ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯ 12 ದಿವಸ ಬಾಕಿ ಇರುವಾಗಲೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ದೊಡ್ಡನಗೌಡ ಎಚ್ ಪಾಟೀಲ್ ಪರವಾಗಿ ಅವರ ಧರ್ಮಪತ್ನಿ ಲಕ್ಷ್ಮಿ ದೇವಿ ಡಿ ಪಾಟೀಲ್ ಕುಷ್ಟಗಿ ನಗರದ ವಿವಿಧ ವಾರ್ಡ್ ಗಳಿಗೆ ಸಂಚರಿಸಿ ಮನೆ ಮನೆಗೆ ತೆರಳಿ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಮತ ಶಿಕಾರಿಗೆ ಮುಂದಾಗಿದ್ದಾರೆ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿಪರ ಯೋಜನೆಗಳನ್ನು ಜನರ ಬಳಿ ತೆರಳಿ ಪರಿವರ್ತನೆ ಮಾಡುತ್ತಿದ್ದು ಬಿಜೆಪಿ ಗೆಲುವಿಗಾಗಿ ಅಗಲಿರಳು ಶ್ರಮಿಸುತ್ತಿದ್ದಾರೆ.
ಮೇ 10ರಂದು ನಡೆಯುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸರಳ ಸಜ್ಜನ ವ್ಯಕ್ತಿ ಯಾದ ಅಭಿವೃದ್ಧಿಯ ಪರ ಚಿಂತಕರು ನನ್ನ ಪತಿವರಾದ ದೊಡ್ಡನಗೌಡ ಎಚ್ ಪಾಟೀಲ್ ಅವರಿಗೆ ಮತವನ್ನು ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾದ ಪರಿಮಳ ಎಸ್ ಶೆಟ್ಟರ್ ಇನ್ನೂ ಅನೇಕ ಮಹಿಳಾ ಮಹನೀಯರು ಲಕ್ಷ್ಮಿ ದೇವಿ ಡಿ ಪಾಟೀಲರಿಗೆ ಸಾತ್ ನೀಡಿದರು
ಶ್ರವಣಕುಮಾರ್ ಅಂಗಡಿ ಸಿದ್ದಿ ಟಿವಿ ಕುಷ್ಟಗಿ
ಸಿದ್ದಿ ಟಿವಿ