Kushtagi : ಪಟ್ಟಲಚಿಂತಿ ಗ್ರಾಮದಲ್ಲಿ ನರೇಗಾ ಕೂಲಿಕಾರರಿಂದ ಮೊಳಗಿದ ಬೃಹತ್ ಮತದಾನ ಜಾಗೃತಿ

 ಪಟ್ಟಲಚಿಂತಿ ಗ್ರಾಮದಲ್ಲಿ ನರೇಗಾ ಕೂಲಿಕಾರರಿಂದ ಮೊಳಗಿದ ಬೃಹತ್ ಮತದಾನ ಜಾಗೃತಿ

ವಿಧಾನಸಭಾ ಚುನಾವಣೆ-2023 ರ ಅಂಗವಾಗಿ ಮತದಾನ ಜಾಗೃತಿಗಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ  ಮಾಲಗಿತ್ತಿ ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ಕೂಲಿಕಾರರಿಂದ ಮತದಾನ ಜಾಗೃತಿ ಕಾರ್ಯಕ್ರಮ ಕ್ಕೆ  ಮಾನ್ಯ ಸ್ವೀಟ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹನುಮಂತಗೌಡ ಪಾಟೀಲ್ ರವರು  ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಚುನಾವಣೆಯನ್ನು ಎಲ್ಲರೂ ಹಬ್ಬದಂತೆ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ವಿನೂತನವಾಗಿ ಸ್ವೀಪ್‌ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದು  ಮಾಲಗಿತ್ತಿ  ಗ್ರಾಮದ ನರೇಗಾ ಕೂಲಿಕಾರರಿಂದ ಶಾಲಾ ಆವರಣದಲ್ಲಿ ಮತದಾನ ಜಾಗೃತಿ ಹಾಗೂ  ಬೃಹತ್ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ಮಾಲಗಿತ್ತಿ  ಗ್ರಾಮ ಪಂಚಾಯತಿ ವತಿಯಿಂದ ಹಾಗೂ ನರೇಗಾ ಕೂಲಿಕಾರದಿಂದ ಆಯೋಜಿಸಿರುವ ಈ ಒಂದು ಕಾರ್ಯಕ್ರಮ ಅಭೂತಪೂರ್ವಾಗಿದ್ದು ಇದೇ ರೀತಿ ಎಲ್ಲರೂ ಮೇ ೧೦ ರಂದು ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ  ಮತದಾನ  ಮಾಡುವ ಮೂಲಕ  ಶೇಕಡಾ 100 ರಷ್ಟು ಮಾಡಿ ಯಶಸ್ವಿ ಮಾಡಬೇಕೆಂದು ಕರೆ ನೀಡಿದರು.

ನಂತರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ *ಬಸವರಾಜ್ ಸಂಕನಾಳ* ರವರು ಮಾತನಾಡಿ ಮತದಾನ ಜಾಗೃತಿ‌ *ಹೆಂಡ್ ಔಟ್ಸ್* ಗಳನ್ನು ಹಿಡಿದುಕೊಂಡು ಮತದಾನದ ಮಹತ್ವವನ್ನು ಸಾರುವ  *ಜಿಂಗಲ್ಸ್* ಗಳನ್ನು ಸಹ ಪ್ರಸಾರ ಮಾಡುವ ಮೂಲಕ ಅರಿವು ಮೂಡಿಸಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ರಫೀಕ್, ಶನ್ಮುಖಪ್ಪ ,ಹನುಮಂತ , ತಿಮಣ್ಣ , ಮಾರುತಿ ಶೈಲಾ ಶ್ರಿ NRLM ಯೋಜನೆಯ ಸಿಬ್ಬಂದಿಗಳಾದ  ಶೈಲ ಶ್ರೀ , ಶಕುಂತಲಾ , ಹಾಗೂ ಆಶಾ ಕಾರ್ಯಕರ್ತೆಯರ, ಹಾಗೂ ಕಾಯಕ ಬಂದುಗಳು ಮತ್ತು ಕೂಲಿಕಾರ್ಮಿಕರು ಐ ಇ ಸಿ ಸಂಯೋಜಕರು ಉಪಸ್ಥಿತರಿದ್ದರು.

 ಶ್ರವಣ್ ಕುಮಾರ್ ಅಂಗಡಿ, ಸಿದ್ದಿ ಟಿವಿ, ಕುಷ್ಟಗಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">