ಕೂಡ್ಲಿಗಿ-ರಂಜಾನ್: ಸಾಮೂಹಿಕ ಪ್ರಾರ್ಥನೆ ವಿಜಯನಗರ ಕೂಡ್ಲಿಗಿ:ಪಟ್ಟಣದ ಹೊರವಲಯದಲ್ಲಿ,ಎ22ರಂದು ಮುಸ್ಲೀಂ ಭಾಂದವರು ರಂಜಾನ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಿಗ್ಗೆ 8:30ಕ್ಕೆ ಒಂದು ಗುಂಪಿನಿಂದ, 9:30ಕ್ಕೆ ಮತ್ತೊಂದು ಗುಂಪಿನಿಂದ ಸಾಮೂಹಿಕ ನಮಾಜ ಜರುಗಿತು. ಮುಸ್ಲೀಂ ಭಾಂದವರೆಲ್ಲರೂ ಬೆಳಿಗ್ಗೆಯಿಂದಲೇ ಹಬ್ಬದ ಸಡಗರ ಸಂಭ್ರಮದಲ್ಲಿ ಮಿಂದಿದ್ದರು, ಸರ್ವರೂ ಸುಶೀಭ್ರೂತರಾಗಿ ಹೊಚ್ಚ ಹೊಸ ಧಿರಿಸುಗಳೊಂದಿಗೆ ಕಂಗೊಳಿಸುತ್ತಿದ್ದರು.
ಧಾರ್ಮಿಕ ಗುರು(ಮೌಲಾನಾ)ಗಳ ನೇತೃತ್ವದಲ್ಲಿ, ಹಿರಿಯರು, ಕಿರಿಯರು, ಯುವಕರು, ಮಹಿಳೆಯರು, ಮಕ್ಕಳು ಸಾಮೂಹಿಕ ನಮಾಜ್ ಮಾಡಿದರು. ವಿಶ್ವ ಶಾಂತಿ ಹಾಗೂ ಸರ್ವ ಸಂಮೃದ್ಧಿಗಾಗಿ, ಅಲ್ಲಹಾನಲ್ಲಿ ಪ್ರಾರ್ಥಿಸಲಾಯಿತು. ವೈಯಕ್ತಿಕ ಕ್ಷೇಮಾಭಿವೃದ್ಧಿ ಮತ್ತು,ಜಗತ್ತಿನ ಸಕಲ ಜೀವರಾಶಿಗಳ ಕ್ಷೇಮಕ್ಕಾಗಿ
ಸರ್ವರ ಸರ್ವತೋಮುಖ ಅಭಿವೃದ್ಧಿಗಾಗಿ, ಧಾರ್ಮಿಕ ಗುರುಗಳೊಂದಿಗೆ ದೇವರಲ್ಲಿ ಕೋರಲಾಯಿತು.ಇದೇ ಸಂದರ್ಭದಲ್ಲಿ ಧರ್ಮ ಶ್ರದ್ಧಾಳುಗಳಿಗೆ, ಹಾಗೂ ಕೆಲ ಹಿರಿಯರಿಗೆ ಗೌರವ ಸನ್ಮಾನ ಮಾಡಲಾಯಿತು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ವಿ ಮಲ್ಲಾಪರ ನೇತೃತ್ವದಲ್ಲಿ, ಸಿಪಿಐ ವಸಂತ ಅಸೂದೆ. ಹಾಗೂ ಪಿಎಸ್ಐ ಧನುಂಜಯ ಕುಮಾರ ರವರು. ತಮ್ಮ ಸಿಬ್ಬಂದಿಯೊಡಗೂಡಿ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಅಗತ್ಯ ಕ್ರಮ ಜರುಗಿಸಿದ್ದರು.
ವರದಿ : ವಿ.ಜಿ.ವೃಷಭೇಂದ್ರ
Tags
ರಾಜ್ಯ