ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಚುರುಕುಗೊಂಡ ವಾಹನಗಳ ತಪಾಸಣೆ
ರಾಜ್ಯದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಇಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಾಗಿರ್ ಗುಡದೂರು , ಕ್ಯಾದಗುಂಪಿ , ಕಿಲ್ಲಾರಹಟ್ಟಿ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮಾನ್ಯ ಶ್ರೀ ಶಿವಪ್ಪ ಸುಬೇದಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಕುಷ್ಟಗಿ ರವರು ಭೇಟಿ ನೀಡಿದವರು.
ಈ ವೇಳೆ ಬಾದಿಮನಾಳ, ಕ್ಯಾದಗುಂಪಿ , ಕಿಲ್ಲಾರಹಟ್ಟಿ ತಪಾಸಣಾ ಕೇಂದ್ರ ( ಚೆಕ್ ಪೋಸ್ಟ್ ) ಗಳಿಗೆ ಭೇಟಿ ನೀಡಿ ವಿಧಾನಸಭಾ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್ ಪ್ರಾರಂಭಿಸಲಾಗಿದ್ದು , ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕುರಿತು ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಮಾಹಿತಿ ಪಡೆದುಕೊಂಡರು ನಂತರ ಬರುವ ವಾಹನಗಳನ್ನು ಅಧಿಕಾರಿಗಳೊಂದಿಗೆ ತಾವೇ ಖುದ್ದಾಗಿ ತಪಾಸಣೆ ಮಾಡಿದರು ಹಾಗೂ ಚೆಕ್ ಪೋಸ್ಟ್ ನಲ್ಲಿ ಬರುವ ಪ್ರತಿ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು ಹಾಗೂ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಸಿಬಂದಿ ಗಳಾದ ಸಂಗಪ್ಪ , ಕಲ್ಲಪ್ಪ , ಚೆಕ್ ಪೋಸ್ಟ್ ತನಿಖಾ ಅಧಿಕಾರಿಗಳು,ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ಸಿಬಂದಿ ಹಾಗೂ ವಿಡಿಯೋ ಗ್ರಾಫರ್ ಇದ್ದರು, ಐ ಇ ಸಿ ಸಂಯೋಜಕರು ಹಾಗೂ ಇನ್ನಿತರು ಭಾಗವಹಿಸಿದ್ದರು.
ಶ್ರವಣಕುಮಾರ ಅಂಗಡಿ ಸಿದ್ದಿ ಟಿ ವಿ ವರದಿಗಾರರು ಕುಷ್ಟಗಿ
Tags
ರಾಜಕೀಯ