Kudligi : ಬಸವೇಶ್ವರ ಸಮಾನತೆಯ ಹರಿಕಾರ,ಜ್ಞಾನ ಜ್ಯೋತಿ- ಬ್ಯಾಳಿ ವಿಜಯಕುಮಾರಗೌಡ

ಬಸವೇಶ್ವರ ಸಮಾನತೆಯ ಹರಿಕಾರ,ಜ್ಞಾನ ಜ್ಯೋತಿ- ಬ್ಯಾಳಿ ವಿಜಯಕುಮಾರಗೌಡ

ವಿಜಯನಗರ  ಜಿಲ್ಲೆ ಕೂಡ್ಲಿಗಿ: ಪಟ್ಟಣದ ಶ್ರೀ ಪೇಟೆಬಸವೇಶ್ವರ ದೇವಸ್ಥಾನದಲ್ಲಿ,ಎ23ರಂದು ಶ್ರೀಪೇಟೆಬಸವೇಶ್ವರ ನಗರದ ದೈವಸ್ತರಿಂದ ಶ್ರೀಬಸವೇಶ್ವರರ ಜಯಂತಿ ಆಚರಿಸಲಾಯಿತು. ಆಧ್ಯತ್ಮ ಚಿಂತಕರಾ ಹೆಚ್.ಎಮ್.ಚಿದಾನಂದಸ್ವಾಮಿ ನೇತೃತ್ವದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ, ಮತ್ತು ಜೋಡೆತ್ತುಗಳಿಗೆ ಪೂಜೆ ಸಲ್ಲಿಸಲಾಯಿತು. ಬ್ಯಾಳಿ ವಿಜಯಕುಮಾರಗೌಡ ಮಾತನಾಡಿದರು, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಬೇಕು.  ಸಮಾಜದಲ್ಲಿ ಸರ್ವರೂ ಸಮಾನರು, ಕಾಯಕವೇ ಕೈಲಾಸ ಎಂಬ ತತ್ವ ಸಾರಿದ ಹರಿಕಾರ ಬಸವೇಶ್ವರ. ಈ ಮೂಲಕ ಅವರು ಇಡೀ ಜಗತ್ತಿನಲ್ಲಿ, ಭಾರತದ ಪ್ರಭಾವಿ ಕ್ರಾಂತಿಕಾರಿ ಶರಣರೆಂದು ಗುರುತಿಸಿಕೊಂಡಿದ್ದರು ಎಂದರು. ಹಿರಿಯ ನಾಗರೀಕರಾದ ನಾಗನಗೌಡ್ರು , ವೀರಶೈವ ಸಮಾಜದ ಮುಖಂಡ ಕೋಗಳಿ ಮಂಜುನಾಥ ಮಾತನಾಡಿದರು.ಹಿರಿಯ ನಾಗರೀಕರು ಮಹಿಳೆಯರು ಯುವಕರು, ಶ್ರೀಬಸವೇಶ್ವರ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. 
ಆಧ್ಯಾತ್ಮ ಚಿಂತಕರಾದ ಹೆಚ್.ಎಮ್.ಚಿದಾನಂದ ಸ್ವಾಮಿಯವರನ್ನು, ವೀರಶೈವ ಸಮಸ್ಥ ದೈವಸ್ಥರ ಪರವಾಗಿ, ಗೌರವಿಸಿ ಸನ್ಮ‍ಾನಿಸಲ‍ಾಯಿತು.
ಶ್ರೀಪೇಟೆ ಬಸವೇಶ್ವರ ನಗರದ ದೈವಸ್ಥರು, ವೀರಶೈವ ಸಮಾಜದ ಮುಖಂಡರು, ಹಿರಿಯ ನಾಗರೀಕರು,ಯುವಕರು, ಮಕ್ಕಳು ಮಹಿಳೆಯರು ಈ ಸಂದರ್ಭದಲ್ಲಿ ಇದ್ದರು.
ವರದಿ :  ವಿ.ಜಿ.ವೃಷಭೇಂದ್ರ 
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">