Kushtagi-ಕುತೂಹಲ ಕೆರಳಿಸಿದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣೆ

 

ಕುತೂಹಲ ಕೆರಳಿಸಿದ  ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಮೇ 10 2023  ಘೋಷಣೆ ಆಗುತ್ತಿದ್ದಂತೆ  ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಕಾವು ಬೇಸಿಗೆಯ ಬಿಸಿಲಿನಂತೆ ಹೆಚ್ಚುತ್ತಿದೆ ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ  ಕ್ಷೇತ್ರಗಳು ಬರುತ್ತವೆ

ಕೊಪ್ಪಳ ಗಂಗಾವತಿ ಕನಕಗಿರಿ ಯಲಬುರ್ಗಾ ಕುಷ್ಟಗಿ ಈ ಎಲ್ಲಾ ಕ್ಷೇತ್ರಗಳು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು ಇದರಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೇತ್ರವೆಂದರೆ  ಅದು  ಕುಷ್ಟಗಿ ವಿಧಾನಸಭಾ ಕ್ಷೇತ್ರ

ಈ ಕ್ಷೇತ್ರವು  ಬಾರಿ ವೈಶಿಷ್ಟ್ಯತೆ ಪಡೆದಿದೆ ಹಾಗೂ ಕುತೂಹಲ ಕೆರಳಿಸಿದೆ  ಯಾಕಂದರೆ  ಐದು ವರ್ಷಕ್ಕೊಮ್ಮೆ ಇಲ್ಲಿನ ಮತದಾರ ಮಹಾಪ್ರಭುಗಳು ಒಮ್ಮೆ ಒಬ್ಬರನ್ನು ಆಯ್ಕೆ ಮಾಡಿದರೆ ಮರಳಿ ಅವರನ್ನು ಆಯ್ಕೆ ಮಾಡುವುದಿಲ್ಲ ಎಂಬ ಹಳೆ ಸಂಪ್ರದಾಯ

1952 ರಿಂದ ಇಲ್ಲಿಯವರೆಗೂ ಎರಡು ಬಾರಿ ಯಾರು ಆಯ್ಕೆಯಾಗಿಲ್ಲ  ಪುನಃ ಆಯ್ಕೆ ಬಯಸಿ ಸ್ಪರ್ಧಿಸಿದರು ಸೋಲನ್ನು ಕಾಣುತ್ತಾರೆ ಹೊರತು ಗೆದ್ದ ಇತಿಹಾಸ ಇಲ್ಲ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಚುನಾವಣೆಯ ರಣತಂತ್ರ ರೂಪಿಸಿದರು ಕೂಡ ಗೆಲುವು ಅಷ್ಟು ಸುಲಭವಲ್ಲ  ಕುಷ್ಟಗಿ ವಿಧಾನಸಭಾ ಕ್ಷೇತ್ರ ದಲ್ಲಿ ಈಗಾಗಲೆ ತಾಲೂಕಿನಲ್ಲಿ ವಿವಿಧ ಪಕ್ಷದ ಆಕಾಂಕ್ಷಿಗಳು ಹಾಗೂ ಅಭ್ಯರ್ಥಿಗಳು ಬಿರುಸಿನ  ಪ್ರಚಾರ ಕಾರ್ಯ ಮತ್ತು ಗೆಲುವಿನ ತಂತ್ರ ರೂಪಿಸುತ್ತಿದ್ದು  ಪಕ್ಷದಿಂದ ಪಕ್ಷಕ್ಕೆ ಜಿಗೀವರ ಸಂಖ್ಯೆ ಬರದಿಂದ ಸಾಗಿದ್ದು ಮತದಾರರ ಚಿತ್ತ ಯಾರ ಹತ್ತ ಅನ್ನುವಂತಾಗಿದೆ


 ಈ ಕ್ಷೇತ್ರದಲ್ಲಿ ಕಾಂಗ್ರೆಸಿನಿಂದ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಕಾಂಗ್ರೆಸ್ಸಿನ ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿದ್ದು  ಅಮರೇಗೌಡ ಪಾಟೀಲ ಬಯ್ಯಾಪುರ ನಿಟ್ಟಿಸಿರು ಬಿಟ್ಟಂತಾಗಿದೆ  ಟಿಕೆಟ್ ಬಹುತೇಕ ಕಾಂಗ್ರೆಸಿನ  ಹೈಕಮಾಂಡ್ ಖಚಿತಪಡಿಸಿದೆ 

 ಭಾರತೀಯ ಜನತಾ ಪಕ್ಷದಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಮತ್ತು ಬಿಜೆಪಿಯ ತಾಲೂಕು ಅಧ್ಯಕ್ಷ ಹಾಗೂ ಪ್ರಬಲ ವೀರಶೈವ ಲಿಂಗಾಯತ ನಾಯಕ  ಬಸವರಾಜ್ ಹಳ್ಳೂರ್ ಪ್ರಬಲ  ಆಕಾಂಕ್ಷಿಗಳಾಗಿದ್ದು ಇವರಿಬ್ಬರಲ್ಲಿ ಬಿಜೆಪಿ ಟಿಕಿಟಿಗಾಗಿ  ನೇರ ಹಣಾಹಣಿ ಏರ್ಪಟ್ಟಿದೆ 

ದೊಡ್ಡನಗೌಡರ ಹೆಸರು  ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಬಂದ ಸಂದರ್ಭದಲ್ಲಿ ಹಾಲಿ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೊಡ್ಡನಗೌಡರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಹೇಳುವ ಮೂಲಕ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಇದ್ದು  ಇನ್ನು ಬಿಜೆಪಿ ಪಟ್ಟಿ ಬಿಡುಗಡೆಯಾಗಿಲ್ಲ

 ಇತ್ತ  ಬಸವರಾಜ ಹಳ್ಳೂರು  ರವರು  ಬಿಜೆಪಿ ರಾಜ್ಯಮಟ್ಟದ ನಾಯಕರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದು ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ  

 ಜಾತ್ಯತೀತ ಜನತಾದಳದಿಂದ ತುಕಾರಾಂ ಸುರುವೆ ಇವರೇ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಾಲೂಕಿನಲ್ಲಿ ಪಂಚರತ್ನ  ಕಾರ್ಯಕ್ರಮಕ್ಕೆ ಆಗಮಿಸಿದಾಗ  ಘೋಷಣೆ ಮಾಡಿ ಹೋಗಿದ್ದಾರೆ

 ಇನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಮೊನ್ನೆ ತಾನೆ ಜೆಡಿಎಸ್ ಅನ್ನು ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ನಿವೃತ್ತ ತಹಶೀಲ್ದಾರ್  ಚಂದ್ರಶೇಖರಯ್ಯ ಹಿರೇಮಠ್ ಇವರೇ ಅಭ್ಯರ್ಥಿಯಾಗುವ ಸಂಭವ ಇದ್ದು ಪಕ್ಷದ ಸಂಸ್ಥಾಪಕರಿಂದ ಇವರ ಹೆಸರು ಘೋಷಣೆ ಆಗುವುದೊಂದೇ ಬಾಕಿ ಇದೆ 

 ಬಿ ಎಸ್ ಪಿ ಪಕ್ಷದಿಂದ ಶಿವಪುತ್ರಪ್ಪ ಗುಮಗೇರಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು  ಈಗಲೂ ಇವರೆ ಅಭ್ಯರ್ಥಿಯಾಗುವುದು ಖಚಿತವಾಗುತ್ತಿದ್ದಂತೆ ತಾಲೂಕಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ

 ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ರೈತಪರ  ಹೋರಾಟಗಾರ ಮಹಮ್ಮದ್ ನಜೀರಸಾಬ್  ಮೂಲಿಮನಿ ಸ್ಪರ್ಧೆ ಬಯಸಿದ್ದು ಇವರೆ ಅಭ್ಯರ್ಥಿಯಾಗುವ ವಿಶ್ವಾಸವಿದೆ  ಯನ್ನುತ್ತಾರೆ

 ಕರ್ನಾಟಕ ರಾಷ್ಟ್ರೀಯ ಸಮಿತಿಯ ಪಕ್ಷದಿಂದ ಸುರೇಶ್ ಬಲಕುಂದಿ ಅವರ ಹೆಸರು ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿಕಷ್ಟ ರೆಡ್ಡಿಯವರು ಈಗಾಗಲೆ ಅವರ ಹೆಸರನ್ನು  ಘೋಷಣೆ ಮಾಡಿದ್ದಾರೆ

 ಅಮ್ ಆದ್ಮಿ ಪಕ್ಷದಿಂದ  ಅಭ್ಯರ್ಥಿ ಯಾರೆಂಬುದು ಇನ್ನು ತಿಳಿದು ಬಂದಿಲ್ಲ

 ಏನೇ ಆಗಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ಮಾತ್ರ ಹಾಲಿ ಮತ್ತು ಮಾಜಿ ಶಾಸಕರಿಗೆ ಪ್ರತಿಷ್ಠಿತ ಕಣವಾಗಿದೆ ಸತತ ಎರಡನೇ ಬಾರಿಗೆ ನಾನು ಗೆದ್ದೆ  ಗೆಲ್ಲುತ್ತೇನೆ ಎಂದು ಹಾಲಿ ಶಾಸಕರು ಹೇಳುತ್ತಿದ್ದರೆ ಎರಡು ಬಾರಿ ಗೆದ್ದಿದ್ದು  ಅದು ಇತಿಹಾಸದ ಪುಟಗಳಲ್ಲಿ ಇಲ್ಲ ಎಂದು ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಹಾಲಿ ಶಾಸಕರೆ ಪಂಚ್ ಕೊಡುತ್ತಿದ್ದಾರೆ.

 ಒಟ್ಟು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 2,55,000 ಮತದಾರರು ಹೊಂದಿದ್ದು ಇದರಲ್ಲಿ ಪುರುಷ ಮತದಾರರು  1,15924 ಮಹಿಳಾ ಮತದಾರರು 1,14,334 ಜಾತಿ ಲೆಕ್ಕಾಚಾರ ಪ್ರಕಾರ ವೀರಶೈವ ಲಿಂಗಾಯತ ಒಳಪಂಗಡ ಸೇರಿ 80000 ಪರಿಶಿಷ್ಟ ಜಾತಿ ವರ್ಗದ 36,000 ಕುರುಬ ಮತದಾರರು 46,000 ಪರಿಶಿಷ್ಟ ಪಂಗಡ 38,000 ಮುಸ್ಲಿಂ 30,000 ಇತರೆ 25,000 ಜಾತಿಯ ಸಮೀಕರಣ ಪ್ರಕಾರ 2,55,000 ಮತದಾರನು ಹೊಂದಿರುವಂತ ಕುಷ್ಟಗಿ ವಿಧಾನಸಭಾ ಕ್ಷೇತ್ರ ರಾಜಕೀಯ ರಣರಂಗ ಶುರುವಾಗಿದೆ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ರಾಜಕೀಯ ಕಾಳಗ ಜೋರಾಗಿದ್ದು ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದ್ದರೆ ಆ ಪಕ್ಷದಿಂದ ಈ ಪಕ್ಷಕ್ಕೆ ಈ ಪಕ್ಷದಿಂದ ಆ ಪಕ್ಷಕ್ಕೆ ಜಿಗಿಯವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ ಮೇ 10 2023 ಬುಧವಾರ ದಿವಸ ಕುಷ್ಟಗಿ ಕ್ಷೇತ್ರದ ಮತದಾರ ಬಾಂಧವರು ಇವರ ಹಣೆಬರಹವನ್ನು ನಿರ್ಧರಿಸಲಿದ್ದಾರೆ ಕಳೆದ ಚುನಾವಣೆಯಲ್ಲಿ ಬಹುತೇಕ ಲಿಂಗಾಯತ ಸಮುದಾಯದವರು ಅಮರೇಗೌಡ ಪಾಟೀಲ ಬಯ್ಯಾಪುರ ಜೊತೆ ಗುರುತಿಸಿಕೊಂಡಿದ್ದರು ಅವರಿಗೆ ಗೆಲುವು ಸುಲಭವಾಗಿತ್ತು ಈ ಬಾರಿ ಕ್ಷೇತ್ರದಲ್ಲಿ ಲಿಂಗಾಯತರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು  ದಿನದಿಂದ ದಿನಕ್ಕೆ ಬಿಜೆಪಿಯತ್ತ ಮುಖ ಮಾಡುತ್ತಿದ್ದು ಕಾಂಗ್ರೆಸ್ಸಿಗೆ  ನುಂಗಲಾರದ ತುತ್ತಾಗಿದೆ.

 ದೊಡ್ಡನಗೌಡ ಎಚ್ ಪಾಟೀಲ್ ಅವರು ಎಲ್ಲಾ ಸಮುದಾಯದ ಮತಗಳನ್ನು ಹೇಗೆ ಹಿಡಿದಿಟ್ಟುಕೊಂಡು ಚುನಾವಣೆಯ ಕದನ ಕುತೂಹಲದೊಂದಿಗೆ ಗೆಲುವಿನ ನಗೆ ಬೀರುತ್ತಾರೆ ಎಂಬುದು  ಕಾದು ನೋಡಬೇಕಾಗಿದೆ

 ಶ್ರವಣಕುಮಾರ ಅಂಗಡಿ ಸಿದ್ದಿ ಟಿವಿ ವರದಿಗಾರರು ಕುಷ್ಟಗಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">