿಗೆದಾರ ಪಾಂಡುರಂಗ ರವರ ಪುತ್ರನಾಗಿದ್ದು ಸರ್ಕಾರಿ ಉದ್ಯೂಗಕ್ಕೆ ಅವರು ಸುಳ್ಳು ದಾಖಲೆ ನೀಡಿ ಉದ್ಯೋಗ ಪಡೆದಿರುವ ಬಗ್ಗೆ ಸಮಗ್ರ ತನಿಖೆ ಯಾಬೇಕು, ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಧಾವೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.
3.18 ಲಕ್ಷ ರು. ವಾರ್ಷಿಕ ಆದಾಯ 2017-18ನೇ ಸಾಲಿನಲ್ಲಿ ಡಿ.ಪಿ.ನಿಮಾಸ್ ಅವರ ತಂದೆ ಕೆ, ಜಿ.ಪಾಂಡುರಂಗ ಅವರು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ ಆಗಿದ್ದರೂ ಕಂದಾಯ ಇಲಾಖೆ ಮೂಲಕ ಕೇವಲ 3 ಲಕ್ಷ ವಾರ್ಷಿಕ ಆದಾಯ ಪ್ರಮಾಣ ಪತ್ರ ಪಡೆಯು ಕೆಪಿಎಸ್‌ಸಿಗೆ ಗಳಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡಿ ವಂಚಿಸಿ ಸರ್ಕಾರಿ ಹುದ್ದೆ ಪಡೆದಿದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈತ ವಿರುದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು..
ಈ ಸಂದರ್ಭದಲ್ಲಿ ರೈತ ಮುಖಂಡರಾದ ನಾಗೇಗೌಡ್ರು, ಕೆ ಆರ್ ಪೇಟೆ ಜಯಣ್ಣ, ಬೂಕನಕರೆ ನಾಗರಾಜು, ವಿಠಲಾಪುರ ಅರುಣ್ ಕುಮಾರ್, ಅಕ್ಕಿ ಮಂಚನಹಳ್ಳಿ ರಾಮೇಗೌಡ, ಚಿಕ್ಕೋನಹಳ್ಳಿ ಕುಮಾರ್, ಸೇರಿದಂತೆ ಮತ್ತಿತ್ತರರು ಇದ್ದರು..
ವರದಿ : ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Tags
ಟಾಪ್ ನ್ಯೂಸ್