ಪಾವಗಡ ವಿಧಾನ ಸಭಾ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿ ನೇರಳೆಕುಂಟೆ ನಾಗೇಂದ್ರ ಕುಮಾರ್ ನಾಮಪತ್ರ ಸಲ್ಲಿಸಿದರು
ಪಾವಗಡ ವಿಧಾನ ಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನೆರಳೆಕುಂಟೆ ನಾಗೇಂದ್ರ ಕುಮಾರ್ ಹಾಗೂ ರಾಜ್ಯ ಮಹಿಳಾ ಘಟಕ ಅಧ್ಯಕ್ಷಣಿ ಹೇಮಲತ ರವರ ಜೊತೆ ಪಕ್ಷದ ಸಾವಿರಾರು ಬೆಂಬಲಿಗರೊಂದಿಗೆ ನಾಗರಕಟ್ಟೆಯಿಂದ ಹಸಿರು ಶಾಲು ಧರಿಸಿ ರೈತನ ಜೀವನಾಡಿಯ ಸಂಕೇತವಾದ ಎತ್ತಿನಗಾಡಿಯಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಆಗಮಿಸಿ ಮೊದಲು ಡಾಕ್ಟರ್ ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ತಾಲ್ಲೂಕು ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೆಂದ್ರಕುಮಾರ್, ಕ್ಷೇತ್ರದ ಯುವಕರು, ಹಿರಿಯರು ,ಅಕ್ಕ ತಂಗಿಯರು ಸಾವಿರಾರು ಸಂಖ್ಯೆಯಲ್ಲಿ ಬಂದು ಹದಿನೈದು ಸಾವಿರ ಮತಗಳಿಂದ ಗೆದ್ದೆಗೆಲುತ್ತೆವೆ ಎಂಬ ಭರವಸೆ ಮೂಡಿಸಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.
ನಂತರ ಪಕ್ಷದ ಮಹಿಳಾ ಘಟಕ ರಾಜ್ಯ ಅಧ್ಯಕ್ಷನಿ ಹೇಮಲತರವರು ಮಾತನಾಡಿದ ಉರಿ ಬಿಸಿಲನ್ನೂ ಲೆಕ್ಕಿಸದೇ ಪಕ್ಷದ ಸಾವಿರಾರು ಕಾರ್ಯಕರ್ತರು ನೋಡಿ 75ವರ್ಷಗಳಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರವನ್ನ ಅನುಭವಿಸಿ ಪಾವಗಡ ತಾಲ್ಲೂಕು ಅತಿಹೆಚ್ಚು ಸಮಸ್ಯೆಗಳನ್ನು ಸಹಿಸಲು ಆಗದೆ ಕಪಿಮುಷ್ಟಿಯಿಂದ ಹೋಸ ಪ್ರತಿಭೆ ಗೆ ಅವಕಾಶ ಕಲ್ಪಿಸಲು ಸಾವಿರಾರು ಮತದಾರರು ಪರಿವರ್ತನೆಯಿಂದ ಬದಲಾವಣೆ ತರಲು ನಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಗೆಲ್ಲಿಸಲ್ಲಿದ್ದಾರೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.....
ವರದಿ:- ಅನಿಲ್ ಯಾದವ್ ಪಾವಗಡ
Tags
ರಾಜಕೀಯ