ಎನ್ ಸಿ ಪಿ ಅಭ್ಯರ್ಥಿ ಆರ್ ಹರೀಶ್ ಸುದ್ದಿಗೋಷ್ಠಿ : ರೈತರಿಗೆ ಗೊಬ್ಬರ, ಯುವಕರಿಗೆ ಉದ್ಯೋಗದ ಭರವಸೆ
ಕುಕನೂರು : ರೈತರಿಗೆ ಪ್ರತೀ ವರ್ಷ ಜೂನ್ ಮಾಹೇಯಲ್ಲಿ ಉಚಿತ ಗೊಬ್ಬರ ನೀಡುತ್ತೇವೆ, ಜೊತೆಗೆ ತಾಲೂಕಿನಲ್ಲಿ ಕಾರ್ಖಾನೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್ ಹರೀಶ್ ಹೇಳಿದರು.
ಕುಕನೂರು ಪಟ್ಟಣದ ಎನ್ ಸಿ ಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್ ಸಿ ಪಿ ರಾಜ್ಯ ಅಧ್ಯಕ್ಷ ಹಾಗೂ ಯಲಬುರ್ಗಾ ಕ್ಷೇತ್ರದ ಅಭ್ಯರ್ಥಿ ಆರ್ ಹರೀಶ್, ರೈತರಿಗೆ ಉಚಿತ ಗೊಬ್ಬರ ಮತ್ತು ಯುವಕರಿಗೆ ಉದ್ಯೋಗದ ಭರವಸೆ ಇದರ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಗುಂಪುಗಳಿಗೆ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು.
ರೈತರನ್ನು, ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಇತರ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ, ಜನರಿಗಾಗಿ ದುಡಿಯುವ ಪ್ರಾಮಾಣಿಕವಾಗಿ ಸೇವೆ ಮಾಡುವ ನಾಯಕರ ಅವಶ್ಯಕತೆ ಇದೆ, ಹೀಗಾಗಿ ನಾನು ಇಲ್ಲಿ ಸ್ಪರ್ಧೆ ಮಾಡಿದ್ದು ಜನರಿಗಾಗಿ ಪ್ರಾಮಾಣಿಕ ಸೇವೆ ಮಾಡಲು ಬಂದಿದ್ದೇನೆ ಎಂದರು.
ರೈತರಿಗೆ ಗೊಬ್ಬರ, ಯುವಕರಿಗೆ ಉದ್ಯೋಗ, ಮಹಿಳಾ ಸ್ತ್ರೀ ಶಕ್ತಿ ಗುಂಪುಗಳಿಗೆ ಆರ್ಥಿಕ ಸಹಾಯದ ಭರವಸೆಗಳನ್ನು ಒಂದು ವರ್ಷದಲ್ಲಿ ಈಡೇರಿಸುತ್ತೇನೆ ಎಂದು ವಾಗ್ವಾದದ ಪ್ರಮಾಣಪತ್ರ ಮಾಧ್ಯಮದವರಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್ ಸಿ ಪಿ ಅಧ್ಯಕ್ಷ ಹನುಮಂತಪ್ಪ ಕುರಿ, ತಾಲೂಕು ಅಧ್ಯಕ್ಷರು, ಇತರರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ