ಶ್ರವಣಬೆಳಗೊಳ ವಿಧಾನಸಭೆ ಕ್ಷೇತ್ರದ KRP ಪಕ್ಷದ ಅಭ್ಯರ್ಥಿಯಾಗಿ ಪವಿತ್ರ ಜೆ.ಕೆ ಜಂಬೂರು ಘೋಷಣೆ

 

ದಕ್ಷಿಣ ಕರ್ನಾಟಕದ ಪ್ರಮುಖ ಜೈನ ಯಾತ್ರಾ ಸ್ಥಳವಾದ ಶ್ರವಣಬೆಳಗೊಳ ವಿಧಾನಸಭೆ ಕ್ಷೇತ್ರದಲ್ಲಿ ಬೃಹತ್ ಸಮಾವೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ ರೆಡ್ಡಿಯವರನ್ನು ಸಾವಿರಾರು ಕಾರ್ಯಕರ್ತರು ಮೆರವಣಿಗೆ ಯೊಂದಿಗೆ ಕರೆದೊಯ್ಯುವ ಮೂಲಕ ಶ್ರವಣಬೆಳಗೊಳದ ವಿಶೇಷವಾದ ಕೊಬ್ಬರಿ ಬೆಲ್ಲದ ಹಾರದ ಮೂಲಕ ಸ್ವಾಗತಿಸಿದರು.

ನಂತರ ಬೃಹತ್ ವೇದಿಕೆ ಸಮಾವೇಶ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಮಾವೇಶದಲ್ಲಿ ಶ್ರವಣಬೆಳಗೊಳ ವಿಧಾನಸಭೆ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಪವಿತ್ರ ಜೆ. ಕೆ ಜಂಬೂರು ಘೋಷಣೆ ಮಾಡಿದರು ನಂತರ ಮಾತನಾಡಿ ಪಕ್ಷದ ಪ್ರಮುಖ ಪ್ರಣಾಳಿಕೆಗಳು ಹಾಗೂ ಬಡವರ ಅಭಿವೃದ್ಧಿಗಾಗಿ ಒಂದು ತಳಮಟ್ಟದ ವಿಚಾರಗಳನ್ನು ತುಂಬಿದ ಸಮಾವೇಶದಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ ಸಿ ಹೇಮಲತಾ, ಪಕ್ಷದ ಹಿರಿಯ ಮುಖಂಡರು ಹಾಗೂ ಸಾವಿರಾರು ಪಕ್ಷಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">